ಹಾವು ಮುಂಗುಸಿಗಳು ಜಗಳವಾಡುವುದು ಕಾಮನ್. ಹಾವು ಮುಂಗುಸಿಗಳ ಜಗಳದ ಸಾಕಷ್ಟು ವಿಡಿಯೋಗಳು ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಕಾಣಸಿಗುತ್ತಿರುತ್ತವೆ. ಆದ್ರೆ ಹಾವುಗಳು ಪರಸ್ಪರ ಬಡೆದಾಡಿಕೊಳ್ಳುವುದು ಕಾಣ ಸಿಗುವುದೇ ತೀರಾ ಅಪರೂಪ. ಆದ್ರೆ ಇಲ್ಲೊಂದು ಇಂತಹ ಘಟನೆ ನಡೆದಿದ್ದು, ಮಟ ಮಟ ಮಧ್ಯಾಹ್ನದ ವೇಳೆ ಬೀದಿಯಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪಗಳೆರಡು ಪರಸ್ಪರ ಕಾದಾಡಿವೆ. ಎರಡು ಕಾಳಿಂಗ ಸರ್ಪಗಳ ನಡುವೆ ನಡೆದ ಬಿಗ್ ಫೈಟ್ ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದು, ಇದಕ್ಕೆ ಸಂಬಂದಪಟ್ಟ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಈ ಘಟನೆ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಪಾರ್ವತಿಪುರಂ ಮಂಡಲದ ಚಿನ್ನ ವೂಟಗೆದ್ದ ಎಂಬಲ್ಲಿ ನಡೆದಿದ್ದು, ಎರಡು ಕಾಳಿಂಗ ಸರ್ಪಗಳ ನಡುವೆ ನಡೆದ ಬಿಗ್ ಫೈಟ್ ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಗ್ರಾಮದ ಪಕ್ಕದಲ್ಲೇ ಇದ್ದ ಬೆಟ್ಟದ ಬಳಿಯಿಂದ 18 ಅಡಿ ಉದ್ದದ ಕಾಳಿಂಗ ಸರ್ಪವೊಂದು ಮಟ ಮಟ ಮಧ್ಯಾಹ್ನ ಆಹಾರವನ್ನರಸುತ್ತಾ ಜನವಸತಿ ಪ್ರದೇಶಕ್ಕೆ ಬಂದಿದೆ. ಅದೇ ಸಮಯದಲ್ಲಿ ಇನ್ನೊಂದು ಸಣ್ಣ ಗಾತ್ರದ ಕಾಳಿಂದ ಸರ್ಪವೊಂದು ಎದುರಾಗಿದ್ದು, ಈ ಎರಡು ಹಾವುಗಳ ನಡುವೆ ಬೀದಿಯಲ್ಲಿಯೇ ಬಿಗ್ ಫೈಟ್ ನಡೆದಿದೆ. ಹಾವು ಬುಸುಗುಡುವ ಸದ್ದನ್ನು ಕೇಳಿ ಓಡಿ ಬಂದ ಗ್ರಾಮಸ್ಥರು ಹಾವುಗಳ ಕಾದಾಟ ನೋಡಿ ಬೆಚ್ಚಿ ಬಿದ್ದಿದ್ದಾರೆ. ದೈತ್ಯ ಕಾಳಿಂಗ ಸರ್ಪದ ಏಟಿಗೆ ಸಣ್ಣ ಗಾತ್ರದ ಕಾಳಿಂಗ ಸರ್ಪ ಸಾವನ್ನಪ್ಪಿದ್ದು, ಈ ದೈತ್ಯ ಹಾವನ್ನು ಹೀಗೆ ಬಿಟ್ಟರೆ ಅಪಾಯ ಎಂದು ನಂತರ ಗ್ರಾಮಸ್ಥರು ದೈತ್ಯ ಕಾಳಿಂಗ ಸರ್ಪವನ್ನು ಕೂಡಾ ಹೊಡೆದು ಸಾಯಿಸಿದ್ದಾರೆ.
ಕಳೆದ ಗುರುವಾರ ಅಂದರೆ ಸೆಪ್ಟೆಂಬರ್ 19 ರಂದು ಈ ಘಟನೆ ನಡೆದಿದ್ದು, ಈ ಕುರಿತ ಫೋಟೋವೊಂದು ವೈರಲ್ ಆಗಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ