ಕೊರೊನಾಗೆ ಲಸಿಕೆ ಮದ್ದಲ್ಲ, ಒಂದು ಪೆಗ್​ ಹೊಡೆದ್ರೆ ಸರಿಯಾಗುತ್ತೆ; ಮದ್ಯದಂಗಡಿ ಎದುರು ಕ್ಯೂ ನಿಂತ ಆಂಟಿ

ದೆಹಲಿಯಲ್ಲಿ ಕೊವಿಡ್ ನಿಯಂತ್ರಣಕ್ಕಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೋಮವಾರ 6 ದಿನಗಳ ಲಾಕ್​ಡೌನ್ ಘೋಷಿಸಿರು. ಈ ಕೂಡಲೇ ಮದ್ಯದಂಗಡಿಯಲ್ಲಿ ಜನರು ಸಾಲುಗಟ್ಟಿ ನಿಂತಿದ್ದಾರೆ.

ಕೊರೊನಾಗೆ ಲಸಿಕೆ ಮದ್ದಲ್ಲ, ಒಂದು ಪೆಗ್​ ಹೊಡೆದ್ರೆ ಸರಿಯಾಗುತ್ತೆ; ಮದ್ಯದಂಗಡಿ ಎದುರು ಕ್ಯೂ ನಿಂತ ಆಂಟಿ
ಬಾರ್​ ಎದುರು ಮಾತನಾಡಿದ ಆಂಟಿ
Follow us
ರಾಜೇಶ್ ದುಗ್ಗುಮನೆ
|

Updated on: Apr 19, 2021 | 8:07 PM

ಕೇಂದ್ರ ಸರ್ಕಾರ ಕಳೆದ ವರ್ಷ ಏಕಾಏಕಿ ಲಾಕ್​ಡೌನ್​ ಘೋಷಣೆ ಮಾಡಿತ್ತು. ಇದರಿಂದ ಜನಸಾಮಾನ್ಯರು ತುಂಬಾನೇ ತೊಂದರೆ ಅನುಭವಿಸಿದ್ದರು. ಅದರಲ್ಲೂ ಮದ್ಯಪ್ರಿಯರಿಗೆ ಸಾಕಷ್ಟು ಸಮಸ್ಯೆ ಉಂಟಾಗಿತ್ತು. ಏಕಾಏಕಿ ಬಾರ್​ಗಳನ್ನು ಮುಚ್ಚಿದ್ದರಿಂದ ಆಲ್ಕೋಹಾಲ್​ ಸಿಗದೆ ಅನೇಕರು ಪರಿತಪಿಸಿದ್ದರು. ಈಗ ಎರಡನೇ ಅಲೆ ಅಬ್ಬರ ಜೋರಾಗಿರುವುದರಿಂದ ದೆಹಲಿಯಲ್ಲಿ ಆರು ದಿನಗಳ ಮಿನಿ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ಜನರು ಮದ್ಯದಂಗಡಿಗೆ ಮುಗಿಬಿದ್ದಿದ್ದಾರೆ. ಈ ವೇಳೆ ಗಮನ ಸೆಳೆದಿದ್ದು ಒಂದು ಆಂಟಿ. ದೆಹಲಿಯಲ್ಲಿ ಕೊವಿಡ್ ನಿಯಂತ್ರಣಕ್ಕಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೋಮವಾರ 6 ದಿನಗಳ ಲಾಕ್​ಡೌನ್ ಘೋಷಿಸಿರು. ಈ ಕೂಡಲೇ ಮದ್ಯದಂಗಡಿಯಲ್ಲಿ ಜನರು ಸಾಲುಗಟ್ಟಿ ನಿಂತಿದ್ದಾರೆ. ಒಂದು ವಾರಕ್ಕೆ ಸಾಕಾಗುವಷ್ಟು ಮದ್ಯವನ್ನು ಶೇಖರಿಸಿಟ್ಟುಕೊಳ್ಳಲು ಜನರು ಮುಂದಾಗಿದ್ದರು. ಈ ಸಾಲಿನಲ್ಲಿ ಓರ್ವ ಆಂಟಿ ಕೂಡ ಇದ್ದರು. ಅವರು ಕೊರೊನಾಗೆ ಲಸಿಕೆ ಮದ್ದಲ್ಲ ಎಂದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಆಂಟಿ, ಕೊರೊನಾಗೆ ಇಂಜೆಕ್ಷನ್ ಪ್ರಯೋಜನವಾಗುವುದಿಲ್ಲ. ಆದರೆ, ಒಂದು ಪೆಗ್​ ಹೊಡೆದರೆ ಸರಿ ಆಗುತ್ತದೆ. ಯಾರ್ಯಾರು ಕುಡಿಯುತ್ತಾರೋ ಅವರಿಗೆ ರೋಗ ಅಂಟುವುದಿಲ್ಲ. ಅವರು ಆರೋಗ್ಯವಾಗಿರುತ್ತಾರೆ. ನಾನು ಅನೇಕ ವರ್ಷಗಳಿಂದ ಮದ್ಯ ಕುಡಿಯುತ್ತಿದ್ದೇನೆ. ಇಲ್ಲಿಯವರೆಗೆ ನನಗೆ ಯಾವುದೇ ರೋಗ ಬಂದಿಲ್ಲ ಎಂದಿದ್ದಾರೆ.

ಸಂಜೆ ವೇಳೆಗೆ ಟ್ವಿಟರ್​ನಲ್ಲಿ ಆಂಟಿ ಎನ್ನುವ ಶಬ್ದ ಟ್ರೆಂಡ್​ ಆಗಿದೆ. ಈ ಬಗ್ಗೆ ಸಾಕಷ್ಟು ಟ್ರೋಲ್​ಗಳು ಕೂ ಡ ಹರಿದಾಡಿವೆ.

ಆಹಾರ, ಆಹಾರೋತ್ಪನ್ನ, ದವಸ ಧಾನ್ಯ, ತರಕಾರಿ, ಹಣ್ಣು, ಹಾಲು, ಮೀನು, ಮಾಂಸ, ಪಶು ಆಹಾರ, ಫಾರ್ಮಸಿ, ವೈದ್ಯಕೀಯ ಕೇಂದ್ರಗಳು, ಪತ್ರಿಕೆ, ಬ್ಯಾಂಕ್, ಎಟಿಎಂ, ಸ್ಟಾಕ್ ಎಕ್ಸ್​ಚೇಂಜ್, ಟೆಲಿ ಕಮ್ಯುನಿಕೇಷನ್, ಇಂಟರ್ನೆಟ್, ಬ್ರಾಡ್ ಕಾಸ್ಟಿಂಗ್​ ಮತ್ತು ಕೇಬಲ್ ಸರ್ವೀಸ್, ಐಟಿ ಮತ್ತು ಐಟಿ ಸಂಬಂಧಿತ ಸೇವೆಗಳು ಇರಲಿವೆ. ದೆಹಲಿಯಲ್ಲಿ ಭಾನುವಾರ 25,462 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು ಪಾಸಿಟಿವಿಟಿ ದರ 29.74 ಆಗಿದೆ. ಕಳೆದ 24ಗಂಟೆಗಳಲ್ಲಿ ಕೊವಿಡ್ ನಿಂದ 161 ಮಂದಿ ಸಾವಿಗೀಡಾಗಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ 6 ದಿನಗಳ ಲಾಕ್​ಡೌನ್; ಇಂದು ರಾತ್ರಿಯಿಂದಲೇ ಕಠಿಣ ನಿಯಮ ಜಾರಿ: ಅರವಿಂದ ಕೇಜ್ರಿವಾಲ್

ದೆಹಲಿಯಲ್ಲಿ ಲಾಕ್​ಡೌನ್ ಘೋಷಣೆಯಾದ ಕೂಡಲೇ ಮದ್ಯದಂಗಡಿ ಮುಂದೆ ಜನವೋ ಜನ