ಹಿಂದೆಲ್ಲಾ 70, 80 ರ ದಶಕಗಳಲ್ಲಿ ದೊಡ್ಡ ದೊಡ್ಡ ಕಂಪೆನಿಗಳು ಏರ್ಪಡಿಸುವ ಸಭೆಗಳಲ್ಲಿ ಪಾಲ್ಗೊಳ್ಳುವ ಸದಸ್ಯರಿಗೆ ಮನೋರಂಜನೆಯನ್ನು ನೀಡಲು ಡಾನ್ಸರ್‌ಗಳಿಂದ ಮಾದಕ ನೃತ್ಯ ಮಾಡಿಸುವ ಟ್ರೆಂಡ್ ಇತ್ತು. ಕೆಲವೊಂದು ಹಿಂದಿನ ಕಾಲದ ಸಿನಿಮಾಗಳಲ್ಲೂ ಕೂಡಾ ಇಂತಹ ದೃಶ್ಯಗಳು ಕಾಣಸಿಗುತ್ತವೆ. ಆದರೆ ಈಗ ಕಾಲ ಬದಲಾಗಿದೆ. ಯಾವುದೇ ಕಂಪೆನಿಯ ಸಭೆಗಳಾಗಿರಬಹುದು ತುಂಬಾನೇ ಶಿಸ್ತುಬದ್ಧವಾಗಿ ನಡೆಯುತ್ತದೆ. ಹೀಗಿರುವಾಗ ಇಲ್ಲೊಂದು ಸುದ್ದಿ ವಾಹಿನಿ ತನ್ನ ಕಂಪೆನಿಯ ಸಭೆಯಲ್ಲಿ ʼಸೆಕ್ಸಿ ಸಾಂಟಾಸ್ʼ ತಂಡದಿಂದ ನೃತ್ಯ ಪ್ರದರ್ಶನನ್ನು ಮಾಡಿಸಿದ್ದು, ಈ ಕುರಿತ ವಿಡಿಯೋ ಫೂಟೇಜ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸುದ್ದಿಯ ವಾಹಿನಿಯ ಈ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದು, ಇಲ್ಲಿನ ಸೆವೆನ್ ನೆಟ್‌ವರ್ಕ್ ಮೀಡಿಯಾದ ಪೇರೆಂಟ್ ಕಂಪೆನಿ ಸೆವೆನ್ ವೆಸ್ಟ್ ಮೀಡಿಯಾದ ಸಭೆಯಲ್ಲಿ ಈ ಅನಾಚಾರ ನಡೆದಿದೆ. ಕಳೆದ ಶುಕ್ರವಾರ (ಆಗಸ್ಟ್ 23) ಪಾರ್ತ್ ನಗರದಲ್ಲಿರುವ ಟೌನ್ ಹಾಲ್ ಅಲ್ಲಿ ಸೆವೆನ್ ವೆಸ್ಟ್ ಮೀಡಿಯಾ ಆಯೋಜಿಸಿದ ಸಭೆಯಲ್ಲಿ ʼಸೆಕ್ಸಿ ಸಾಂಟಾಸ್ʼ ತಂಡದವರಿಂದ ನೃತ್ಯ ಮಾಡಿಸಲಾಗಿತ್ತು. ಇಲ್ಲಿ ನಾಲ್ವರು ಯುವತಿಯರು ತಲೆಗೆ ಟೋಪಿ ಹಾಗೂ ಕೆಂಪು ಬಣ್ಣದ ತುಂಡುಡುಗೆ ತೊಟ್ಟು ಮಾದಕ ನೃತ್ಯ ಪ್ರದರ್ಶನ ನೀಡಿದ್ದರು. ಇದರಿಂದ ಮುಜುಗರಕ್ಕೊಳಗಾಗಿ ಸಭೆಯಾಯಲ್ಲಿ ಭಾಗಿಯಾಗಿದ್ದ ಮಹಿಳಾ ಉದ್ಯೋಗಿಗಳು ಸಭೆಯಿಂದ ಎದ್ದು ಹೋಗಿದ್ದಾರೆ. ಈ ದೃಶ್ಯ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಸೆವೆನ್ ವೆಸ್ಟ್ ಮೀಡಿಯಾ 1980 ರ ದಶಕದ ಸಂಸ್ಕೃತಿಯನ್ನೇ ಮುಂದುವರೆಸುತ್ತಿದೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.
ಇದನ್ನೂ ಓದಿ:
A Seven West Media staff meeting last Friday featured women dancers dressed as sexy Santas. I thought this was a parody news report until I saw it confirmed by numerous news media. So Seven is STILL stuck in the 1970’s. 🙄 #media #sexism #journalism pic.twitter.com/mf0XxFyh9N
— Peter Murphy (@PeterWMurphy1) August 27, 2024
ಪೀಟರ್ ಮರ್ಫಿ (Peter Murphy) ಎಂಬವರು ಈ ಕುರಿತ ಪೋಸ್ಟ್ ಒಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಸಿಬ್ಬಂದಿ ಸಭೆಯಲ್ಲಿ ಮಹಿಳಾ ನೃತ್ಯಗಾರ್ತಿಯರಿಂದ ಮಾದಕ ಡಾನ್ಸ್ ಮಾಡಿಸಿದ ಸೆವೆನ್ ವೆಸ್ಟ್ ಮೀಡಿಯಾ. ಈ ಕಂಪೆನಿ ಇನ್ನೂ 1970 ರ ದಶಕದಲ್ಲಿಯೇ ಸಿಲುಕಿಕೊಂಡಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಇವರ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಸೆವೆನ್ ವೆಸ್ಟ್ ಮೀಡಿಯಾ 1980 ರ ದಶಕದ ಸಂಸ್ಕೃತಿಯನ್ನೇ ಮುಂದುವರೆಸುತ್ತಿದೆ ಮತ್ತು ಮಹಿಳೆಯರನ್ನು ಕೀಳು ಮಟ್ಟದಲ್ಲಿ ಕಾಣುತ್ತಿದೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:17 pm, Thu, 29 August 24