Video; ರಸ್ತೆಬದಿಯಲ್ಲಿ ಗುಲಾಬಿ ಮಾರುತ್ತಿದ್ದ ಪುಟ್ಟ ಬಾಲಕಿಗೆ ಕಪಾಳಮೋಕ್ಷ ಮಾಡಿದ ಆಟೋ ಚಾಲಕ

ಬಿದಿಯಲ್ಲಿ ಗುಲಾಬಿ ಮಾರುತ್ತಿದ್ದ ಪುಟ್ಟ ಬಾಲಕಿಯ ಮೇಲೆ ಆಟೋಚಾಲಕ ಕೈ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಶಿಖರ್​​ ಎಂಬ ಕಂಟೆಂಟ್ ಕ್ರಿಯೇಟರ್​​​ ಈ ವಿಡಿಯೋವನ್ನು ಮಾಡಿ @ride_with_shikhar (ಶಿಖರ್​) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ನೋಡಿದ ಅನೇಕರು ಚಾಲಕನ ವರ್ತನೆಗೆ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಆಕೆಗೆ ಕಪಾಳಮೋಕ್ಷ ಮಾಡಲು ಕಾರಣವೇನು? ಇದರಿಂದ ಆಕೆಗೆ ಆಗಿರುವ ನೋವಿನ ಬಗ್ಗೆ ಈ ವಿಡಿಯೋದಲ್ಲಿ ತೋರಿಸಲಾಗಿದೆ ನೋಡಿ.

Video; ರಸ್ತೆಬದಿಯಲ್ಲಿ ಗುಲಾಬಿ ಮಾರುತ್ತಿದ್ದ ಪುಟ್ಟ ಬಾಲಕಿಗೆ ಕಪಾಳಮೋಕ್ಷ ಮಾಡಿದ ಆಟೋ ಚಾಲಕ
ವೈರಲ್​​ ವಿಡಿಯೋ
Edited By:

Updated on: Jul 15, 2025 | 11:54 AM

ರಸ್ತೆ ಬದಿಗಳಲ್ಲಿ ಕೆಲವೊಂದು ವಸ್ತುಗಳನ್ನು ಮಾರಾಟ ಮಾಡಿ ಜೀವನ ನಡೆಸುವ ಸುಮಾರು ಜನರನ್ನು ದಿನನಿತ್ಯ ಕಾಣುತ್ತೇವೆ. ಟ್ರಾಫಿಕ್​​ ಬಿದ್ದಾಗ ಕಾರು, ಬೈಕ್​​​ ಹತ್ತಿರ ಬಂದು ತಮ್ಮಲ್ಲಿರುವ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಕೆಲವೊಂದು ಬಾರಿ ಅವರು ಪೀಡಿಸಿದಾಗ ಸಿಟ್ಟಾಗುವುದು ಉಂಟು, ಇದು ನಮಗೆ ಕಿರಿಕಿರಿ ಎಂದರೂ, ಅವರಿಗೆ ಹೊಟ್ಟೆಪಾಡು ಎಲ್ಲವನ್ನು ಸಹಿಕೊಂಡು ಹೋಗುತ್ತಾರೆ.  ಇಲ್ಲೊಂದು ಅಂತಹದೇ ಘಟನೆಯೊಂದು ನಡೆದಿದ್ದು, ಆಟೋಚಾಲಕನೊಬ್ಬ (Auto driver )  ಗುಲಾಬಿ ಮಾರುತ್ತಿದ್ದ ಹುಡುಗಿಗೆ ಕಪಾಳಮೋಕ್ಷ ಮಾಡಿ ಅತಿಯಾಗಿ ವರ್ತಿಸಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಈ ಬಗ್ಗೆ ಅನೇಕರು ಸೋಶಿಯಲ್​​​ ಮೀಡಿಯಾದದಲ್ಲಿ ಆಟೋ ಚಾಲಕನ ವರ್ತನೆಯನ್ನು ಖಂಡಿಸಿದ್ದಾರೆ. ಶಿಖರ್​​ ಎಂಬ ಕಂಟೆಂಟ್ ಕ್ರಿಯೇಟರ್​​​ ಈ ವಿಡಿಯೋವನ್ನು ಮಾಡಿ @ride_with_shikhar (ಶಿಖರ್​) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ವಿಡಿಯೋದ ಆರಂಭದಲ್ಲಿ ರಸ್ತೆ ಡಿವೈಡರ್​​​​​​ ಬದಿಯಲ್ಲಿ ಕುಳಿತು ಹುಡುಗಿಯೊಬ್ಬಳು ಅಳುತ್ತಿರುವುದನ್ನು ತೋರಿಸಿದ್ದಾರೆ. ಆಕೆ ಆಳುತ್ತಿರುವುದನ್ನು ನೋಡಿ ಶಿಖರ್ ಪ್ರಶ್ನೆ ಮಾಡಿದ್ದಾರೆ.

ಆದರೆ ಆ ಹುಡುಗಿ ಯಾವುದಕ್ಕೂ ಉತ್ತರಿಸಿಲ್ಲ, ಅಳುತ್ತಳೆ ಇದ್ದಳು. ಬೈಕ್​​ನಲ್ಲಿದ್ದ ಶಿಖರ್ ಎಲ್ಲವನ್ನು ವಿಡಿಯೋ ಮಾಡಿದ್ದಾರೆ. ತನ್ನ ಬೈಕ್​​​ ಮುಂದೆ ಇದ್ದ ಆಟೋ ಚಾಲಕ ಆಕೆಗೆ ಕಪಾಳಮೋಕ್ಷ ಮಾಡಿದ್ದಾನೆ. ಸಿಗ್ನಲ್​​​ ಬಿಟ್ಟ ತಕ್ಷಣ ಅಲ್ಲಿಂದ ಆಟೋ ಚಾಲಕ ಪರಾರಿಯಾಗಿದ್ದಾನೆ ಎಂದು ತಮ್ಮ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಪಾಪ ಆ ಪುಟ್ಟ ಹುಡುಗಿ ರಸ್ತೆಯಲ್ಲಿ ನಿಂತು ಕಣ್ಣೀರು ಹಾಕಿದ್ದಾಳೆ. ಈ ದೃಶ್ಯವನ್ನು ನೋಡಿ, ಶಿಖರ್ ಭಾವುಕನಾಗಿ ಹುಡುಗಿಯನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಆಕೆಯಿಂದ ಗುಲಾಬಿಯನ್ನು ಖರೀದಿಸಲು ಮುಂದಾಗಿದ್ದಾರೆ. ಆದರೆ ಆಕೆ ಮಾತ್ರ ಕಣ್ಣೀರು ಹಾಕುತ್ತ ಅಲ್ಲೇ ನಿಂತಿದ್ದಳು.

ವಿಡಿಯೋ ಇಲ್ಲಿದೆ ನೋಡಿ:

ಘಟನೆಯಿಂದ ಹುಡುಗಿ ಭಯಭೀತಳಾಗಿದ್ದರಿಂದ ಶಿಖರ್ ಹಣ ನೀಡಿದ್ರು, ಅದನ್ನು ತೆಗೆದುಕೊಳ್ಳಲು ನಿರಕಾರಿಸಿದ್ದಾಳೆ. ಇನ್ನು ಶಿಖರ್ ಈ ಬಗ್ಗೆ ಇನ್ಸ್ಟಾದಲ್ಲಿ ಹೀಗೆ ಬರೆದುಕೊಂಡಿದ್ದಾರೆ. “ಆ ಸಮಯದಲ್ಲಿ ನನಗೆ ಅವಳಿಗೆ ಹೇಗೆ ಸಹಾಯ ಮಾಡಬೇಕೆಂದು ಅರ್ಥವಾಗಲಿಲ್ಲ. ಗುಲಾಬಿಗಳನ್ನು ಮಾರುವ ಬದಲು ನಾನು ಅವಳಿಗೆ ಹಣವನ್ನು ನೀಡಿದ್ದೇನೆ, ಆದರೆ ಅವಳು ನಿರಾಕರಿಸಿ ಅಳುತ್ತಲೇ ಇದ್ದಳು” ಎಂದು ಹೇಳಿಕೊಂಡಿದ್ದಾರೆ. ನಾನು ಅವಳ ತಲೆಯ ಮೇಲೆ ನನ್ನ ಕೈ ಇಟ್ಟು ಸಮಾಧಾನಪಡಿಸಿದೆ. ಜತೆಗೆ ಆಕೆಗೆ ಹೇಳಿದೆ, ಈ ರೀತಿಯ ವಾಹನಗಳ ಹಿಂದೆ ಓಡಬಾರದು ಎಂದು. ಕೊನೆಗೂ ಆಕೆ ನನ್ನ ಸಹಾಯವನ್ನು ಸ್ವೀಕಾರ ಮಾಡಲೇ ಇಲ್ಲ.  ಅವಳು ಹಣ ಸಿಗಲಿಲ್ಲ ಎಂದು ಅಳಲಿಲ್ಲ, ದುಡಿಯುವ ಕೈಗಳ ಮೇಲೆ ಈ ಜಗತ್ತು ದಬ್ಬಾಳಿಕೆ ಮಾಡುತ್ತದೆ ಎಂಬುದು ಆಕೆಯ ನೋವು.

ಇದನ್ನೂ ಓದಿ: ತಾಯಿ-ಮಗುವಿನ ಪುನರ್ಮಿಲನ; ಮರಳಿ ಅಮ್ಮನ ಮಡಿಲು ಸೇರಿದ ಮರಿಯಾನೆಯ ಖುಷಿ ನೋಡಿ

ಈ ವಿಡಿಯೋ 42 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಹಾಗೂ ಹಲವು ಬಳಕೆದಾರರೂ ಈ ವಿಡಿಯೋಗೆ ಕಮೆಂಟ್​​ ಮಾಡಿದ್ದಾರೆ. ಒಬ್ಬ ಬಳಕೆದಾರರು, “ಅವಳು ಹಣ ತೆಗೆದುಕೊಳ್ಳಲಿಲ್ಲ. ಈ ಘಟನೆ ಆಕೆಗೆ ಎಷ್ಟು ನೋವು ಉಂಟು ಮಾಡಿರಬೇಡ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ ಆಕೆಗೆ ಏಕೆ ಆಟೋಚಾಲಕ ಹೊಡೆದ, ಈ ರೀತಿಯ ಕಿರುಕುಳ ಸರಿಯಲ್ಲ ಎಂದು ಹೇಳಿದ್ದಾರೆ. ಇನ್ನು ಕೆಲವರು ಈ ಹುಡುಗಿ ಬೀದಿಗಳಲ್ಲಿ ಇರಬಾರದು. ಯಾವುದಾದರೂ ಎನ್‌ಜಿಒ ಮುಂದೆ ಬರಬೇಕು. ಆಕೆಯನ್ನು ಈ ಕೆಲಸಕ್ಕೆ ಕಳುಹಿಸಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ವೈರಲ್​ಸ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ