Barbie: ಬಾರ್ಬಿ ಕೇಕ್ನ ನಂತರ ಇದೀಗ ಮತ್ತೆ ಗುಲಾಬಿ ಜ್ವರ ಮರುಕಳಿಸಿ ದೋಸೆಗೆ ಅಂಟಿಕೊಂಡಿದೆ. ಅಂದರೆ ದೆಹಲಿಯಲ್ಲಿ ವ್ಯಾಪಾರಿಯೊಬ್ಬರು ಬಾರ್ಬಿ ದೋಸೆ ತಯಾರಿಸಿದ್ದಾರೆ. ಆದರೆ ನೆಟ್ಟಿಗರು ನಮಗೆ ಓಪನ್ಹೈಮರ್ (Oppenheimer) ದೋಸೆ ಬೇಕು ಎಂದು ಬೇಡಿಕೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ, ಇದನ್ನೇ ಜಾಸ್ತಿ ಬೇಯಿಸಿದರೆ ಓಪನ್ಹೈಮರ್ ದೋಸೆಯಾಗುತ್ತದೆ ಎಂದು ಉಚಿತ ಸಲಹೆಯನ್ನೂ ಕೊಟ್ಟಿದ್ದಾರೆ. ಆ. 14ರಂದು ಪೋಸ್ಟ್ ಮಾಡಲಾದ ಈ ಬೀಟ್ರೂಟ್ ದೋಸೆಗೆ (Beetroot Dosa) ಬಾರ್ಬಿ ದೋಸೆ ಎಂದು ನಾಮಕರಣ ಮಾಡಲಾಗಿದ್ದು ಮತ್ತೆ ನೆಟ್ಟಿಗರನ್ನು ಈ ಗುಲಾಬಿ ಜ್ವರ ಆವರಿಸುತ್ತಿದೆ.
ಇದನ್ನೂ ಓದಿ : Viral Video: ಅಪಹರಣಕಾರರಿಂದ ಶಾಲಾಬಾಲಕಿಯನ್ನು ರಕ್ಷಿಸಿದ ಬೀದಿನಾಯಿಯ ವಿಡಿಯೋ ವೈರಲ್
ಈ ವಿಡಿಯೋ ಅನ್ನು ಇನ್ಸ್ಟಾಗ್ರಾಮ್ನಲ್ಲಿ ಲಕ್ಷಯ್ ಎನ್ನುವವರು ಹಂಚಿಕೊಂಡಿದ್ದಾರೆ. ಇದು ಬೀಟ್ರೂಟ್ ದೋಸೆ/ಬಾರ್ಬಿದೋಸೆ ಎಂದು ಅವರು ಹೇಳಿದ್ದಾರೆ. ಈತನಕ ಈ ವಿಡಿಯೋ ಅನ್ನು ಸುಮಾರು 26,000 ಜನರು ನೋಡಿದ್ದಾರೆ. ನೂರಾರು ಜನರು ನಮಗೆ ಓಪನ್ ಹೈಮರ್ ದೋಸೆ ಬೇಕು ಎಂದು ದುಂಬಾಲು ಬಿದ್ದಿದ್ದಾರೆ. ಕೆಲವರು ಅಯ್ಯೋ ದೋಸೆಯ ಸತ್ಯಾನಾಶವೇ ಆಯಿತು ಎಂದಿದ್ದಾರೆ.
12 ಮಿಲಿಯನ್ಗಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ದೋಸೆಯ ಮೇಲಿನ ನನ್ನ ಪ್ರೀತಿ ಇಂದಿಗೆ ಕೊನೆ ಎಂದಿದ್ದಾರೆ ಒಬ್ಬರು. ಇದು ಕೆಮ್ಮಿನ ಸಿರಪ್ ದೋಸೆ ಎಂದಿದ್ದಾರೆ ಮತ್ತೊಬ್ಬರು. ಟ್ರೆಂಡ್ನೆಪದಲ್ಲಿ ದೋಸೆಯನ್ನು ಹೀಗೆ ಕೊಂದಿರುವುದು ಅಪರಾಧ ಎಂದಿದ್ದಾರೆ ಇನ್ನೊಬ್ಬರು. ಬೀಟ್ರೂಟ್ ದೋಸೆ ಆರೋಗ್ಯಕ್ಕೆ ಒಳ್ಳೆಯದು ಎಂದಿದ್ದಾರೆ ಇನ್ನೂ ಕೆಲವರು.
ಇದನ್ನೂ ಓದಿ : Viral Video: ಜಪಾನ್; ಝೀಬ್ರಾ ಕ್ರಾಸಿಂಗ್ ಮಾಡಿ ರಸ್ತೆ ದಾಟಿದ ಜಿಂಕೆಯ ವಿಡಿಯೋ
ಅಯ್ಯೋ ಈ ಬಾರ್ಬಿ ಟ್ರೆಂಡ್ ಯಾವಾಗ ಮುಗಿಯುತ್ತದೆ? ಬಾರ್ಬಿ ರೈಸ್, ಬಾರ್ಬಿ ಇಡ್ಲಿ, ಬಾರ್ಬಿ ಚಪಾತಿ, ಬಾರ್ಬಿ ಬ್ರೆಡ್, ಬಾರ್ಬಿ ಜ್ಯೂಸ್ ಇನ್ನೂ ಏನೇನನ್ನು ನೋಡಬೇಕು? ಎಂದು ಒಬ್ಬರು. ಬಾರ್ಬಿ ಶವಪೆಟ್ಟಿಗೆಯನ್ನು ಮರೆತಿರಾ? ಎಂದು ಮತ್ತೊಬ್ಬರು ಕೇಳಿದ್ದಾರೆ. ಮಗಳಿಗೋಸ್ಕರ ಅಪ್ಪನೊಬ್ಬ ಬಾರ್ಬಿ ಫ್ರಾಕ್ ಧರಿಸಿ ಸಿನೆಮಾಗೆ ಹೋಗಿದ್ದನ್ನು ನಾನಂತೂ ಮರೆಯಲು ಸಾಧ್ಯವೇ ಇಲ್ಲ ಎಂದಿದ್ದಾರೆ ಮಗದೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ