Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಟಲಿಯ ಮುಚ್ಚಳ ನುಂಗಿದ 8 ತಿಂಗಳ ಮಗು; ಹಸುಗೂಸನ್ನು ರಕ್ಷಿಸಿದ ವೈದ್ಯರು

ನಿನ್ನೆ ಬೆಳಿಗ್ಗೆ ಆಟವಾಡುವಾಗ ಮಗು ಮಹಾಂತೇಶ್ ಮೆಂಥೋ ಪ್ಲಸ್ ಕ್ಯಾಪ್ ನುಂಗಿದ್ದು, ಜೋರಾಗಿ ಅಳಲು ಪ್ರಾರಂಭಿಸಿದೆ. ನಂತರ ಹೊಲದ ಕೆಲಸದಿಂದ ಮನೆಗೆ ಬಂದ ತಂದೆ ನಿಂಗಪ್ಪ ಮಗುವನ್ನು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಕೂಡಲೇ ದಾಖಲಿಸಿಕೊಂಡ ವೈದ್ಯರು ಲ್ಯಾರಿಂಗೋಸ್ಕೋಪ್ ಫಾರಿನ್ ಬಾಡಿ ರಿಮೂವೆಲ್ ಫಾರಸೆಪ್ಸ್ ವಿಧಾನದಿಂದ ಮುಚ್ಚಳವನ್ನು ಹೊರತೆಗೆದಿದ್ದಾರೆ.

ಬಾಟಲಿಯ ಮುಚ್ಚಳ ನುಂಗಿದ 8 ತಿಂಗಳ ಮಗು; ಹಸುಗೂಸನ್ನು ರಕ್ಷಿಸಿದ ವೈದ್ಯರು
ಬಾಟಲಿಯ ಮುಚ್ಚಳ ನುಂಗಿದ 8 ತಿಂಗಳ ಮಗು
Follow us
TV9 Web
| Updated By: preethi shettigar

Updated on: Jul 02, 2021 | 1:04 PM

ಕೊಪ್ಪಳ: ಬಾಟಲಿಯ ಮುಚ್ಚಳ ನುಂಗಿ ಮಗು ಅಪಾಯಕ್ಕೆ ಸಿಲುಕಿದ ಘಟನೆಯೊಂದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹುಣಿಸಿಹಾಳದಲ್ಲಿ ನಡೆದಿದೆ. ಹುಣಿಸಿಹಾಳ ಗ್ರಾಮದ ನಿಂಗಪ್ಪ, ಅಕ್ಕಮ್ಮ ದಂಪತಿಯ 8 ತಿಂಗಳ ಮಗು ಮಹಾಂತೇಶ್ ಮುಚ್ಚಳ ನುಂಗಿ ಪರದಾಟ ನಡೆಸಿದ್ದು, ಮುಚ್ಚಳವನ್ನು ಹೊರತೆಗೆಯುವಲ್ಲಿ ಸದ್ಯ ಜಿಲ್ಲಾಸ್ಪತ್ರೆಯ ವೈದ್ಯ ಮಲ್ಲಿಕಾರ್ಜುನ ಯಶಸ್ವಿಯಾಗಿದ್ದಾರೆ.

ನಿನ್ನೆ ಬೆಳಿಗ್ಗೆ ಆಟವಾಡುವಾಗ ಮಗು ಮಹಾಂತೇಶ್ ಮೆಂಥೋ ಪ್ಲಸ್ ಕ್ಯಾಪ್ ನುಂಗಿದ್ದು, ಜೋರಾಗಿ ಅಳಲು ಪ್ರಾರಂಭಿಸಿದೆ. ನಂತರ ಹೊಲದ ಕೆಲಸದಿಂದ ಮನೆಗೆ ಬಂದ ತಂದೆ ನಿಂಗಪ್ಪ ಮಗುವನ್ನು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಕೂಡಲೇ ದಾಖಲಿಸಿಕೊಂಡ ವೈದ್ಯರು ಲ್ಯಾರಿಂಗೋಸ್ಕೋಪ್ ಫಾರಿನ್ ಬಾಡಿ ರಿಮೂವೆಲ್ ಫಾರಸೆಪ್ಸ್ ವಿಧಾನದಿಂದ ಮುಚ್ಚಳವನ್ನು ಹೊರತೆಗೆದಿದ್ದಾರೆ. ಸದ್ಯ ಮಗು ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯವಾಗಿದೆ.

ತೆಂಗಿನಕಾಯಿ ಬಿದ್ದು ಮಗು ಸಾವು ಮನೆಯ ಮುಂದೆ ತೆಂಗಿನಕಾಯಿ ಮರ ಇದ್ದರೆ ಒಳ್ಳೆಯದು ಎನ್ನುವ ಮಾತಿದೆ. ಆದರೆ ಹಾವೇರಿಯಲ್ಲಿ ಮನೆ ಮುಂದೆ ಇದ್ದ ಮರವೇ ಮಗುವಿನ ಸಾವಿಗೆ ಕಾರಣವಾಗಿದೆ. ಜಿಲ್ಲೆಯ ಹಿರೇಕೆರೂರು ತಾಲೂಕಿನ ಹಂಸಭಾವಿ ಗ್ರಾಮದಲ್ಲಿ ಮನೆಯ ಮುಂದಿನ ತೆಂಗಿನಮರದಿಂದ ತೆಂಗಿನಕಾಯಿ ಬಿದ್ದು, ಹನ್ನೊಂದು ತಿಂಗಳ‌ ಮಗುವೊಂದು ಮೃತಪಟ್ಟ ಘಟನೆ ನಡೆದಿದೆ. ಮಗುವಿನ ತಲೆಯ ಮೇಲೆ ತೆಂಗಿನಕಾಯಿ ಬೀಳುತ್ತಿದ್ದಂತೆ ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದೆ.

ತಲೆಯ ಮೇಲೆ ತೆಂಗಿನಕಾಯಿ ಬಿದ್ದು ಮೃತಪಟ್ಟ ಹನ್ನೊಂದು ತಿಂಗಳಿನ ಮಗುವಿನ ಹೆಸರು ತನ್ವೀತ್ ವಾಲ್ಮೀಕಿ. ತನ್ವೀತ್ ಮಲ್ಲಿಕಾರ್ಜುನ ಮತ್ತು ಮಾಲಾ ದಂಪತಿಯ ಪುತ್ರ. ಮನೆಯ ಮುಂದೆ ಮಗುವನ್ನು ಎತ್ತಿಕೊಂಡು ಮಗುವಿನ ತಾಯಿ ಊಟ ಮಾಡಿಸುತ್ತಿದ್ದಳು. ಈ ವೇಳೆ ಮನೆಯ ಮುಂದೆ ಇದ್ದ ತೆಂಗಿನಮರದಿಂದ ತೆಂಗಿನಕಾಯಿ ಮಗುವಿನ ತಲೆಯ ಮೇಲೆ ಬಿದ್ದು ಈ ದುರ್ಘಟನೆ ನಡೆದಿದೆ. ಮಗುವಿನ ತಲೆಯ ಮೇಲೆ ಭಾರವಾದ ತೆಂಗಿನಕಾಯಿ ಬಿದ್ದಿದೆ ಮಗು ಸಾವಿಗೆ ಕಾರಣವಾಗಿದೆ.

ಮನೆಯ ಮುಂದಿನ ತೆಂಗಿನಮರದಿಂದ ಮಗುವಿನ ತಲೆಯ ಮೇಲೆ ತೆಂಗಿನಕಾಯಿ ಬಿದ್ದು ಮಗುವಿನ ತಲೆಗೆ ಗಂಭೀರವಾದ ಗಾಯವಾಗಿದೆ. ತಕ್ಷಣವೆ ಹನ್ನೊಂದು ತಿಂಗಳ ಮಗುವನ್ನು ಮಗುವಿನ ಮನೆಯವರು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮಗುವಿನ ತಲೆಗೆ ಬಲವಾಗಿ ಏಟು ಬಿದ್ದಿದ್ದರಿಂದ ಮಗು ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ. ಹನ್ನೊಂದು ತಿಂಗಳ ಮಗುವನ್ನು ಕಳೆದುಕೊಂಡ ಮಗುವಿನ ತಂದೆ, ತಾಯಿ ಹಾಗೂ ಕುಟುಂಬ ಸದಸ್ಯರಲ್ಲಿ ದುಃಖ‌ ಮಡುಗಟ್ಟಿತ್ತು. ಹಂಸಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಇದನ್ನೂ ಓದಿ:

Viral Video: ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾರಿಗೆ ಮಿಂಚಿನ ಹೊಡೆತ; ಎಂಟು ತಿಂಗಳ ಮಗು ಪ್ರಾಣಾಪಾಯದಿಂದ ಪಾರು!

ತೆಂಗಿನಮರದಿಂದ ಮಗುವಿನ ತಲೆಯ ಮೇಲೆ ಬಿದ್ದ ಕಾಯಿ : ಹಾವೇರಿ ಜಿಲ್ಲೆಯಲ್ಲಿ 11 ತಿಂಗಳ ಮಗು ಸಾವು