ಬಾಂಗ್ಲಾದೇಶದಲ್ಲಿ ಹುಟ್ಟಿರುವ ಕುಬ್ಜ ಹಸುವನ್ನು ನೋಡಲು ಬೇರೆ ಬೇರೆ ಸ್ಥಳಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಅಪರೂಪದಲ್ಲಿ ಅಪರೂಪದ ಹಸುವನ್ನು ನೋಡಿದ ಪ್ರವಾಸಿಗರು ಆಶ್ಚರ್ಯಚಕಿತರಾಗಿದ್ದಾರೆ. 51 ಸೆಂಟಿಮೀಟರ್ ಉದ್ದದ ಹಸು ರಾಣಿಯನ್ನು ನೋಡಲು ಜನರು ಬೇರೆ ಬೇರೆ ಸ್ಥಳಗಳಿಂದ ಆಗಮಿಸುತ್ತಿದ್ದಾರೆ. ಅತ್ಯಂತ ಚಿಕ್ಕದಾಗಿರುವ ಹಸುವನ್ನು ನೋಡಿದ ಪ್ರವಾಸಿಗರು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಕುಬ್ಜ ಹಸುವಿನ ಫೋಟೋಗಳನ್ನು ಪ್ರವಾಸಿಗರು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿದ್ದಾರೆ. ಫೋಟೋಗಳನ್ನು ನೋಡುತ್ತಿದ್ದಂತೆಯೇ ಜನರಿಗೆ ಕುತೂಹಲ ಕೆರಳುತ್ತಿದೆ. ಕೊರೊನಾ ವೈರಸ್ ಸಾಂಕ್ರಾಮಿಕದ ಕಾರಣದಿಂದ ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿದ್ದರೂ ಆಟೋರಿಕ್ಷಾ ಮಾಡಿಸಿಕೊಂಡು ಸುಮಾರು 30 ಕಿಲೋಮೀಟರ್ ಸಂಚರಿಸಿ ಚಾರಿಗ್ರಾಮ್ದಲ್ಲಿರುವ ಹಸುವನ್ನು ನೋಡಲು ಜನರು ಮುಗಿಬಿದ್ದಿದ್ದಾರೆ.
ನನ್ನ ಜೀವನದಲ್ಲಿ ಈ ರೀತಿಯ ಹಸುವನ್ನು ನಾನು ಎಂದೂ ನೋಡಿರಲಿಲ್ಲ ಎಂದು 30 ವರ್ಷದ ರೀನಾ ಬೇಗಮ್ ಹೇಳಿದ್ದಾರೆ. ಈ ಕುರಿತಂತೆ ಇಂಡಿಯಾ ಟು ಡೇ ಸುದ್ದಿ ಸಂಸ್ಥೆ ವರದಿ ಮಾಡಿದೆ. ಹಸು ರಾಣಿ 26ಕೆಜಿ ತೂಕವನ್ನಷ್ಟೇ ಹೊಂದಿದೆ. ಈಗಿರುವ ಗಿನ್ನಿಸ್ ವರ್ಲ್ಡ್ ರೆಕಾರ್ಡ್ನಲ್ಲಿರುವ ಚಿಕ್ಕ ಹಸುವಿಗಿಂತಲೂ 10 ಸೆಂಟಿಮೀಟರ್ ಚಿಕ್ಕದಾಗಿದೆ ಎಂದು ಹಸುವನ್ನು ಸಾಕುತ್ತಿರುವ ಮಾಲೀಕರು ಮಾಹಿತಿ ನೀಡಿದ್ದಾರೆ.
ಕೊರೊನಾವೈರಸ್ ಲಾಕ್ಡೌನ್ ಹೊರತಾಗಿಯೂ ಜನರು ಹಸುವನ್ನು ನೋಡಲು ಬರುತ್ತಿದ್ದಾರೆ. ಹೆಚ್ಚಿನವರು ರಾಣಿಯೊಂದಿಗೆ ಸೆಲ್ಫೀ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಮೂರು ತಿಂಗಳಿನಲ್ಲಿ ನಿರ್ಧಾರ ತೆಗೆದುಕೊಳ್ಳುವ ಭರವಸೆ ಇದೆ. ಈ ಕುರಿತಂತೆ ವರದಿ ತಿಳಿಸಿದೆ.
ಕಳೆದ ಮೂರು ದಿನಗಳಲ್ಲಿ 15 ಸಾವಿರಕ್ಕು ಹೆಚ್ಚು ಜನರು ರಾಣಿಯನ್ನು ನೋಡಲು ಬಂದಿದ್ದಾರೆ ಎಂದು ಮಾಲೀಕರು ಹೇಳಿದ್ದಾರೆ. ರಾಣಿ ಅನುವಂಶಿಕ ಸಂತಾನೋತ್ಪತ್ತಿಯಿಂದಾಗಿ ಬೆಳವಣಿಗೆ ಹೊಂದುವುದಿಲ್ಲ ಎಂದ ಮುಖ್ಯ ಪಶುವೈದ್ಯ ಸಜೇದುಲ್ ಇಸ್ಲಾಂ ಹೇಳಿದ್ದಾರೆ. ಹೆಚ್ಚು ಜನರನ್ನು ಜಮೀನಿಗೆ ಕರೆದೊಯ್ಯಬೇಡಿ.. ಇದು ರಾಣಿಯ ಆರೋಗ್ಯಕ್ಕೆ ಧಕ್ಕೆ ತರಬಹುದು ಎಂದು ಸೂಚನೆ ನೀಡಿದ್ದೇನೆ ಎಂದು ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:
ಹಸುಗಳ ಕಳ್ಳ ಸಾಗಾಣಿಕೆ ಶಂಕೆ: ರಾಜಸ್ಥಾನದಲ್ಲಿ ಗುಂಪು ಹಲ್ಲೆಗೆ ವ್ಯಕ್ತಿ ಬಲಿ
ಬಾಟಲಿಯ ಮುಚ್ಚಳ ನುಂಗಿದ 8 ತಿಂಗಳ ಮಗು; ಹಸುಗೂಸನ್ನು ರಕ್ಷಿಸಿದ ವೈದ್ಯರು