ಬಿಹಾರದ ಹಳ್ಳಿಯೊಂದರಲ್ಲಿ ಬರೀ ಗಂಡಸರೇ ವಾಸವಾಗಿದ್ದಾರೆ.ಕಳೆದ 50 ವರ್ಷಗಳಿಂದ ಈ ಗ್ರಾಮದ ಗಂಡಸರನ್ನು ಮದುವೆಯಾಗಲು ಒಂದು ಮಹಿಳೆಯೂ ಮುಂದೆ ಬರುತ್ತಿಲ್ಲ. ಇದರಿಂದಾಗಿ ಈ ಗ್ರಾಮದ ಪುರುಷರು ಅವಿವಾಹಿತರಾಗಿ ಉಳಿದಿದ್ದಾರೆ. ಅದಕ್ಕಾಗಿಯೇ ಈ ಗ್ರಾಮವನ್ನು ‘ವರ್ಜಿನ್ ವಿಲೇಜ್’ ಎಂದು ಕರೆಯುತ್ತಾರೆ. ಇದು ನಿಮಗೆ ಸ್ವಲ್ಪ ವಿಚಿತ್ರ ಎನಿಸಿದರೂ ಕೂಡ ಇದೇ ಸತ್ಯ. ಈ ಗ್ರಾಮದ ಗಂಡಸರನ್ನು ಮದುವೆಯಾಗಲು ಒಬ್ಬ ಮಹಿಳೆಯೂ ಮುಂದೆ ಬರದಿರಲು ಕಾರಣ ಏನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಬರ್ವಾನ್ ಕಲಾ ಗ್ರಾಮವು ಬಿಹಾರದ ರಾಜಧಾನಿ ಪಾಟ್ನಾದಿಂದ 300 ಕಿ.ಮೀ ದೂರದಲ್ಲಿದ್ದು,ಕೈಮೂರ್ ಬೆಟ್ಟಗಳಲ್ಲಿದೆ.ಬೆಟ್ಟದ ತುದಿಗೆ ಹೋಗುವ ದಾರಿಯಲ್ಲಿ ಬಂಡೆಗಳು ಮತ್ತು ಕಾಡುಗಳ ಮೇಲೆ ಪ್ರಯಾಣಿಸಬೇಕು. ಆ ಗ್ರಾಮವನ್ನು ತಲುಪಲು ಒಂದೇ ಒಂದು ಮಾರ್ಗವಿದೆ. ಕನಿಷ್ಠ ಸೌಲಭ್ಯಗಳ ಕೊರತೆಯಿಂದ ಯಾವ ಮಹಿಳೆಯೂ ಆ ಪ್ರದೇಶಕ್ಕೆ ಹೋಗಲು ಬಯಸುವುದಿಲ್ಲ. ಅದಕ್ಕಾಗಿಯೇ ಮಹಿಳೆಯರು ಮತ್ತು ಅವರ ಕುಟುಂಬದವರು ಈ ಗ್ರಾಮದ ಯಾರನ್ನೂ ಮದುವೆಯಾಗುವುದಿಲ್ಲ. ಆದರೆ 2017 ರಲ್ಲಿ ಈ ಗ್ರಾಮದ ಯುವಕನೊಬ್ಬ ಮದುವೆಯಾಗಿ ‘ಏಕೈಕ ವಿವಾಹಿತ’ ಎಂಬ ದಾಖಲೆ ನಿರ್ಮಿಸಿದ್ದಾನೆ.
ಇದನ್ನೂ ಓದಿ: ಬ್ಯಾಂಕ್ಗೆ ಹೆಲ್ಮೆಟ್ ಧರಿಸಿ ಬಂದು 8.53 ಲಕ್ಷ ರೂ. ದೋಚಿ ಪರಾರಿಯಾದ ವ್ಯಕ್ತಿ
ಗ್ರಾಮಸ್ಥರೆಲ್ಲ ಸೇರಿ ಗುಡ್ಡ, ಕಾಡು ಕಡಿದು 6 ಕಿ.ಮೀ. ಹಲವು ವರ್ಷಗಳ ನಂತರ ಅಜಯ್ ಕುಮಾರ್ ಎಂಬಾತ 2017 ರಲ್ಲಿ ವಿವಾಹವಾಗಿದ್ದಾನೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆತನನ್ನು ಗ್ರಾಮಸ್ಥರೆಲ್ಲ ವಿಐಪಿಯಂತೆ ಸ್ವಾಗತಿಸಿದ್ದರು. ಹಲವು ವರ್ಷಗಳ ನಂತರ ನಡೆದ ಮದುವೆಗೆ ಇಡೀ ಊರೇ ಅದ್ಧೂರಿಯಾಗಿ ಮದುವೆ ಸಮಾರಂಭ ನಡೆಸಿದೆ. 2017ರ ನಂತರ ಇಲ್ಲಿಯವರೆಗೂ ಆ ಗ್ರಾಮದಲ್ಲಿ ಒಂದೇ ಒಂದು ಮದುವೆ ನಡೆದಿಲ್ಲ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ