ಪಾಕಿಸ್ತಾನದಲ್ಲಿ ಪುರುಷರು ತಮ್ಮ ಶೀಲ ಕಾಪಾಡಿಕೊಳ್ಳಲು ಹೆಣಗುವ ಸ್ಥಿತಿ ನಿರ್ಮಾಣವಾಗಿದೆ!
ಪಾಕಿಸ್ತಾನದ ಮುಸ್ಸದಿಕ್ ಖಾನ್ ಎನ್ನುವವರು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇಲ್ಲಿ ದೌರ್ಜನ್ಯಕ್ಕೆ (?) ಒಳಗಾಗಿರುವ ವ್ಯಕ್ತಿ ರಸ್ತೆ ಬದಿ ಹಣ್ಣು ಮಾರುವ ವ್ಯಾಪಾರಿಯಾಗಿದ್ದಾನೆ. ಈ ಮಹಿಳೆ ಅವನಲ್ಲಿಗೆ ಬಂದು ಒಂದೆರಡು ಕ್ಷಣ ಏನ್ನನ್ನೋ ಹೇಳುತ್ತಾಳೆ.
ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ತಮ್ಮ ದೇಶದ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಬಹುದಾದ ಸಂಗತಿ ಇದು. ಬೇರೆ ಎಲ್ಲ ದೇಶಗಳಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಕಳವಳ ಇದ್ದರೆ, ಪಾಕಿಸ್ತಾನದಲ್ಲಿ ಮಾತ್ರ ಆ ಚಿಂತೆಯೇ ಇಲ್ಲ. ಆ ದೇಶದಲ್ಲಿ ಮಹಿಳೆಯರು ಸೇಫ್ ಅದರೆ ಪುರುಷರೇ ಸೇಫಲ್ಲ ಮಾರಾಯ್ರೇ. ಬೀದಿಗಳಲ್ಲಿ ಪುರುಷರು ಮಹಿಳೆಯರಿಂದ ತಮ್ಮ ಶೀಲ ಕಾಪಾಡಿಕೊಳ್ಳಲು ಕಷ್ಟ ಪಡುವ ಸ್ಥಿತಿ ಅಲ್ಲಿ ನಿರ್ಮಾಣವಾಗಿದೆ. ಹಾಡು ಹಗಲೇ ಅವರ ಮೇಲೆ ಲೈಂಗಿಕ ಸ್ವರೂಪದ ದೌರ್ಜನ್ಯಗಳು ನಡೆಯುತ್ತಿವೆ. ನಂಬಿಕೆ ಬರ್ತಿಲ್ವಾ?
ಆರು ಸೆಕೆಂಡ್ಗಳ ಈ ವಿಡಿಯೋ ನೋಡಿ.
Another Heart breaking Case in Lahore ? ?. Pakistan is not safe for Mens.#ayeshaakramexposed#Lahore #lahoreincident#minar_e_pakistan #IqrarulHassan#ramizraja #ayeshaakram #Lanat #ViratKohli #MoneyHeist #400men#حسن_نثار_بےشرم_بےحیا pic.twitter.com/YyeeJhg5TG
— Mussadiq Khan (@MussadiqKhan100) August 24, 2021
ಇದು ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಒಂದಾಗಿರುವ ಲಾಹೋರ್ನಲ್ಲಿ ಹಾಡು ಹಗಲು ಪುರುಷನೊಬ್ಬನ ಮಾನ ಮಹಿಳೆಯಿಂದ ಹರಾಜಾದ ಘಟನೆ ಇದು! ಈಗ ನೀವೇ ಹೇಳಿ ಪುರುಷರಿಗೆ ಪಾಕಿಸ್ತಾನ ಸೇಫಾ? ಈ ಪುರುಷ ಅವಿವಾಹಿತನಾಗಿದ್ದರೆ ಯಾವ ಹೆಣ್ಣು ತಾನೆ ಅವನನ್ನು ಮದುವೆಯಾದಾಳು? ಇದು ಅವನ ಶೀಲದ ಪ್ರಶ್ನೆ ಸ್ವಾಮೀ..
ಪಾಕಿಸ್ತಾನದ ಮುಸ್ಸದಿಕ್ ಖಾನ್ ಎನ್ನುವವರು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇಲ್ಲಿ ದೌರ್ಜನ್ಯಕ್ಕೆ (?) ಒಳಗಾಗಿರುವ ವ್ಯಕ್ತಿ ರಸ್ತೆ ಬದಿ ಹಣ್ಣು ಮಾರುವ ವ್ಯಾಪಾರಿಯಾಗಿದ್ದಾನೆ. ಈ ಮಹಿಳೆ ಅವನಲ್ಲಿಗೆ ಬಂದು ಒಂದೆರಡು ಕ್ಷಣ ಏನ್ನನ್ನೋ ಹೇಳುತ್ತಾಳೆ. ಮರುಕ್ಷಣವೇ ಅವನ ಹಿಂಭಾಗಕ್ಕೆ ಕೈ ಹಾಕಿ ಅಲ್ಲಿಂದ ಸರಸರನೆ ನಡೆದು ಹೋಗುತ್ತಾಳೆ. ಅವಳು ದೂರ ಹೋಗುತ್ತಿದ್ದಂತೆ ಈ ವ್ಯಾಪಾರಿ ಅವಳು ಮುಟ್ಟಿದ ಜಾಗವನ್ನು ತಾನೂ ಮುಟ್ಟಿ ಪರೀಕ್ಷಿಸಿಕೊಳ್ಳುತ್ತಾನೆ. ಏನಾದರೂ ತೆಗೆದುಕೊಂಡು ಹೋದಳೋ ಇಟ್ಟು ಹೋದಳೋ ಅನ್ನೋದು ಅವನ ಆತಂಕವಾಗಿರಬಹುದು!
ತನ್ನ ಖಾಸಗಿ ಭಾಗವನ್ನು ಮಹಿಳೆ ಆಸಭ್ಯವಾಗಿ ಮುಟ್ಟಿದಳೆಂದು ಹಣ್ಣಿನ ವ್ಯಾಪಾರಿ ದೂರು ನೀಡಿರಬಹುದಾದ ಬಗ್ಗೆ ನಮಗೆ ಮಾಹಿತಿ ಇಲ್ಲ. ಮುಸ್ಸದಿಕ್ ಖಾನ್ ಅವರನ್ನೇ ಕೇಳಬೇಕು