10 ಬಿಲಿಯನ್​ ವೀಕ್ಷಣೆ ಪಡೆದ ಮೊದಲ ಯುಟ್ಯೂಬ್​ ವಿಡಿಯೋ ಹೆಗ್ಗಳಿಕೆ ಗಳಿಸಿಕೊಂಡ ಬೇಬಿ ಶಾರ್ಕ್ ಡ್ಯಾನ್ಸ್​ ವಿಡಿಯೋ

| Updated By: Pavitra Bhat Jigalemane

Updated on: Jan 15, 2022 | 10:47 AM

ಯುಟ್ಯೂಬ್​ನಲ್ಲಿ 2016ರಲ್ಲಿ ಬಿಡುಗಡೆಯಾದ ಬೇಬಿ ಶಾರ್ಕ್​ ಡ್ಯಾನ್ಸ್​ ವಿಡಿಯೋ 10 ಬಿಲಿಯನ್​ ವೀಕ್ಷಣೆ ಪಡೆದಿದೆ. ಈ ಮೂಲಕ 10 ಬಿಲಿಯನ್​ ವೀಕ್ಷಣೆ ಪಡೆದ ಮೊದಲ ವಿಡಿಯೋ ಎನಿಸಿಕೊಂಡಿದೆ.

10 ಬಿಲಿಯನ್​ ವೀಕ್ಷಣೆ ಪಡೆದ ಮೊದಲ ಯುಟ್ಯೂಬ್​ ವಿಡಿಯೋ ಹೆಗ್ಗಳಿಕೆ ಗಳಿಸಿಕೊಂಡ ಬೇಬಿ ಶಾರ್ಕ್ ಡ್ಯಾನ್ಸ್​ ವಿಡಿಯೋ
ಬೇಬಿ ಶಾರ್ಕ್​ ಡ್ಯಾನ್ಸ್​
Follow us on

ಯುಟ್ಯೂಬ್​ನಲ್ಲಿ 2016ರಲ್ಲಿ ಬಿಡುಗಡೆಯಾದ ಬೇಬಿ ಶಾರ್ಕ್​ ಡ್ಯಾನ್ಸ್​ ವಿಡಿಯೋ 10 ಬಿಲಿಯನ್​ ವೀಕ್ಷಣೆ ಪಡೆದಿದೆ. ಈ ಮೂಲಕ 10 ಬಿಲಿಯನ್​ ವೀಕ್ಷಣೆ ಪಡೆದ ಮೊದಲ ವಿಡಿಯೋ ಎನಿಸಿಕೊಂಡಿದೆ. ಪಿಂಕ್​ಫಾಂಗ್​ ಬೇಬಿ ಶಾರ್ಕ್​ ಯುಟ್ಯೂಬ್​ ಚಾನೆಲ್​ ಬೇಬಿ ಶಾರ್ಕ್​ ಡ್ಯಾನ್ಸ್​ ಎನ್ನುವ ವಿಡಿಯೋವನ್ನು 2016ರ ಜೂನ್​18ರಂದು ಮೊದಲ ಬಾರಿಗೆ ಹಂಚಿಕೊಂಡಿತ್ತು. ಈವರೆಗೆ ವಿಡಿಯೋ 10,008,732,879 ವೀಕ್ಷಣೆಗಳನ್ನು ಪಡೆದಿದೆ. ಅತೀ ಹೆಚ್ಚು ವೀಕ್ಷಣೆ ಪಡೆದ ಎರಡನೇ ವಿಡಿಯೋವಾಗಿ ಪೋರ್ಟೊ ರಿಕನ್ ಪಾಪ್ ತಾರೆಗಳಾದ ಲೂಯಿಸ್ ಫೋನ್ಸಿ ಮತ್ತು ಡ್ಯಾಡಿ ಯಾಂಕೀ ಅವರ ಡೆಸ್ಪಾಸಿಟೊ ಹಾಡು ಸ್ಥಾನ ಪಡೆದುಕೊಂಡಿದೆ.

ವಿಡಿಯೋದಲ್ಲಿ ಇಬ್ಬರು ಚಿಕ್ಕ ಮಕ್ಕಳು  ಬೇಬಿ ಶಾರ್ಕ್​ ಹಾಡಿಗೆ ಡ್ಯಾನ್ಸ್​ ಮಾಡುತ್ತಾರೆ. ಅವರ ಹಿಂದೆ ಆನಿಮೇಟೆಡ್​ ಶಾರ್ಕ್​ ಮೀನುಗಳು ಹರಿದಾಡುವುದನ್ನು ಕಾಣಬಹುದು. ಬೇಬಿ ಶಾರ್ಕ್ ಹಾಡನ್ನು 2015 ರಲ್ಲಿ ಕೊರಿಯನ್-ಅಮೇರಿಕನ್ ಗಾಯಕ ಹೋಪ್ ಸೆಗೋಯಿನ್ ಹಾಡಿದ್ದರು. ಅವರಿಗೆ ಆಗ 10 ವರ್ಷ ವಯಸ್ಸಾಗಿತ್ತು. ಹಾಡನ್ನು 2021 ರಲ್ಲಿ ನಿಕೆಲೋಡಿಯನ್ ಪ್ರಿ-ಸ್ಕೂಲ್ ಸರಣಿ ಬೇಬಿ ಶಾರ್ಕ್‌ ಎನ್ನುವ ಬಿಗ್ ಶೋಗೆ ಅಳವಡಿಸಲಾಗಿದೆ. ಬೇಬಿ ಶಾರ್ಕ್ ಆಧಾರಿತ ಚಲನಚಿತ್ರವೂ ಸಹ ತಯಾರಿಯ ಹಂತದಲ್ಲಿದೆ. ಬೇಬಿ ಶಾರ್ಕ್ ಹಾಡು ಬಿಲ್ಬೋರ್ಡ್ ಹಾಟ್ 100 ನಲ್ಲಿ 32 ನೇ ಸ್ಥಾನದಲ್ಲಿದೆ.

ಬಿಲ್‌ಬೋರ್ಡ್ ಹಾಟ್ 100 ಎನ್ನುವುದು ಯುನೈಟೆಡ್ ಸ್ಟೇಟ್ಸ್‌ನ ಸಂಗೀತ ಉದ್ಯಮದ ರೆಕಾರ್ಡ್ ಚಾರ್ಟ್ ಆಗಿದೆ. ಇದನ್ನು ಬಿಲ್‌ಬೋರ್ಡ್ ನಿಯತಕಾಲಿಕವು ಸಾಪ್ತಾಹಿಕವಾಗಿ ಪ್ರಕಟಿಸುತ್ತದೆ. ಈ ಚಾರ್ಟ್​ನ ಶ್ರೇಯಾಂಕಗಳು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮಾರಾಟ, ರೇಡಿಯೋ ಪ್ಲೇ ಮತ್ತು ಆನ್‌ಲೈನ್ ಸ್ಟ್ರೀಮಿಂಗ್ ಅನ್ನು ಆಧರಿಸಿವೆ.

ಇದನ್ನೂ ಓದಿ:

ಕುರಿಗಳ ದೊಡ್ಡ ಹಿಂಡನ್ನು ನಾಯಿಮರಿ ಹೇಗೆ ನಿಭಾಯಿಸುತ್ತೆ ನೋಡಿ; ವೈರಲ್ ಆದ ವಿಡಿಯೋ ಇಲ್ಲಿದೆ