Viral Video: ನೀರಿನೊಳಗೆ ದೈತ್ಯಾಕಾರದ ಅನಕೊಂಡಾ ನೋಡಿ ಬೆರಗಾದ ನೆಟ್ಟಿಗರು! ವಿಡಿಯೋ 1 ಮಿಲಿಯನ್ ವ್ಯೂವ್ಸ್

ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ವಿವಿಧ ಪ್ರಾಣಿಗಳ ಪ್ರಭೇದಗಳನ್ನು ಗುರುತಿಸುವ ಸಲುವಾಗಿ ಜಗತ್ತಿನಾದ್ಯಂತ ಸಂಚರಿಸುವ ಬ್ರಿಯಾನ್ ಬಾರ್ಗ್ರೇಸ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Viral Video: ನೀರಿನೊಳಗೆ ದೈತ್ಯಾಕಾರದ ಅನಕೊಂಡಾ ನೋಡಿ ಬೆರಗಾದ ನೆಟ್ಟಿಗರು! ವಿಡಿಯೋ 1 ಮಿಲಿಯನ್ ವ್ಯೂವ್ಸ್
ಅನಕೊಂಡಾ
Edited By:

Updated on: Jul 25, 2021 | 10:04 AM

ಹಾವುಗಳೆಂದರೆ ಭಯ ಆಗುವುದು ಸಹಜ. ಅದರಲ್ಲಿಯೂ ಅನಕೊಂಡ ಹಾವಿನಂತಹ ಭಯಂಕರ ಹಾವುಗಳ ಹೆಸರು ಕೇಳಿದಾಕ್ಷಣವೇ ಹೆದರುತ್ತೇವೆ. ಅಂಥಹುದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನೀರಿನೊಳಗೆ ದೈತ್ಯಾಕಾರದ ಅನಕೊಂಡಾ ನಾಲಿಗೆ ಸುಳಿಯುತ್ತಿದೆ. ನೀರಿನೊಂದಿಗೆ ಆನಂದಿಸುತ್ತಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.

ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ವಿವಿಧ ಪ್ರಾಣಿಗಳ ಪ್ರಭೇದಗಳನ್ನು ಗುರುತಿಸುವ ಸಲುವಾಗಿ ಜಗತ್ತಿನಾದ್ಯಂತ ಸಂಚರಿಸುವ ಬ್ರಿಯಾನ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅನಕೊಂಡಾವು ನೀರಿನ ಒಳಗೆ ಆನಂದಿಸುತ್ತಿದೆ ಎಂದು ವಿಡಿಯೋ ಹಂಚಿಕೊಳ್ಳಲಾಗಿದೆ.

ವಿಡಿಯೋದಲ್ಲಿ ಗಮನಿಸುವಂತೆ ದೈತ್ಯಾಕಾರದ ಅನಕೊಂಡಾ ನೀರಿನೊಳಗೆ ಇರುವುದನ್ನು ನೋಡಬಹುದು. ನೀರಿನಲ್ಲಿ ನಾಲಿಗೆ ಸುಳಿಯುತ್ತಿದೆ. ಕೆಲವರು ವಿಡಿಯೋ ನೋಡಿ ಭಯಗೊಂಡಿದ್ದಾರೆ. ಇನ್ನು ಕೆಲವರು ಆಶ್ಚರ್ಯವಾಗುತ್ತಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳಲಾಗುತ್ತಿದ್ದಂತೆಯೇ 1 ಮಿಲಿಯನ್​ಗಿಂತಲೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳು ಲಭ್ಯವಾಗಿವೆ. ನೀರಿನೊಳಗಿರುವ ದೈತ್ಯಾಕಾರದ ಅನಕೊಂಡಾ ವಿಡಿಯೋ ಇದೀಗ ಭಾರೀ ಸುದ್ದಿಯಲ್ಲಿದೆ.

ಇದನ್ನೂ ಓದಿ:

ಕಾಳಿಂಗ ಸರ್ಪಗಳು ದುರ್ಬಲ ಹಾವುಗಳನ್ನೇ ತಮ್ಮ ಆಹಾರ ಮಾಡಿಕೊಂಡಿರುವುದು ನಿಮಗೆ ಗೊತ್ತಾ?

Viral Video: ಹಾವು- ಮುಂಗುಸಿ ನಡುವೆ ಜಟಾಪಟಿ; ಗೆದ್ದವರಾರು? ಸೋತವರಾರು?

Published On - 10:00 am, Sun, 25 July 21