ಗೂರ್ಖಾ ರೈಫಲ್ಸ್ ರೆಜಿಮೆಂಟ್‌ನ ಸೇನಾ ಜವಾನರೊಬ್ಬರು ವಿಶೇಷ ನೃತ್ಯ ಪ್ರದರ್ಶಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ ನೋಡುಗರ ಗಮನ ಸೆಳೆದಿದ್ದು, ಸಾಕಷ್ಟು ಚಪ್ಪಾಳೆ ಗಿಟ್ಟಿಸಿಕೊಂಡಿದೆ. ಸೇನಾ ಜವಾನರೊಬ್ಬರು ಚಾಕು ಹಿಡಿದು ವಿಶೇಷವಾದ ‘ಖುಕುರಿ ನೃತ್ಯ’ವನ್ನು ಪ್ರದರ್ಶಿಸುತ್ತಿರುವುದನ್ನು ವಿಡಿಯೋದಲ್ಲಿ ನಾವು ಕಾಣಬಹುದಾಗಿ.
गोरखा जवान का खुखरी डांस.!
गोरखा सैनिकों के लिए कहा जाता है कि यदि वे एक बार मैदान में उतर जाएं तो युद्ध का फैसला करके ही लौटते हैं. pic.twitter.com/cbI7JTDAvB— Dipanshu Kabra (@ipskabra) January 22, 2022
ಈ ವಿಶೇಷ ಜಾನಪದ ನೃತ್ಯವು ಗೂರ್ಖಾ ರೈಫಲ್ಸ್ ರೆಜಿಮೆಂಟ್‌ನಲ್ಲಿ ಸಂಪ್ರದಾಯವಾಗಿದ್ದು, ಮತ್ತು ವೀಕ್ಷಿಸಲು ಅಷ್ಟೇ ಆಕರ್ಷಕವಾಗಿದೆ. ಜವಾನರೊಬ್ಬರು ಹರಿತವಾದ ಅಪಾಯಕಾರಿ ಚಾಕುವಿನೊಂದಿಗೆ ಅತ್ಯಂತ ನಾಜುಕಿನಿಂದ ನೃತ್ಯ ಪ್ರದರ್ಶನ ಮಾಡಿದ್ದಾರೆ. ಅವರ ಪ್ರದರ್ಶನದ ನಂತರ, ಇತರೇ ಜವಾನರು ಚಪ್ಪಾಳೆ ತಟ್ಟುವ ಮೂಲಕ ಆ ಜವಾನನ್ನು ಶ್ಲಾಘಿಸಿತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಗೂರ್ಖಾ ಜವಾನನ ಖುಕುರಿ ನೃತ್ಯ. ಗೂರ್ಖಾ ಸೈನಿಕರು ಮೈದಾನಕ್ಕೆ ಪ್ರವೇಶಿಸಿದಾಗ ಅವರು ತಮ್ಮ ಕೊನೆಯ ಉಸಿರು ಇರುವವರೆಗೂ ಹೋರಾಡಿದ ನಂತರ ಮಾತ್ರ ಹಿಂತಿರುಗುತ್ತಾರೆ ಎಂದು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ವೀಡಿಯೊಗೆ ಶೀರ್ಷಿಕೆ ನೀಡಿದ್ದಾರೆ. ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಸದ್ಯ 20,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ್ದು, ಇನ್ನೂ ವೀಕ್ಷಿಸಲ್ಪಡುತ್ತಿದೆ. ನೆಟ್ಟಿಗರು ಸೇನಾ ಜವಾನನ ಡ್ಯಾನ್ಸ್ ನೋಡಿ ಬೆರಗಾಗಿದ್ದಾರೆ. ಅನೇಕರು ಗೂರ್ಖಾ ರೆಜಿಮೆಂಟ್‌ನ ಧೈರ್ಯ ಮತ್ತು ಉತ್ಸಾಹವನ್ನು ಶ್ಲಾಘಿಸಿದ್ದು, ಇನ್ನೂ ಕೆಲವರು ಭಾರತೀಯ ಸೇನೆಗೆ ಸೆಲ್ಯೂಟ್ ಹೊಡೆದು ಧನ್ಯವಾದ ಅರ್ಪಿಸಿದ್ದಾರೆ.
ಇದನ್ನೂ ಓದಿ;
Viral Video:’ಕೊರೋನಾ ವಡೆ’ ತಯಾರಿಸಿ ರೆಸಿಪಿ ವಿಡಿಯೋ ಹಂಚಿಕೊಂಡ ಮಹಿಳೆ
Published On - 11:03 am, Sun, 23 January 22