ಕೆಲವೊಮ್ಮೆ ಕಳೆದುಹೋದ ವಸ್ತುಗಳನ್ನು ಎಷ್ಟು ಹುಡುಕಿದರೂ ಸಿಗುವುದಿಲ್ಲ. ಆದರೆ ಅದೇ ವಸ್ತು ಇನ್ಯಾವತ್ತೋ ಒಂದು ದಿನ ಆಕಸ್ಮಾತ್ ಆಗಿ ಸಿಕ್ಕರೆ ಎಲ್ಲಿಲ್ಲದ ಸಂತಸವಾಗುವುದಂತೂ ಸುಳ್ಳಲ್ಲ. ಆದರೆ ಮೊಬೈಲ್ ಕಳೆದುಹೋಗಿ ದಶಕಗಳ ನಂತರ ಸಿಕ್ಕರೆ ಅಚ್ಚರಿಯಾಗದೇ ಇರಲಾರದು. ಅಂತಹದ್ದೇ ಒಂದು ಇಲ್ಲೊಂದು ವಿಚಿತ್ರ ಘಟನೆ ಯುಎಸ್ನಲ್ಲಿ ನಡೆದ ಕುರಿತು ವರದಿಯಾಗಿದೆ. ದಂಪತಿಯೊಂದು ಮನೆಯಲ್ಲಿ ಇದಕ್ಕಿದ್ದಂತೆ ಬಾತ್ರೂಮ್ನಲ್ಲಿ ಶಬ್ದಕೇಳಿಸಿ ಹೋಗಿ ನೋಡಿದಾಗ ಟಾಯ್ಲೆಟ್ನಲ್ಲಿ ಐಫೋನ್ ಒಂದು ಸಿಕ್ಕಿದೆ. ಅದು ಮಹಿಳೆಯ ಫೋನ್ ಆಗಿದ್ದು 10 ವರ್ಷಗಳ ಹಿಂದೆ ನಾಪತ್ತೆಯಾಗಿತ್ತು ಎಂದು ಪೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ನೆಲೆಸಿರುವ ಬೆಕಿ ಬೆಕ್‌ಮನ್ ಎನ್ನುವ ಮಹಿಳೆ ದಶಕದ ಹಿಂದೆ ತನ್ನ ಆಪಲ್ ಐಫೋನ್ಅನ್ನುಕಳೆದುಕೊಂಡಿದ್ದರು. 2012 ರಲ್ಲಿ ಹ್ಯಾಲೋವೀನ್ ರಾತ್ರಿ ಬೆಕಿಮನ್ ಮೊಬೈಲ್ ಅನ್ನು ಮನೆಯಲ್ಲಿಯೇ ಕಳೆದುಕೊಂಡಿದ್ದರು. ಅದಾದ ಬಳಿಕ ಫೋನ್ಬಗ್ಗೆ ದಂಪತಿ ಕೂಡ ಮರೆತಿದ್ದರು ಆದರೆ ಒಂದು ಟಾಯ್ಲೆಟ್ನಲ್ಲಿ ನಿರು ಬಿಟ್ಟಾಗ ವಿಚಿತ್ರ ಶಬ್ಧ ಕೇಳಿಸುತ್ತಿತ್ತು ಎಂದಿದ್ದರೆ. ಪೈಪ್ನಲ್ಲಿ ಸಮಸ್ಯೆ ಇರಬಹದು ಎಂದು ಭಾವಿಸಿದ್ದರೆ ಆದರೆ ಪರಿಶೀಲಿಸಿದಾಗ ಐಫೋನ್ ಕೈಗೆ ಸಿಲುಕಿದೆ. ಇದನ್ನು ಕಂಡು ದಂಪತಿ ಅಚ್ಚರಿಗೊಂಡಿದ್ದಾರೆ. ಇದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
ಪೇಸ್ಬುಕ್ನಲ್ಲಿ ಸ್ಟೋರಿಯನ್ನು ಓದಿದ ನೆಟ್ಟಿಗರು, ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇಷ್ಟು ವರ್ಷಗಳ ಕಾಲ ಯಾವುದೇ ಅಡಚಣೆ ಇಲ್ಲದೆ ಶೌಚಾಲಯವನ್ನು ಬಳಸಲು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು ಕಾಲೆಳೆದು ತಮಾಷೆಯಾಗಿ ಪ್ರತಿಕ್ರಯಿಸಿದ್ದಾರೆ. ಸದ್ಯ ಈ ಸ್ಟೋರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:
Published On - 5:34 pm, Sun, 27 February 22