ಕಾಬೂಲ್: ಅಫ್ಘಾನಿಸ್ತಾನದಿಂದ ಜನರನ್ನು ಸ್ಥಳಾಂತರಿಸುವಾಗ ವಿಮಾನದಲ್ಲಿ ಜನಿಸಿದ ಅಫ್ಘಾನ್ ಹೆಣ್ಣು ಮಗುವಿಗೆ ರೀಚ್ ಎಂದು ನಾಮಕರಣ ಮಾಡಲಾಗಿದೆ. ಸಿ-17 ಮಿಲಿಟರಿ ವಿಮಾನದಲ್ಲಿ ಗರ್ಭಿಣಿಯನ್ನು ಜರ್ಮನಿಗೆ ಸ್ಥಳಾಂತರಿಸುವ ವೇಳೆ ವಿಮಾನದಲ್ಲಿ ಮಗು ಜನಿಸಿದೆ. ಪುಟ್ಟ ಕಂದಮ್ಮನ ಪೋಷಕರು ವಿಮಾನ ಕರೆ ಚಿಹ್ನೆ ರೀಚ್ ಎಂದು ಮಗುವಿಗೆ ನಾಮಕರಣ ಮಾಡಿದ್ದಾರೆ.
ಸಾರಿಗೆ ವಿಮಾನ ಕರೆ ಚಿಹ್ನೆ ರೀಚ್ 828. ಅಫ್ಘಾನಿಸ್ತಾನದಿಂದ ಸ್ಥಳಾಂತರದ ಸಮಯದಲ್ಲಿ ವಿಮಾನ ಹಾರಟದಲ್ಲಿದ್ದ ವೇಳೆಯಲ್ಲಿ ಗರ್ಭಿಣಿ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಅಧಿಕಾರಿ ಜನರಲ್ ಟಾಡ್ ವೋಲ್ಟರ್ಸ್ ಹೇಳಿದ್ದಾರೆ.
ವಿಮಾನದಲ್ಲಿ ಜರ್ಮನಿಗೆ ತೆರಳುತ್ತಿದ್ದ ವೇಳೆ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಗರ್ಭಿಣಿ ಕಡಿಮೆ ರಕ್ತದೊತ್ತಡವನ್ನು ಅನುಭವಿಸಬೇಕಾಯಿತು. ವಿಮಾನದಲ್ಲಿ ಉಸಿರಾಟಕ್ಕೆ ತೊಂದರೆಯಾಗದಂತೆ ಪೈಲಟ್ ಕಡಿಮೆ ಎತ್ತರದಲ್ಲಿ ವಿಮಾನವನ್ನು ಹಾರಿಸಿದ್ದಾರೆ. 86ನೇ ವೈದ್ಯಕೀಯ ಗುಂಪಿನ ಸದಸ್ಯರು ಗರ್ಭಿಣಿ ಮಗುವಿಗೆ ಜನ್ಮ ನೀಡಲು ಸಹಾಯ ಮಾಡಿದ್ದಾರೆ. ಮಗು ಮತ್ತು ತಾಯಿ ಸುರಕ್ಷಿತರಾಗಿದ್ದಾರೆ ಎಂಬುದು ವರದಿಗಳಿಂದ ತಿಳಿದು ಬಂದಿದೆ.
ಇದನ್ನೂ ಓದಿ:
ಧಾರವಾಡದಲ್ಲಿ ಅಪ್ಘಾನಿಸ್ತಾನದ ವಿದ್ಯಾರ್ಥಿಗಳು; ತಾಯ್ನಾಡಿನ ದುಸ್ಥಿತಿ, ಕುಟುಂಬದವರನ್ನು ನೆನೆದು ಕಣ್ಣೀರು
ಅಮೆರಿಕದ ವೈಮಾನಿಕ ದಾಳಿಯ ನೆರವಿನಿಂದ ತಾಲಿಬಾನ್ನ್ನು ಹಿಮ್ಮೆಟ್ಟಿಸಿದ ಅಫ್ಘಾನ್ ಭದ್ರತಾ ಪಡೆ
(Baby girl born on Afghanistan evacuation flight named reach )
Published On - 11:24 am, Thu, 26 August 21