Animal Rights Activist : ಈ ವೀಡಿಯೋದಲ್ಲಿ ಇಪ್ಪತ್ತರ ಆಸುಪಾಸಿನಲ್ಲಿರುವ ಯುವತಿ ಮೊದಲು ತನ್ನನ್ನು ತಾನು ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಡಿಂಪಿ ಮಹೇಂದ್ರ ಎಂದು ಪರಿಚಯಿಸಿಕೊಳ್ಳುತ್ತಾಳೆ. ನಂತರ ಆಗ್ರಾದ ರೆಸಿಡೆನ್ಶಿಯಲ್ ಸೊಸೈಟಿಯ ಸೆಕ್ಯುರಿಟಿ ಗಾರ್ಡ್‌ಗೆ ಥಳಿಸುತ್ತಾಳೆ. ಅವನು ಬೀದಿನಾಯಿಗಳನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾನೆ ಎಂದು ಆರೋಪಿಸಿ ಬೀದಿಯಲ್ಲಿ ದೌರ್ಜನ್ಯ ಎಸಗುತ್ತಾಳೆ. ಭಾನುವಾರ ನಡೆದ ಈ ಘಟನೆಯ ವಿಡಿಯೋ ವೈರಲ್ ಆಗಿದೆ. ಆಗ್ರಾ ಪೊಲೀಸರು ವಿಡಿಯೋವನ್ನು ಗಮನಿಸಿ, ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಎಂದು ಹೇಳಿಕೊಳ್ಳುವ ಈ ಯುವತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Shocking video from UP’s #Agra! Woman thrashes, abuses society security guard over ‘bad behavior’ with dogs. pic.twitter.com/XrDSIbT43V
ಇದನ್ನೂ ಓದಿ— Aman Dwivedi (@amandwivedi48) August 14, 2022
ಸುಮಾರು 2.10 ನಿಮಿಷಗಳ ಈ ಕ್ಲಿಪ್‌ನಲ್ಲಿ ಈ ಯುವತಿ, ಬಿಜೆಪಿ ಸಂಸದೆ ಮತ್ತು ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಮೇನಕಾ ಗಾಂಧಿ ಅವರಿಗೆ ದೂರು ನೀಡುವುದಾಗಿ ವ್ಯಕ್ತಿಗೆ ಬೆದರಿಕೆ ಹಾಕಿದ್ದಾಳೆ.
ಪೊಲೀಸ್ ಅಧೀಕ್ಷಕ (ನಗರ) ವಿಕಾಸ್ ಕುಮಾರ್, ‘ಯುವತಿಯೊಬ್ಬಳು ಸಿಬ್ಬಂದಿಗೆ ಕೋಲಿನಿಂದ ಥಳಿಸುವ ವಿಡಿಯೋ ವೈರಲ್ ಆಗುತ್ತಿದೆ, ಆಗ್ರಾ ಪೊಲೀಸರು ಈ ವಿಡಿಯೋ ಆಧಾರದ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಹೊಸ ಆಗ್ರಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ವಿಜಯ್ ವಿಕ್ರಮ್ ಸಿಂಗ್, ‘ಎಲ್‌ಐಸಿ ಅಧಿಕಾರಿ ಕಾಲೊನಿಯಲ್ಲಿ ಕೆಲಸ ಮಾಡುವ ಗಾರ್ಡ್ ಅಖಿಲೇಶ್ ಸಿಂಗ್ ಅವರು ದೂರು ನೀಡಿದ್ದಾರೆ. ವೈರಲ್ ವಿಡಿಯೋದಲ್ಲಿ ಥಳಿಸಿದ ಈ ಯುವತಿಯ ಮಾಹಿಯನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ’ ಎಂದು ಪಿಟಿಐಗೆ ತಿಳಿಸಿದ್ದಾರೆ.
ಈ ವ್ಯಕ್ತಿ ನ್ಯೂ ಆಗ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಎಲ್ಐಸಿ ಆಫೀಸರ್ ಕಾಲೊನಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾನೆ. ತಾನು ಮಾಜಿ ಸೈನಿಕ ಎಂದು ವಿಡಿಯೋದಲ್ಲಿ ಹೇಳಿರುವುದು ಕೇಳುತ್ತದೆ. ತಾನು ಕಾಲೊನಿಯಿಂದ ಬೀದಿನಾಯಿಗಳನ್ನು ಓಡಿಸಲು ಪ್ರಯತ್ನಿಸುತ್ತಿದ್ದೆ ಎನ್ನುವುದೂ ಕೇಳಿಸುತ್ತದೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ