ಹೆದ್ದಾರಿಯ ಮೇಲೆ ಮಹಿಂದ್ರ ಅವರ XUV500 ಮಾತ್ರ ಹುಲಿಯಲ್ಲ, ಎರಡೆರಡು ನೈಜ ಹುಲಿಗಳೂ ಅಲ್ಲಿವೆ! ವಿಡಿಯೋ ನೋಡಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 24, 2021 | 1:33 AM

ಟ್ವೀಟ್​ನಲ್ಲಿ ಅವರು, ‘ಹೆದ್ದಾರಿ ಮೇಲೆ ಕೇವಲ ನಮ್ಮ XUV ಮಾತ್ರ ಹುಲಿಯಲ್ಲ..ಅತ್ಯಮೋಘ,’ ಎಂದು ಬರೆದಿದ್ದಾರೆ. ಅವರ ಟ್ವೀಟ್ ಕ್ಷಣಾರ್ಧದಲ್ಲೇ ವೈರಲ್ ಆಗಿ 24 ಗಂಟೆಗಳ ಅವಧಿಯಲ್ಲಿ ಸುಮಾರು 2 ಲಕ್ಷ ಜನ ಅದನ್ನು ನೋಡಿದ್ದಾರೆ.

ಹೆದ್ದಾರಿಯ ಮೇಲೆ ಮಹಿಂದ್ರ ಅವರ XUV500 ಮಾತ್ರ ಹುಲಿಯಲ್ಲ, ಎರಡೆರಡು ನೈಜ ಹುಲಿಗಳೂ ಅಲ್ಲಿವೆ! ವಿಡಿಯೋ ನೋಡಿ
ಹೆದ್ದಾರಿ ಮೇಲೆ ಹುಲಿ!
Follow us on

ಉದ್ಯಮಿ ಆನಂದ ಮಹಿಂದ್ರ ಅವರಿಗೆ ವನ್ಯಪ್ರಾಣಿಗಳು ರಸ್ತೆ ಮೇಲೆ ರಾಜಾರೋಷವಾಗಿ ಓಡಾಡಿಕೊಂಡಿರುವ ಮತ್ತೊಂದು ವಿಡಿಯೋ ಸಿಕ್ಕಿದೆ. ನಿಮಗೆ ಮಹಿಂದ್ರ XUV500 ವಾಹನದ ಜಾಹೀರಾತು ನೆನಪಿದೆಯೇ? ಚಿರತೆ ಪ್ರೇರೇಪಣೆ ಹೊಂದಿದೆ ಎಂದು ಹೇಳುವ ವಾಹನದ ಜಾಹೀರಾತು? ಈ ಜಾಹೀರಾತಿನ ವೈಖರಿ ಹೇಗಿತ್ತೆಂದರೆ, ಕಾರು ಇದ್ದವರು ಅದನ್ನು ಮಾರಿ ಮಹಿಂದ್ರ XUV500 ಖರೀದಿಸಿದರು. ಇಲ್ಲದವರು ಬ್ಯಾಂಕ್ ಲೋನ್ ಎತ್ತಿ ಅದನ್ನು ಕೊಳ್ಳಲು ಮುಂದಾದರು. ಆನಂದ ಮಹಿಂದ್ರ ಪೋಸ್ಟ್ ಮಾಡಿರುವ ವಿಡಿಯೋ ನೋಡಿದರೆ ಅವರು ತಮ್ಮ ಕಂಪನಿ ಉತ್ಪಾದಿಸುವ ಕಾರು ನರಗದಲ್ಲಿರಉವ ಏಕೈಕ ಹುಲಿ ಅಂತ ಹೇಳಲಾರರೇನೋ? ಎರಡು ವಯಸ್ಕ ಗಂಡು ಹುಲಿಗಳು ರಾತ್ರಿ ಸಮಯದಲ್ಲಿ ಹೆದ್ದಾರಿಯೊಂದರ ಮೇಲೆ ಈ ಪ್ರದೇಶವೂ ತಮಗೆ ಸೇರಿದ್ದು ಅನ್ನುವ ಹಾಗೆ ಓಡಾಡುತ್ತಿರುವ ಒಂದು ಅಪರಿಚಿತ ಮೂಲದಿಂದ ಲಭ್ಯವಾಗಿರುವ ವಿಡಿಯೋವನ್ನು ಮಹಿಂದ್ರ ಗುಂಪಿನ ಚೇರ್ಮನ್ ತಮ್ಮ ಟ್ವಿಟರ್ ಹ್ಯಾಂಡಲ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಟ್ವೀಟ್​ನಲ್ಲಿ ಅವರು, ‘ಹೆದ್ದಾರಿ ಮೇಲೆ ಕೇವಲ ನಮ್ಮ XUV ಮಾತ್ರ ಹುಲಿಯಲ್ಲ..ಅತ್ಯಮೋಘ,’ ಎಂದು ಬರೆದಿದ್ದಾರೆ. ಅವರ ಟ್ವೀಟ್ ಕ್ಷಣಾರ್ಧದಲ್ಲೇ ವೈರಲ್ ಆಗಿ 24 ಗಂಟೆಗಳ ಅವಧಿಯಲ್ಲಿ ಸುಮಾರು 2 ಲಕ್ಷ ಜನ ಅದನ್ನು ನೋಡಿದ್ದಾರೆ.

ಹುಲಿಗಳು ರಸ್ತೆ ಮೇಲೆ ಕಾಣಿಸಿಕೊಂಡ ಬಳಿಕ ಎರಡೂ ಬದಿಯಲ್ಲಿ ವಾಹನಗಳು ಅಲುಗಾಡದಂತೆ ನಿತುಬಿಟ್ಟಿವೆ. ಆದರೆ ಈ ವಿಡಿಯೋ ಶೂಟ್ ಅಗಿರುವ ಸ್ಥಳದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜೋರು ಚರ್ಚೆ ನಡೆದಿದೆ. ಕೆಲವರ ಪ್ರಕಾರ ಅದನ್ನು ಇದೇ ತಿಂಗಳ ಆರಂಭದಲ್ಲಿ ಪಂಚಗನಿಯ ಮಹಾಬಲೇಶ್ವರ ರಸ್ತೆ ಮೇಲೆ ಶೂಟ್ ಮಾಡಲಾಗಿದೆ ಎಂದಿದ್ದಾರೆ. ಇನ್ನೂ ಕೆಲವರು, ವಿಡಿಯೋ ಇನ್ನೂ ಹಳೆಯದು ಮತ್ತು ಶೂಟ್ ಮಾಡಿರುವ ಸ್ಥಳ ಮಹಾರಾಷ್ಟ್ರದ ತಡೊಬಾ ಹುಲಿ ಸಂರಕ್ಷಿತ ಪ್ರದೇಶ ಎಂದು ಹೇಳುತ್ತಿದ್ದಾರೆ.

ಮಧ್ಯ ಪ್ರದೇಶದ ಪೆಂಚ್ ರಾಷ್ಟ್ರೀಯ ಪಾರ್ಕ್ ಬಳಿ ಶೂಟ್ ಮಾಡಿರುವ ವಿಡಿಯೋ ಇದು ಅಂತ ಹೇಳಿದವರೂ ಇದ್ದಾರೆ. ಒಬ್ಬ ಟ್ವಿಟರ್ ಯೂಸರ್, ‘ಇದು ಪಂಚಗನಿ ಮಹಾಬಲೇಶ್ಬರ ರಸ್ತೆ ಅಲ್ಲ. ಹಿನ್ನೆಲೆಯಲ್ಲಿ ಕೇಳಿ ಬರುತ್ತಿರುವ ಬಾಷೆಯನ್ನು ಕೇಳಿಸಿಕೊಳ್ಳುತ್ತಿದ್ದರೆ, ಅದನ್ನು ವಿದರ್ಭ ಪ್ರಾಂತ್ಯದ ತಡೊಬ ಇಲ್ಲವೇ ಪೆಂಚ್ ಭಾಗದಲ್ಲಿ ಶೂಟ್ ಮಾಡಲಾಗಿದೆ,’ ಎಂದು ಹೇಳಿದ್ದಾರೆ.

ಮತ್ತೊಬ್ಬ ಯೂಸರ್, ‘ಅದ್ಭುತವಾದ ವಿಡಿಯೋ! ಎಂಥ ನಿರ್ವಚನೀಯ ಅನುಭವ! ಆದರೆ, ನನ್ನ ಇಬ್ಬರು ಮಿತ್ರರು ಹೇಳುವ ಹಾಗೆ ಇದು ತಡೊಬ ಟೈಗರ್ ರಿಸರ್ವ್ ಆಗಿದೆ,’ ಎಂದಿದ್ದಾರೆ.

ಇದನ್ನೂ ಓದಿ: ಉದ್ಯಮಿ ಆನಂದ್ ಮಹಿಂದ್ರ ಪೋಸ್ಟ್​ ಮಾಡಿದ ಬೈಕರ್​ಗಳನ್ನು ಕರಡಿ ಬೆನ್ನಟ್ಟಿರುವ ವಿಡಿಯೋ ವೈರಲ್ ಆಗಿದೆ