Viral: ಶೋ ರೂಮ್‌ ಮುಂದೆಯೇ ಓಲಾ ಇ-ಸ್ಕೂಟರ್‌ ಅನ್ನು ಸುತ್ತಿಗೆಯಿಂದ ಒಡೆದು ಹಾಕಿದ ಗ್ರಾಹಕ; ವಿಡಿಯೋ ವೈರಲ್

| Updated By: ಅಕ್ಷತಾ ವರ್ಕಾಡಿ

Updated on: Nov 24, 2024 | 6:44 PM

ಇತ್ತೀಚಿಗಷ್ಟೇ ಓಲಾ ಕಂಪೆನಿಯ ಎಲೆಕ್ಟ್ರಿಕ್‌ ಸ್ಕೂಟರ್‌ ಪದೇ ಪದೇ ರಿಪೇರಿಗೆ ಬಂದ ಕಾರಣ ಗ್ರಾಹಕನೊಬ್ಬ ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಶೋರೂಮ್‌ಗೆ ಬೆಂಕಿ ಹಚ್ಚಿದ್ದ ಸುದ್ದಿಯೊಂದು ಭಾರೀ ವೈರಲ್‌ ಆಗಿತ್ತು. ಇದೀಗ ಇಂತಹದ್ದೇ ಮತ್ತೊಂದು ಘಟನೆ ನಡೆದಿದ್ದು, ಸ್ಕೂಟರ್‌ ರಿಪೇರಿಗೆ 90 ಸಾವಿರ ಬಿಲ್‌ ಆಗಿದ್ದನ್ನು ಕಂಡು ಸಿಟ್ಟು ನೆತ್ತಗೇರಿ ಗ್ರಾಹಕನೊಬ್ಬ ಶೋರೂಮ್‌ ಮುಂದೆಯೇ ಓಲಾ ಸ್ಕೂಟರ್‌ ಅನ್ನು ಸುತ್ತಿಗೆಯಿಂದ ಒಡೆದು ಹಾಕಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Viral: ಶೋ ರೂಮ್‌ ಮುಂದೆಯೇ ಓಲಾ ಇ-ಸ್ಕೂಟರ್‌ ಅನ್ನು ಸುತ್ತಿಗೆಯಿಂದ ಒಡೆದು ಹಾಕಿದ ಗ್ರಾಹಕ; ವಿಡಿಯೋ ವೈರಲ್
Follow us on

ಇತ್ತೀಚಿಗಂತೂ ಓಲಾ ಕಂಪೆನಿಯ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಬಗ್ಗೆ ಗ್ರಾಹಕರ ಅಸಮಾಧಾನ ಹೆಚ್ಚಾಗಿದೆ. ಕೆಲವರು ಆ ಕಂಪೆನಿಯ ಗ್ರಾಹಕರ ಸೇವೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ರೆ ಇನ್ನೂ ಕೆಲವರು ಓಲಾ ಒಂದು ಡಬ್ಬಾ ಗಾಡಿ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ. ಹೀಗೆ ಕೆಲ ತಿಂಗಳುಗಳ ಹಿಂದೆಯಷ್ಟೆ ಓಲಾ ಎಲೆಕ್ಟ್ರಿಕ್‌ ಗಾಡಿಯಿಂದ ಬೇಸತ್ತಾ ಗ್ರಾಹಕನೊಬ್ಬ ಸಿಟ್ಟಿನಿಂದ ಓಲಾ ಇ-ಸ್ಕೂಟರ್‌ ಶೋರೂಮ್‌ಗೆ ಬೆಂಕಿ ಹಚ್ಚಿದ್ದ ಸುದ್ದಿಯೊಂದು ಭಾರೀ ವೈರಲ್‌ ಆಗಿತ್ತು. ಇದೀಗ ಅಂತಹದ್ದೇ ಮತ್ತೊಂದು ಘಟನೆ ನಡೆದಿದ್ದು, ಗ್ರಾಹಕನೊಬ್ಬ ಶೋ ರೂಮ್‌ ಮುಂದೆಯೇ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ಸುತ್ತಿಗೆಯಿಂದ ಒಡೆದು ಹಾಕಿ ತನ್ನ ಆಕ್ರೋಶವನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಿದ್ದಾನೆ. ಈ ಕುರಿತ ವಿಡಿಯೋವೊಂದು ಇದೀಗ ಭಾರೀ ವೈರಲ್‌ ಆಗುತ್ತಿದೆ.

ಇ-ಸ್ಕೂಟರ್‌ ರಿಪೇರಿಗೆ ಓಲಾ ಶೋ ರೂಮ್‌ 90 ಸಾವಿರ ಬಿಲ್‌ ಮಾಡಿದ್ದು, ಈ ದುಬಾರಿ ಬಿಲ್‌ ನೋಡಿ ಸಿಟ್ಟಿಗೆದ್ದ ಗ್ರಾಹಕ ಶೋ ರೂಮ್‌ ಮುಂದೆಯೇ ಓಲಾ ಸ್ಕೂಟರ್‌ ಅನ್ನು ಸುತ್ತಿಗೆಯಿಂದ ಒಡೆದು ಹಾಕಿದ್ದಾನೆ. ಈ ಕುರಿತ ವಿಡಿಯೋವನ್ನು nedricknews ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಒಂದಷ್ಟು ಯುವಕರು ಒಬ್ಬರ ಹಿಂದೆ ಒಬ್ಬರಂತೆ ಬಂದು ಶೋ ರೂಮ್‌ ಮುಂದೆಯೇ ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಅನ್ನು ಸುತ್ತಿಗೆಯಿಂದ ಒಡೆದು ಹಾಕುತ್ತಿರುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ದಿನಕ್ಕೆ ಒಂದು ಲಕ್ಷ ಸಂಪಾದನೆ ಮಾಡಲು ಸುಧಾ ಮೂರ್ತಿ ಹೇಳಿದ್ದಾರೆಂಬ ವಿಡಿಯೋ ವೈರಲ್

ನವೆಂಬರ್‌ 22 ರಂದು ಹಂಚಿಕೊಳ್ಳಲಾದ ಈ ವಿಡಿಯೋ 9.5 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದಕ್ಕಿಂತ ಇವರು ಗ್ರಾಹಕರ ವೇದಿಕೆಯಲ್ಲಿ ಪ್ರಕರಣ ದಾಖಲಿಸಬಹುದಿತ್ತುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಿಮ್ಮ ಮೂರ್ಖತನದಿಂದ ಓಲಾ ಕಂಪೆನಿಗೆ ಏನು ನಷ್ಟವಾಗಿಲ್ಲ. ಹಾಗಾಗಿ ಗ್ರಾಹಕರೆಲ್ಲರೂ ಸೇರಿ ಓಲಾ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡ್ಬೇಕುʼ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ