AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಆಟೋದಲ್ಲಿ ಮ್ಯಾಗಜಿನ್​, ಪೇಪರ್​, ಐ-ಪ್ಯಾಡ್​, ಚಾಕೋಲೇಟ್​ ಎಲ್ಲವೂ ಪಡೆಯಬಹುದು: ‘ಅಮೇಜಿಂಗ್​ ಆಟೋ’ ಕಂಡು ಬೆರಗಾದ ನೆಟ್ಟಿಗರು

ಚೆನ್ನೈನ 38 ವರ್ಷದ ಅಣ್ಣಾಮಲೈ ಎನ್ನುವ ವ್ಯಕ್ತಿ ತನ್ನ ಆಟೋ ಹತ್ತುವ ಪ್ರಯಾಣಿಕರಿಗೆ ರಾಜಾತಿಥ್ಯ ನೀಡಿ ಅತಿಥಿ ದೇವೋ ಭವ ಎನ್ನುವ ಮೂಲಕ ಸಖತ್​ ಸುದ್ದಿಯಲ್ಲಿದ್ದಾರೆ.

ಈ ಆಟೋದಲ್ಲಿ ಮ್ಯಾಗಜಿನ್​, ಪೇಪರ್​, ಐ-ಪ್ಯಾಡ್​, ಚಾಕೋಲೇಟ್​ ಎಲ್ಲವೂ ಪಡೆಯಬಹುದು: 'ಅಮೇಜಿಂಗ್​ ಆಟೋ' ಕಂಡು ಬೆರಗಾದ ನೆಟ್ಟಿಗರು
ಆಟೋ ಡ್ರೈವರ್​
TV9 Web
| Edited By: |

Updated on:Feb 04, 2022 | 9:49 AM

Share

ಸಾಮಾನ್ಯವಾಗಿ ಆಟೋ ಡ್ರೈವರ್​ಗಳೆಂದರೆ ಪ್ರಯಾಣಕ್ಕೆ ನಿಗದಿಯಾದ ಹಣಕ್ಕಿಂತ ಹೆಚ್ಚು ಪಡೆಯುತ್ತಾರೆ, ತಡರಾತ್ರಿಯಾದರೆ ಬಾಡಿಗೆಗೆ ಬರುವುದಿಲ್ಲ ಹೀಗೇ ಹತ್ತು ಹಲವು ಪುಕಾರುಗಳಿರುತ್ತವೆ. ಅದರ ನಡುವೆ ಚೆನ್ನೈನ ಆಟೋ ಡ್ರೈವರ್ (Auto Driver)​ ಒಬ್ಬರು ಪ್ರಯಾಣಿಕರನ್ನು ದೇವರೆನ್ನುವ ರೀತಿಯಲ್ಲಿ ನೋಡಿಕೊಳ್ಳುವ ಮೂಲಕ ಈಗ ಎಲ್ಲೆಡೆ ಸುದ್ದಿಯಾಗಿದ್ದಾರೆ. ಹೌದು ಚೆನ್ನೈನ (Chennai) 38 ವರ್ಷದ ಅಣ್ಣಾಮಲೈ ಎನ್ನುವ ವ್ಯಕ್ತಿ ತನ್ನ ಆಟೋ ಹತ್ತುವ ಪ್ರಯಾಣಿಕರಿಗೆ ರಾಜಾತಿಥ್ಯ ನೀಡಿ ಅತಿಥಿ ದೇವೋ ಭವ (Atithi Devo Bhava) ಎನ್ನುವ ಮೂಲಕ ಸಖತ್​ ಸುದ್ದಿಯಲ್ಲಿದ್ದಾರೆ.

ಅಣ್ಣಾದುರೈ ಎಂದೇ ಹೆಸರು ಪಡೆದ ಇವರು ಸರ್ಕಾರ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚು ಹಣ ಪಡೆಯುವುದಿಲ್ಲ. ಇವರ ಆಟೋದಲ್ಲಿ ಫ್ರೀ ವೈ ಫೈ,  25 ಬಗೆಯ ಮ್ಯಾಗಜಿನ್​ಗಳು, ನ್ಯೂಸ್​ ಪೇಪರ್​, ತಿನ್ನಲು ಚಾಕಲೇಟ್​ಗಳಿವೆ. ಇದರ ಜತೆಗೆ ಪ್ರಯಾಣಿಕರಿಗೆ ಬಳಸಲು ಐಪಾಡ್ ಪ್ರೋ, ಟಾಬ್​,​ ಲ್ಯಾಪ್​ಟಾಪ್​,  ಜತೆಗೆ ಅಮೆಜಾನ್​ ಕೂಡ ಬಳಸಬಹುದಾಗಿದೆ. ಇವರ ಆಟೋವನ್ನು ‘ಅಮೇಜಿಂಗ್​ ಆಟೋ’ ಎಂದೇ ಜನ ಕರೆಯುತ್ತಾರೆ.

ಈ ಕುರಿತು ಅವರ ಮಾತನಾಡಿದ್ದು ಇಂಡಿಯಾ ಟುಡೆ ವರದಿ ಮಾಡಿದೆ. ತಮ್ಮ ಆಟೋ ಚಲಾಯಿಸುವ ವೃತ್ತಿಯ ಬಗ್ಗೆ ಮಾತನಾಡುವ ಅವರು  12 ವರ್ಷಗಳ ಹಿಂದೆ ಆಕಸ್ಮಾತ್​ ಆಗಿ ನಾನು ಆಟೋ ಓಡಿಸಲು ಆರಂಭಿಸಿದೆ. ನನಗೆ ಪ್ರಯಾಣಿಕರೇ ದೇವರಂತೆ ಅವರನ್ನು ನಾನು ಖುಷಿಯಾಗಿಟ್ಟರೆ ಅವರು ಎಂದಿಗೂ ನನ್ನನ್ನು ಮರೆಯುವುದಿಲ್ಲ ಎನ್ನುವ ಅವರು ನನ್ನ ಈ ಎಲ್ಲಾ ಸೌಲಭ್ಯಗಳಿಂದ ಖುಷಿಗೊಂಡ ಪ್ರಯಾಣಿಕರು  ಮತ್ತೆ ನನ್ನ ಆಟೋ ಹತ್ತುತ್ತಾರೆ ಹೀಗಾಗಿ ನನಗೆ ನಷ್ಟವಾಗುವುದಿಲ್ಲ. ಅಲ್ಲದೆ ಬೇರೆ ಆಟೋ ಡ್ರೈವರ್​ಗಳಿಗಿಂತ ಮೂರು ಪಟ್ಟು ಹೆಚ್ಚಾಗಿಯೇ ದುಡಿಯುತ್ತೇನೆ. ಹೀಗಾಗಿಯೇ ನನ್ನ ಆಟೋದಲ್ಲಿ  ಎಲ್ಲಾ ಸೌಲಭ್ಯಗಳು ಸಿಗುವಂತೆ ಮಾಡಿದ್ದೇನೆ ಎಂದಿದ್ದಾರೆ.

ಅಣ್ಣಾದುರೈ ಕೊರೊನಾ ಲಾಕ್​ಡೌನ್​ ಸಮಯದಲ್ಲಿ  ಶಿಕ್ಷಕರಿಗೆ ಮತ್ತು ನರ್ಸ್​ಗಳಿಗೆ ಉಚಿತವಾಗಿ ಆಟೋದಲ್ಲಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿದ್ದರು. ಈ ಕುರಿತು ಇತ್ತೀಚೆಗೆ ಆನಂದ್​ ಮಹೀಂದ್ರಾ ಟ್ವೀಟ್​ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಇವರ ಸ್ಟೋರಿ ವೈರಲ್​ ಆಗಿದೆ.

ಇದನ್ನೂ ಓದಿ:

Viral News: ಕಪ್ಪು ಕಣ್ಣು, ಕೊಂಬು, ಅರ್ಧ ಕಿವಿ: ಇದು ರಾಕ್ಷಸನ ಅವತಾರವಂತೆ..!

Published On - 9:48 am, Fri, 4 February 22