Viral: ಲೈಕ್​​ ಮಸುಕಾಗುತ್ತದೆ, ಡಿಜಿಟಲ್​ ಗುರುತು ಉಳಿಯುತ್ತದೆ; ಅಸ್ಸಾಂ ಪೊಲೀಸರ ಟ್ವೀಟ್​

|

Updated on: Jul 18, 2023 | 5:20 PM

Digital Footprint : 'ಸಾಮಾಜಿಕ ಜಾಲತಾಣಗಲ್ಲಿ ಗಮನ ಸೆಳೆಯಲು ನಿಮ್ಮ ಮಕ್ಕಳ ಫೋಟೋ, ವೈಯಕ್ತಿಕವನ್ನು ಸರಕಾಗಿಸಿಕೊಂಡರೆ ಅಪಾಯ ತಪ್ಪಿದ್ದಲ್ಲ' ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ ಪೊಲೀಸರ ಈ ವಿನೂತನ ಪರಿಕಲ್ಪನೆ.

Viral: ಲೈಕ್​​ ಮಸುಕಾಗುತ್ತದೆ, ಡಿಜಿಟಲ್​ ಗುರುತು ಉಳಿಯುತ್ತದೆ; ಅಸ್ಸಾಂ ಪೊಲೀಸರ ಟ್ವೀಟ್​
ಅಸ್ಸಾಂ ಪೊಲೀಸರ ಪರಿಕಲ್ಪನೆಯಂತೆ ಎಐ ಕಲಾವಿದರ ಸೃಷ್ಟಿಯಲ್ಲಿ ಮೂಡಿದ ಮಕ್ಕಳು
Follow us on

Children : ಮಗುವೊಂದು ಮಡಿಲಿಗೆ ಬರುತ್ತಿದ್ದಂತೆ ಅನೇಕ ಪೋಷಕರು ಮಗುವಿನ ಫೋಟೋಗಳೊಂದಿಗೆ  ಸಂಬಂಧಿಸಿದ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ((Social Media) ಕ್ಷಣಕ್ಷಣಕ್ಕೂ ಅಪ್​ಡೇಟ್ ಮಾಡುವ ಪ್ರವೃತ್ತಿಗೆ ಬಿದ್ದುಬಿಡುತ್ತಾರೆ. ಬಂದು ಬೀಳುವ ಲೈಕ್, ಕಮೆಂಟ್​ಗಳಿಂದ ವಾಸ್ತವನ್ನೇ ಮರೆತುಬಿಡುತ್ತಾರೆ. ಆದರೆ ಡಿಜಿಟಲ್​ ದಾಖಲೆಗಳಿಂದಾಗಿ ಮಕ್ಕಳ ಭವಿಷ್ಯದ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗಬಹುದು ಎಂಬ ಅರಿವು ಅನೇಕರಿಗೆ ಇದ್ದಂತಿಲ್ಲ. ಈ ಹಿನ್ನೆಲೆಯಲ್ಲಿ ಅಸ್ಸಾಂನ ಪೊಲೀಸ್​ ಇಲಾಖೆಯು ಸಾರ್ವಜನಿಕರಲ್ಲಿ ಈ ಕುರಿತು ಅರಿವು ಮೂಡಿಸುವುದಕ್ಕೋಸ್ಕರ ಮಾಡಿದ ಟ್ವೀಟ್ ಇದೀಗ ಜಾಲತಾಣಿಗರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಎಐ (Artificial Intelligence) ಮೂಲಕ ಸೃಷ್ಟಿಸಿದ ನಾಲ್ಕು ಮಕ್ಕಳ ಚಿತ್ರಗಳನ್ನು ಟ್ವೀಟ್ ಮಾಡಿದ ಅಸ್ಸಾಂ ಪೊಲೀಸರು, ‘ನಿಮ್ಮ ಮಕ್ಕಳ ಫೋಟೋಗಳಿಗೆ ಮಾಡಿದ ಲೈಕ್ಸ್​ ಮಸುಕಾಗುತ್ತವೆ. ಆದರೆ ಡಿಜಿಟಲ್​ನ ಗುರುತುಗಳು ಹಾಗೇ ಉಳಿಯುತ್ತವೆ. ಶೇರ್​ಗಳಿಂದಾಗಿ ಅಪಾಯಕ್ಕೆ ಒಳಗಾಗುವ ನಿಮ್ಮ ಮಗುವನ್ನು ರಕ್ಷಿಸಿ. ಸಾಮಾಜಿಕ ಮಾಧ್ಯಮದಲ್ಲಿ ನೀವು ಏನನ್ನು ಹಂಚಿಕೊಳ್ಳುತ್ತೀರಿ ಎನ್ನುವುದರ ಬಗ್ಗೆ ಗಮನವಿರಲಿ’ ಎಂಬ ಒಕ್ಕಣೆ ಬರೆದು #DontBeASharent ಹ್ಯಾಷ್​ಟ್ಯಾಗ್​ ಸೃಷ್ಟಿಸಿದ್ದಾರೆ.

ಇದನ್ನೂ ಓದಿ : Viral: ಐಕಿಯಾ; ಪರಭಾಷೆಗಳ ಹೇರಿಕೆ ನಿಲ್ಲಲಿ, ಕರ್ನಾಟಕದಲ್ಲಿ ಕನ್ನಡವೇ ಇರಲಿ

ಒಂದೊಂದು ಮಗುವಿನ ಚಿತ್ರಕ್ಕೂ ಮನಮುಟ್ಟುವಂತೆ ಸಾಲುಗಳನ್ನು ರಚಿಸಿದ್ದಾರೆ; ಮಕ್ಕಳು ಸಾಮಾಜಿಕ ಮಾಧ್ಯಮದ ಟ್ರೋಫಿಗಳಲ್ಲ. ಮುಗ್ಧತೆಯ ಕ್ಷಣಗಳನ್ನು ಅಂತರ್ಜಾಲವು ಕದ್ದಿದೆ. ಸಾಮಾಜಿಕ ಜಾಲತಾಣಗಲ್ಲಿ ಗಮನ ಸೆಳೆಯಲು ಅವರ ವೈಯಕ್ತಿಕವನ್ನು ಸರಕಾಗಿಸಿಕೊಳ್ಳದಿರಿ. ನಿಮ್ಮ ಮಕ್ಕಳ ಕಥೆ, ಹೇಳುವುದು ಅವರದೇ ಆಯ್ಕೆ.

ಇದನ್ನೂ ಓದಿ : Viral: ಮೈಲ್ಯಾಂಗ್​ ಆಡಿಯೋ ಸ್ಟೋರಿ ಚಾಲೇಂಜ್​ನಲ್ಲಿ ಪಾಲ್ಗೊಳ್ಳಿ ರೂ.10000 ಬಹುಮಾನ ಗೆಲ್ಲಿ

ಜು. 15ರಂದು ಇದನ್ನು ಟ್ವೀಟ್ ಮಾಡಲಾಗಿದೆ. ಈತನಕ 23,000 ಕ್ಕೂ ಹೆಚ್ಚು ಜನ ನೋಡಿದ್ದಾರೆ. ಸುಮಾರು 200 ಜನರು ರೀಟ್ವೀಟ್ ಮಾಡಿದ್ದಾರೆ. ಅತ್ಯಂತ ಸೂಕ್ಷ್ಮವಾಗಿ, ಮಾರ್ಮಿಕವಾಗಿ ಮತ್ತು ಉಪಯುಕ್ತವಾಗಿ ಈ ಸಂದೇಶವನ್ನು ನೀಡಲಾಗಿದೆ ಎಂದು ಅನೇಕರು ಪೊಲೀಸರ ಈ ಪರಿಕಲ್ಪನೆ ಮತ್ತು ನಡೆಯನ್ನು ಶ್ಲಾಘಿಸಿದ್ದಾರೆ. ಇದೇ ರೀತಿ ಎಲ್ಲ ಪೊಲೀಸ್ ಇಲಾಖೆಗಳು, ಸಾಮಾಜಿಕ ಜಾಲತಾಣಗಳಲ್ಲಿನ ಇನ್ನಿತರೇ ವಿಷಯಗಳಿಗೆ ಸಂಬಂಧಿಸಿದ ನಡೆನುಡಿಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಸಾಕಷ್ಟು ಜನರು ವಿನಂತಿಸಿಕೊಂಡಿದ್ದಾರೆ.

ಈ ಕುರಿತು ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 5:16 pm, Tue, 18 July 23