Anand Mahindra : ಮಹೀಂದ್ರಾ ಗ್ರೂಪ್ನ ಅಧ್ಯಕ್ಷ ಆನಂದ ಮಹೀಂದ್ರಾ ಆಗಾಗ ಆಸಕ್ತಿಕರ, ಸಂದೇಶಾತ್ಮಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ. ಈಗಿಲ್ಲಿ ಇವರು ಹಂಚಿಕೊಂಡ ವಿಡಿಯೋ ಅನ್ನು ಒಂದು ಲಕ್ಷ ಜನ ವೀಕ್ಷಿಸಿದ್ದಾರೆ. ಬೆಳೆದು ನಿಂತ ಒಂದು ಬೃಹತ್ ಮರವನ್ನು ಮೂವರು ಬುಡಸಮೇತ ಉರುಳಿಸುತ್ತಾರೆ. ಅದು ಬೀಳುತ್ತಿದ್ದಂತೆ ಅವರೊಳಗಿನ ಒಬ್ಬನನ್ನು ತನ್ನ ಬುಡದಿಂದಲೇ ಮೀಟಿ ಮೇಲಕ್ಕೆ ಹಾರಿಸಿ ಕೆಳಕ್ಕೆ ಬೀಳಿಸುತ್ತದೆ ಮರ. ಬೀಸಿ ಒಗೆದ ರಭಸಕ್ಕೆ ಆತ ತೀವ್ರವಾಗಿಯೇ ಗಾಯಗೊಂಡಿರುವ ಸಾಧ್ಯತೆ ಇದೆ.
If you cut down trees, they won’t take it lying down ??????pic.twitter.com/TekNZiQSTF
ಇದನ್ನೂ ಓದಿ— anand mahindra (@anandmahindra) August 23, 2022
ಪ್ರಕೃತಿಯನ್ನು ತಡವಿದರೆ ಅದು ಆಗಿಂದಾಗಲೇ ಸೇಡು ತೀರಿಸಿಕೊಳ್ಳದೆ ಬಿಡುವುದಿಲ್ಲ ಎಂಬ ಸಂದೇಶವನ್ನು ಈ ವಿಡಿಯೋ ನೀಡಿದೆ ಎಂದು ಆನಂದ ಹೇಳಿದ್ದನ್ನು ನೆಟ್ಟಿಗರು ಒಪ್ಪಿದ್ದಾರೆ. 721 ರೀಟ್ವೀಟ್ಗೆ ಈ ಪೋಸ್ಟ್ ಒಳಗಾಗಿದೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:49 pm, Tue, 23 August 22