Space: ಇತ್ತೀಚೆಗಷ್ಟೇ ಹನಿ ಸ್ಯಾಂಡ್ವಿಚ್ ತಯಾರಿಸಿ ತಿಂದ ಗಗನಯಾತ್ರಿಗಳ ವಿಡಿಯೋ ನೋಡಿದ್ದಿರಿ. ಇದೀಗ ಗಗನಯಾತ್ರಿ ಸಮಂತಾ ಕ್ರಿಸ್ಟೋಫರೊಟ್ಟಿ ಬಾಹ್ಯಾಕಾಶದಲ್ಲಿ ಕಾಫಿ ತಯಾರಿಸಿ ಕುಡಿದಿದ್ದಾರೆ. ಕಾಫಿ ತಯಾರಿಸಿದ ನಂತರ ಮಾಮೂಲಿ ಕಪ್ನಲ್ಲಿ ಕುಡಿಯಲು ಪ್ರಯತ್ನಿಸಿದ ಅವರು ವಿಫಲರಾಗುತ್ತಾರೆ. ಆ ನಂತರ ಸ್ಪೇಸ್ ಕಾಫಿ ಕಪ್ ಮೂಲಕ ಕಾಫಿ ಕುಡಿಯುವಲ್ಲಿ ಯಶಸ್ವಿಯಾಗುತ್ತಾರೆ. ಈ ವಿಡಿಯೋ ಅನ್ನು ನೆಟ್ಟಿಗರು ಕುತೂಹಲದಿಂದ ನೋಡುತ್ತಿದ್ದಾರೆ. ಯುರೋಪಿಯನ್ ಸ್ಪೇಸ್ ಏಜೆನ್ಸಿ (ESA) ಹಂಚಿಕೊಂಡಿರುವ ಈ ವಿಡಿಯೋ ಅತಿವೇಗದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: Viral Video: ಮುಂಬೈ; ಶಿವಾಜಿಪಾರ್ಕ್ ಈಜುಗೊಳದಲ್ಲಿ ಮರಿಮೊಸಳೆ ಪತ್ತೆ; ಕಡಿತಕ್ಕೆ ಒಳಗಾದ ಸಿಬ್ಬಂದಿ
#InternationalCoffeeDay ಎಂಬ ಹ್ಯಾಶ್ಟ್ಯಾಗ್ನೊಂದಿಗೆ ಈ ವಿಡಿಯೋ ಅನ್ನು X ನಲ್ಲಿ ಅಕ್ಟೋಬರ್ 1ರಂದು ಪೋಸ್ಟ್ ಮಾಡಲಾಗಿದೆ. ಮೈಕ್ರೋಗ್ರ್ಯಾವಿಟಿ ಕಪ್ಗಳು ಗಗನಯಾತ್ರಿಗಳಿಗೆ ಕಾಫಿ ಕುಡಿಯಲು ಅನುಕೂಲವಾಗುವಂತೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುತ್ತದೆ. ಸಮಂತಾ ಕಾಫಿಯನ್ನು ಪ್ಯಾಕೆಟ್‌ನಿಂದ ಒಂದು ಮಾಮೂಲಿ ಕಪ್ನಲ್ಲಿ ಸುರಿದು ಕುಡಿಯಲು ಪ್ರಯತ್ನಿಸುತ್ತಾರೆ. ಆದರೆ ಒಂದು ಹನಿಯೂ ಅವರ ತುಟಿಯನ್ನು ಸೋಕುವುದೇ ಇಲ್ಲ. ನಂತರ ವಿಶೇಷ ಸ್ಪೇಸ್ ಕಪ್ನಲ್ಲಿ ಆರಾಮದಾಯಕವಾಗಿ ಕುಡಿಯುತ್ತಾರೆ.
How do you like your coffee?☕️
Our astronaut @AstroSamantha demonstrates how she has her morning coffee in space! #InternationalCoffeeDay pic.twitter.com/UKA1Hy0EWW
— ESA (@esa) October 1, 2023
ಈತನಕ ಸುಮಾರು 3 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. 2,300ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೋ ನೋಡಿದ ನಂತರ ನನಗೆ 11 ಗಂಟೆಯ ಹೊತ್ತಿನಲ್ಲಿ ಕಾಫಿ ಬೇಕು ಎನ್ನಿಸುತ್ತಿದೆ ಎಂದಿದ್ದಾರೆ ಒಬ್ಬರು. ಗ್ರೇಟ್ ಬ್ಯಾಲೆನ್ಸ್ ಎಂದು ಇನ್ನೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: Viral Video: ‘ಕ್ಯಾನ್ಸರ್ಮುಕ್ತಳಾಗಿ ನಿಮ್ಮೆದುರು ಇಂದು ಹೀಗೆ ಇರುತ್ತೇನೆಂದು ಅಂದುಕೊಂಡಿರಲೇ ಇಲ್ಲ’
ISSpresso! ನನಗನಿಸಿದಂತೆ ಬಾಹ್ಯಾಕಾಶದಲ್ಲಿ ಮೊದಲ ಸಲ ಕಾಫಿ ಕುಡಿದ ವಿಜ್ಞಾನಿ ಇವರಿರಬೇಕು ಎಂದಿದ್ಧಾರೆ ಮತ್ತೊಬ್ಬರು. ಈ ಪ್ರಾತ್ಯಕ್ಷಿಕೆ ತುಂಬಾ ಚೆನ್ನಾಗಿದೆ ಎಂದಿದ್ದಾರೆ ಮಗದೊಬ್ಬರು. ನೀವು ಸುರಕ್ಷಿತವಾದ ಮತ್ತು ಸುಂದರವಾದ ಜಗತ್ತನ್ನು ನಿರ್ಮಿಸುತ್ತಿದ್ದೀರಿ ಶುಭವಾಗಲಿ ಎಂದು ಹೇಳಿದ್ದಾರೆ ಮತ್ತೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 6:00 pm, Wed, 4 October 23