Kabaddi: ವಿದ್ಯಾರ್ಥಿನಿಯರು ಕೆಡವಿದರೂ ಮತ್ತೆ ಎದ್ದು ಕಬಡ್ಡಿ ಆಡಿದ ಸಚಿವೆಯ ಕ್ರೀಡಾ ಸ್ಫೂರ್ತಿಗೆ ಜನ ಫಿದಾ

ಸಚಿವೆ ರೋಜಾ ಅವರು ಕೆಳಕ್ಕೆ ಬಿದ್ದರೂ ಸಹ ಮತ್ತೆ ಮೇಲೆ ಎದ್ದು ವಿದ್ಯಾರ್ಥಿನಿಯರ ಜೊತೆ ಕಬಡ್ಡಿ ಆಡಿದ್ದು ವಿಡಿಯೋ ವೈರಲ್ ಆಗಿದೆ. ಇನ್ನು ರೋಜಾ ಅವರ ಕ್ರೀಡಾ ಸ್ಫೂರ್ತಿಗೆ ಜನ ಫಿದಾ ಆಗಿದ್ದಾರೆ.

Kabaddi: ವಿದ್ಯಾರ್ಥಿನಿಯರು ಕೆಡವಿದರೂ ಮತ್ತೆ ಎದ್ದು ಕಬಡ್ಡಿ ಆಡಿದ ಸಚಿವೆಯ ಕ್ರೀಡಾ ಸ್ಫೂರ್ತಿಗೆ ಜನ ಫಿದಾ
ಕಬಡ್ಡಿ ಆಡಿದ ಆಂಧ್ರ ಪ್ರದೇಶದ ಸಚಿವೆ ರೋಜಾ ಸೆಲ್ವಮಣಿ
Updated By: ರಮೇಶ್ ಬಿ. ಜವಳಗೇರಾ

Updated on: Nov 29, 2022 | 7:53 PM

ಚಿತ್ತೂರು: ಆಂಧ್ರ ಪ್ರದೇಶದ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಯುವ ಪ್ರಗತಿ ಸಚಿವೆ ಹಾಗೂ ನಟಿ ರೋಜಾ ಸೆಲ್ವಮಣಿ(Roja Selvamani) ಅವರು ವಿದ್ಯಾರ್ಥಿನಿಯರೊಂದಿಗೆ ಕಬಡ್ಡಿ(kabaddi) ಆಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಚಿತ್ತೂರು ಜಿಲ್ಲೆಯ ನಗರಿ ಕ್ಷೇತ್ರದಲ್ಲಿ ಆಯೋಜಿಸಿದ್ದ ಜಗನ್ನಣ್ಣ ಸ್ಪೋರ್ಟ್ಸ್​ ಸೆಲೆಬ್ರೇಷನ್​ ಉದ್ಘಾಟಿಸಿ, ವಿದ್ಯಾರ್ಥಿನಿಯರೊಂದಿಗೆ ಕಬಡ್ಡಿ ಆಡಿದರು. ​ ವಿದ್ಯಾರ್ಥಿನಿಯರನ್ನು ಹುರಿದುಂಬಿಸುವ ಸಲುವಾಗಿ ಕಬಡ್ಡಿ ಅಖಾಡಕ್ಕಿಳಿದ ರೋಜಾ ಅವರು, ಕಬಡ್ಡಿ..ಕಬಡ್ಡಿ ಎನ್ನುತಾ ರೈಡ್​ ಮಾಡಲು ಹೋದಾಗ ವಿದ್ಯಾರ್ಥಿನಿಯರ ಕೈಗೆ ಸಿಕ್ಕಿಬಿದ್ದಿದ್ದು, ಬಳಿಕ ಬಿಡಿಸಿಕೊಳ್ಳುವ ಯತ್ನದಲ್ಲಿ ನೆಲಕ್ಕೆ ಬಿದ್ದರು.ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ರೋಜಾ ಅವರು ಕೆಳಕ್ಕೆ ಬಿದ್ದರೂ ಸಹ ಮತ್ತೆ ಮೇಲೆ ಎದ್ದು ವಿದ್ಯಾರ್ಥಿನಿಯರ ಜೊತೆ ಕಬಡ್ಡಿ ಆಡಿದರು. ರೋಜಾ ಅವರ ಈ ಕ್ರೀಡಾಸ್ಫೂರ್ತಿ ಕಂಡು ಅಲ್ಲಿ ನೆರೆದಿದ್ದ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲೂ ಸಹ ರೋಜಾ ಅವರು ವಿದ್ಯಾರ್ಥಿನಿಯರನ್ನು ಹುರಿದುಂಬಿಸುತ್ತಿರುವ ರೀತಿಗೆ ಫಿದಾ ಆಗಿದ್ದು, ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇದೇ ಮೊದಲೇನಲ್ಲ ಈ ಹಿಂದೆಯೂ ರೋಜಾ ಅವರು ಯುವಕರೊಂದಿಗೆ ಕಬಡ್ಡಿ ಆಡುವ ಮೂಲಕ ಭಾರಿ ಸುದ್ದಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ