ಹಳೆಯ ಬಜಾಜ್ ಸ್ಕೂಟರ್​ನಿಂದ ಎಲೆಕ್ಟ್ರಿಕ್​ ರಾಟೆ; ವಿಡಿಯೋ ವೈರಲ್

| Updated By: ಶ್ರೀದೇವಿ ಕಳಸದ

Updated on: Dec 06, 2022 | 10:46 AM

Bajaj : ಆಂಧ್ರಪ್ರದೇಶದಲ್ಲಿ ಕಟ್ಟಡ ಕಾರ್ಮಿಕರು ಹಳೆಯ ಬಜಾಜ್​ ಸ್ಕೂಟರ್​ ಅನ್ನು ಕಟ್ಟಡ ಸಾಮಗ್ರಿಗಳನ್ನು ಸಾಗಿಸಲು ಎಲೆಕ್ಟ್ರಿಕ್ ರಾಟೆಯಂತೆ ಬಳಸುತ್ತಿದ್ದಾರೆ. ನೆಟ್ಟಿಗರು ಈ ಆವಿಷ್ಕಾರಕ್ಕೆ ಭಲೆ ಎನ್ನುತ್ತಿದ್ದಾರೆ.

ಹಳೆಯ ಬಜಾಜ್ ಸ್ಕೂಟರ್​ನಿಂದ ಎಲೆಕ್ಟ್ರಿಕ್​ ರಾಟೆ; ವಿಡಿಯೋ ವೈರಲ್
ಬಜಾಜ್​ ಸ್ಕೂಟರ್​ನಿಂದ ಎಲೆಕ್ಟ್ರಿಕ್​ ರಾಟೆ
Follow us on

Viral Video : ಉತ್ತರ ಭಾರತದ ಲಲ್ಲೂರಾಮ್​ ಸೋಲಾರ್ ಫ್ಯಾನ್​ ಕಂಡುಹಿಡಿದ ವಿಡಿಯೋ ವೈರಲ್ ಆಗಿದ್ದನ್ನು ನೋಡಿದ್ದೀರಿ. ಹಳ್ಳಿಯುವಕನೊಬ್ಬ ರೂ. 10,000 ಖರ್ಚಿನಲ್ಲಿ 6 ಜನರು ಪ್ರಯಾಣಿಸುವ ಎಲೆಕ್ಟ್ರಿಕ್​ ರೈಡರ್ (Electric Pulley) ತಯಾರಿಸಿದ್ದನ್ನು ನೋಡಿದ್ದೀರಿ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಕಟ್ಟಡ ಕಾರ್ಮಿಕರು ಹಳೆಯ ಬಜಾಜ್ ಸ್ಕೂಟರ್ ಅನ್ನು ಎಲೆಕ್ಟ್ರಿಕ್​ ರಾಟೆಯಂತೆ ಬಳಸಿ ಈ ಮೂಲಕ ಕಟ್ಟಡ ಸಾಮಗ್ರಿಗಳನ್ನು ಮೇಲ್​ಮಹಡಿಗೆ ಸಾಗಿಸುತ್ತಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ಅನ್ನು ಡಿ. 3ರಂದು ಅಪ್​ಲೋಡ್ ಮಾಡಲಾಗಿದೆ. ಅವಶ್ಯಕತೆಗೆ ತಕ್ಕಂತೆ ಆವಿಷ್ಕಾರಗಳು ದಿನೇದಿನೇ ಆಗುತ್ತಲೇ ಇರುತ್ತವೆ. ಆದರೆ ನಮ್ಮ ಗಮನಕ್ಕೆ ಬಂದಿರುವುದಿಲ್ಲವಷ್ಟೇ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್​ಲೋಡ್ ಆದಾಗಲೇ ನಮಗೆ ಅತ್ತ ಗಮನ ಹೋಗುತ್ತದೆ.

ಅನೇಕರು ಪ್ರತಿಕ್ರಿಯಿಸಿ ಈ ಸ್ಥಳವನ್ನು ಊಹಿಸಿದ್ದಾರೆ. ಆಂಧ್ರಪ್ರದೇಶದ ಶ್ರೀಶೈಲಂನಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದೆ ಎಂದಿದ್ದಾರೆ. ಕ್ರೇನ್​ ಸ್ಕೂಟರ್​, ಇದನ್ನು ಕಂಡುಹಿಡಿದವರಿಗೆ ಅಭಿನಂದನೆ ಎಂದಿದ್ದಾರೆ ಮತ್ತೊಬ್ಬರು. ಭಾರತೀಯರ ಬುದ್ಧಿಶಕ್ತಿ ಎಂದರೆ ಇದು! ಶಭಾಷ್​ ಎಂದಿದ್ದಾರೆ ಮಗದೊಬ್ಬರು. ಭಾರತೀಯರು ಹುಟ್ಟಿನಿಂದಲೇ ಇಂಥ ಮೆಕ್ಯಾನಿಕಲ್​ ಕೌಶಲವನ್ನು ಹೊಂದಿದ್ದಾರೆ ಎಂದಿದ್ದಾರೆ ಇನ್ನೂ ಒಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ