‘ತಾಲಿಬಾನಿಗಳು ಖಂಡಿತ ಕಾಶ್ಮೀರವನ್ನು ಗೆದ್ದು ಪಾಕಿಸ್ತಾನಕ್ಕೆ ಕೊಡುತ್ತಾರೆ’-ಸಿಕ್ಕಾಪಟೆ ಭರವಸೆಯಿಂದ ಮಾತನಾಡಿದ ಪಾಕ್ ನಾಯಕಿ ನೀಲಂ
ಭಾರತ ನಮ್ಮನ್ನು ವಿಭಜಿಸಿದೆ..ನಾವು ಮತ್ತೊಮ್ಮೆ ತಾಲಿಬಾನಿಗಳೊಟ್ಟಿಗೆ ಒಂದಾಗುತ್ತೇವೆ. ಪಾಕ್ ಸೇನೆ ಬಲಿಷ್ಠವಾಗಿದೆ ಎಂದು ಪಾಕಿಸ್ತಾನದ ಪಿಟಿಐ ಪಕ್ಷದ ನಾಯಕಿ ನೀಲಂ ಇರ್ಶಾದ್ ಶೇಖ್ ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಮರಳಿ ಬಂದಿರುವುದಕ್ಕೆ ಖುಷಿಪಟ್ಟು, ತಾಲಿಬಾನ್ಗೆ ಬೆಂಬಲ ಸೂಚಿಸಿದ ರಾಷ್ಟ್ರಗಳು ಕೆಲವೇ ಕೆಲವು. ಅದರಲ್ಲೂ ಅತ್ಯಂತ ಹೆಚ್ಚು ಸಂತೋಷವಾಗಿದ್ದು ಪಾಕಿಸ್ತಾನಕ್ಕೆ. ಅಲ್ಲಿ ಕೆಲವರು ಬಹಿರಂಗವಾಗಿಯೇ ಸಂಭ್ರಮಾಚರಣೆ ಮಾಡಿ, ತಾಲಿಬಾನ್ಗೆ ಬೆಂಬಲ ಸೂಚಿಸಿದ್ದಾರೆ. ಈ ಮಧ್ಯೆಯೇ ಪ್ರಧಾನಿ ಇಮ್ರಾನ್ ಖಾನ್ರ ತೆಹ್ರೀಕ್ ಇ ಇನ್ಸಾಫ್ ಪಕ್ಷದ (PTI) ನಾಯಕಿ ನೀಲಂ ಇರ್ಶಾದ್ ಶೇಖ್ ಅಂತೂ ಸಿಕ್ಕಾಪಟೆ ಖುಷಿ ವ್ಯಕ್ತಪಡಿಸಿದ್ದಾರೆ. ತಾಲಿಬಾನ್ ಜತೆ ಭುಜಕ್ಕೆ ಭುಜಕೊಟ್ಟು ನಾವು ನಿಲ್ಲುತ್ತೇವೆ ಎಂದು ಹೇಳಿಕೊಂಡಿದ್ದಾರೆ.
ನಮಗಾಗಿ ತಾಲಿಬಾನ್ ಕಾಶ್ಮೀರ ಗೆಲ್ಲುತ್ತಾರೆ.. ಪಾಕ್ ಸುದ್ದಿ ವಾಹಿನಿಯ ಡಿಬೇಟ್ನಲ್ಲಿ ಭಾಗವಹಿಸಿದ್ದ ನೀಲಂ ಶೇಖ್ ನೀಡಿರುವ ಇನ್ನೊಂದು ಹೇಳಿಕೆ ಇದೀಗ ಬಹುದೊಡ್ಡ ವಿವಾದ ಸೃಷ್ಟಿಸಿದೆ. ತಾಲಿಬಾನಿಗಳು ಖಂಡಿತ ಇಲ್ಲಿಗೆ ವಾಪಸ್ ಬರುತ್ತಾರೆ. ಕಾಶ್ಮೀರವನ್ನು ಗೆದ್ದು, ನಮಗೆ ಅಂದರೆ ಪಾಕಿಸ್ತಾನಕ್ಕೆ ಕೊಡುತ್ತಾರೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಇಮ್ರಾನ್ ಖಾನ್ ಪ್ರಧಾನಿಯಾದ ಮೇಲೆ ಪಾಕಿಸ್ತಾನ ಅಭಿವೃದ್ಧಿಗೊಂಡಿದೆ. ಈ ದೇಶದ ಮೌಲ್ಯ ಹೆಚ್ಚಿದೆ. ಪಾಕಿಸ್ತಾನದ ಜತೆ ನಾವು ಸದಾ ಇದ್ದೇವೆ ಎಂದು ತಾಲಿಬಾನಿಗಳು ನಮಗೆ ಹೇಳಿದ್ದಾರೆ. ಖಂಡಿತ ಕಾಶ್ಮೀರವನ್ನು ವಶಕ್ಕೆ ಪಡೆದು ನಂತರ ನಮಗೆ ಹಸ್ತಾಂತರ ಮಾಡುತ್ತಾರೆ ಎಂದು ನೀಲಂ ಹೇಳಿದ್ದಾರೆ.
ಅದಕ್ಕೆ ಪ್ರತಿಯಾಗಿ ಟಿವಿ ನಿರೂಪಕ, ಕಾಶ್ಮೀರ ಗೆದ್ದು ಪಾಕಿಸ್ತಾನಕ್ಕೆ ಕೊಡುತ್ತೇವೆ ಎಂದು ನಿಮಗೆ ಯಾರು ಹೇಳಿದ್ದಾರೆ ಎಂದು ನೀಲಂ ಬಳಿ ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ನೀಲಂ, ಭಾರತ ನಮ್ಮನ್ನು ವಿಭಜಿಸಿದೆ..ನಾವು ಮತ್ತೊಮ್ಮೆ ತಾಲಿಬಾನಿಗಳೊಟ್ಟಿಗೆ ಒಂದಾಗುತ್ತೇವೆ. ಪಾಕ್ ಸೇನೆ ಬಲಿಷ್ಠವಾಗಿದೆ. ನಮ್ಮ ಸರ್ಕಾರಕ್ಕೂ ಸಾಕಷ್ಟು ಅಧಿಕಾರವಿದೆ. ಎಲ್ಲಕ್ಕೂ ಮಿಗಿಲಾಗಿ ತಾಲಿಬಾನ್ ನಮ್ಮೊಂದಿಗೆ ಇದೆ..ಅವರಿಗೂ ನಮ್ಮ ಸರ್ಕಾರ ಬೆಂಬಲ ನೀಡುತ್ತದೆ. ಹಾಗಾಗಿ ಅವರು ಖಂಡಿತ ಕಾಶ್ಮೀರವನ್ನು ಗೆದ್ದು ನಮಗೆ ಕೊಡುತ್ತಾರೆ ಎಂದು ನೀಲಂ ಉತ್ತರಿಸಿದ್ದಾರೆ.
After selling the chooran of invading Kashmir for 75 years, now Pakistan should hope that Taliban wins Kashmir for them? ??♀️ pic.twitter.com/YvETuuS264
— Naila Inayat (@nailainayat) August 24, 2021
ಇಮ್ರಾನ್ ಖಾನ್ರಿಂದಲೂ ತಾಲಿಬಾನ್ಗೆ ಬೆಂಬಲ ಪಾಕಿಸ್ತಾನ ಯಾವಾಗಲೂ ತಾಲಿಬಾನಿಗಳಿಗೆ ಬೆಂಬಲ, ನೆರವು ನೀಡುತ್ತಿದೆ. ಅದು ಈಗ ಮತ್ತೆ ಆಡಳಿತ ಹಿಡಿದಿದ್ದೇ ಪಾಕಿಸ್ತಾನ ಮತ್ತು ಅದರ ಗುಪ್ತಚರ ಇಲಾಖೆ ಐಎಸ್ಐ ಸಲುವಾಗಿ ಎಂದು ಅಮೆರಿಕ ಸಂಸದರೊಬ್ಬರು ಹೇಳಿಕೆ ನೀಡಿದ್ದಾರೆ. ಅದಕ್ಕೆ ತಕ್ಕಂತೆ ತಾಲಿಬಾನ್ ಆಡಳಿತ ಬರುತ್ತಿದ್ದಂತೆ ಪಾಕಿಸ್ತಾನದಲ್ಲಿ ಸಂಭ್ರಮವೂ ಹೆಚ್ಚಿದೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೂಡ ತಾಲಿಬಾನ್ನ್ನು ಬೆಂಬಲಿಸಿ ಮಾತನಾಡಿದ್ದಾರೆ. ಅಫ್ಘಾನಿಸ್ತಾನದಲ್ಲಿರುವ ಮಾನಸಿಕ ಗುಲಾಮತನದ ಸರಪಳಿಯನ್ನು ತಾಲಿಬಾನಿಗಳು ಕತ್ತರಿಸಿದ್ದಾರೆ ಎಂದು ಹೇಳಿದ್ದರು.
ಇದನ್ನೂ ಓದಿ: ‘ಪೊಲೀಸರ ಗಡ್ಡದ ವಿಷಯದಲ್ಲಿ ನಾವು ಹಸ್ತಕ್ಷೇಪ ಮಾಡೋಲ್ಲ, ಅದು ಸಾಂವಿಧಾನಿಕ ಹಕ್ಕಲ್ಲ‘- ಅಲಹಾಬಾದ್ ಹೈಕೋರ್ಟ್