ಸೋಷಿಯಲ್ ಮೀಡಿಯಾ ಪ್ರತಿಭಾವಂತ ಕಲಾವಿದರಿಗೆ ತಮ್ಮ ಅದ್ಭುತ ಸಾಮರ್ಥ್ಯ ಮತ್ತು ಸೃಜನಶೀಲತೆಯನ್ನು ಅನಾವರಣಗೊಳಿಸಲಿರುವ ವೇದಿಕೆಯಾಗಿದೆ. ಇಂತಹ ಅಧ್ಬುತ ವೇದಿಕೆಯನ್ನು ಸಮರ್ಮಕವಾಗಿ ಬಳಸಿಕೊಂಡು ಸ್ಟಾರ್ ಆದವರು ಚಿತ್ರ ಕಲಾವಿದ ಶಿಂಟು ಮೌರ್ಯ. ಇವರೊಬ್ಬ ಅದ್ಭುತ ಕಲಾವಿದರಾಗಿದ್ದು, ಪೆನ್ಸಿಲ್ ಅಥವಾ ಯಾವುದೇ ರೀತಿಯ ಪೇಂಟಿಂಗ್ಸ್ ಬಳಸದೆ ಟೊಮೆಟೊ ಸಾಸ್, ಚಹಾ, ಶಾಂಪೂ ಇತ್ಯಾದಿ ವಸ್ತುಗಳಿಂದ ಅದ್ಭುತವಾಗ ಚಿತ್ರಗಳನ್ನು ಬಿಡಿಸುತ್ತಾರೆ. ಇವರು ತನ್ನ ಈ ವಿಶಿಷ್ಟ ಪ್ರತಿಭೆಯಿಂದ ಇದಾಗಲೇ ಭಾರಿ ಹೆಸರನ್ನು ಗಳಿಸಿದ್ದಾರೆ. ಇದೀಗ ಅವರು ಮ್ಯಾಗಿ ಮತ್ತು ಟೊಮೆಟೊ ಕೆಚಪ್ ಬಳಸಿ ನಟಿ ಸಾಯಿ ಪಲ್ಲವಿ ಅವರ ಸುಂದರ ಚಿತ್ರವನ್ನು ಬಿಡಿಸಿದ್ದು, ಈ ಕುರಿತ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು ಶಿಂಟು ಮೌರ್ಯ (@artist_shintu_moury) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಶಿಂಟು ಮೌರ್ಯ ಅವರು ಒಂದು ಬಿಳಿ ಹಾಳೆಯ ಮೇಲೆ ಬೇಯಿಸಿದ ಮ್ಯಾಗಿ ನೂಡಲ್ಸ್ ಇಟ್ಟು ಅದರ ಮೇಲೆ ಟೊಮೆಟೊ ಕೆಚಪ್ ಹಾಕಿ ನಟಿ ಸಾಯಿ ಪಲ್ಲವಿಯ ಅವರ ಸುಂದರ ಚಿತ್ರವನ್ನು ಬಿಡಿಸುವಂತಹ ದೃಶ್ಯವನ್ನು ಕಾಣಬಹುದು.
ಆರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 9.8 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಶಿಂಟು ಮೌರ್ಯ ಅವರ ಈ ಅದ್ಭುತ ಕಲಾ ಪ್ರತಿಭೆಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ