ಪ್ರಕೃತಿಯ ಸೊಬಗೇ ಅಭೂತಪೂರ್ವ. ಬಣ್ಣ ಬಣ್ಣದ ಹಕ್ಕಿಗಳು ಗರಿಬಿಚ್ಚಿ ಹಾರುತ್ತಿರುವ ಪಕ್ಷಿಗಳನ್ನು ನೋಡುವುದೇ ಒಂದು ರೀತಿಯ ಖುಷಿ. ಪುಟ್ಟ ಪುಟ್ಟ ರೆಕ್ಕೆ ಬಡಿದು, ಪುರ್… ಎಂದು ಆಕಾಶದ ತುಂಬ ಹಾರಾಡುತ್ತವೆ. ಬಣ್ಣ ಬಣ್ಣದ ಹಕ್ಕಿಗಳಿಂದ ಆಕಾಶದಲ್ಲಿ ಕಲರವ. ಅದೆಷ್ಟೋ ದೂರ ಕ್ರಮಿಸಿ ತಮ್ಮ ಮರಿಗಳಿಗಾಗಿ ಆಹಾರವನ್ನು ಹುಡುಕಿ ತರುತ್ತವೆ. ಮೊಟ್ಟೆ ಇಡುವ ಮೊದಲು ಹುಲ್ಲುಕಡ್ಡಿಗಳನ್ನು ಸೇರಿಸಿ ಚಂದದ ಗೂಡು ಕಟ್ಟುತ್ತವೆ. ಹಕ್ಕಿಯೊಂದು ಗೂಡು ಕಟ್ಟಿದ ಅಪರೂಪದ ದೃಶ್ಯವೊಂದು ಸೆರೆಯಾಗಿದೆ. ಸುಂದರವಾದ ಗಿಡದ ಎಲೆಗೆ ಹಕ್ಕಿಯೊಂದು ಪುಟ್ಟ ಗೂಡು ಕಟ್ಟಿರುವ ದೃಶ್ಯ ಎಲ್ಲರ ಮನಗೆದ್ದಿದೆ.
ವಿಡಿಯೋದಲ್ಲಿ ನೀವು ಗಮನಿಸುವಂತೆ, ‘ಪ್ರಕೃತಿ ಸುಂದರವಾಗಿದೆ..’ ಎಂಬ ಶೀರ್ಷಿಕೆಯೊಂದಿಗೆ ದೃಶ್ಯ ಹಂಚಿಕೊಳ್ಳಲಾಗಿದೆ. ಎಲೆಯೊಂದನ್ನು ಗೂಡಿನ ಆಕಾರದಲ್ಲಿ ಮಡಚಿ ಅದರೊಳಗೆ ಭದ್ರವಾದ ಗೂಡು ಕಟ್ಟಿದೆ ಇಲ್ಲೊಂದು ಹಕ್ಕಿ. ಪುಟ್ಟ ಗೂಡಿನೊಳಗೆ ಮೊಟ್ಟೆ ಇರುವುದನ್ನು ನೋಡಬಹುದು. ಗಾಳಿ, ಬಿಸಿಲು, ಮಳೆಗೆ ರಕ್ಷಣೆಯಾಗುವಂತೆ ಎಲೆಗಳು ಮುಚ್ಚಿವೆ. ಹಕ್ಕಿಯ ಇಂತಹ ಪ್ಲಾನ್ಗೆ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ತನ್ನ ಮರಿಗಳ ರಕ್ಷಣೆಗಾಗಿ ಹಕ್ಕಿ ಮಾಡಿರುವ ಪ್ಲಾನ್ ಅದ್ಭುತವಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
Nature is beautiful.. pic.twitter.com/p9U4WZwgUX
— Buitengebieden (@buitengebieden_) June 2, 2021
ಬಾಲ್ಯದಿಂದಲೂ ಹಕ್ಕಿ ಗೂಡು ಕಟ್ಟುವ ಬಗೆಗೆ ಅದೆಷ್ಟು ಪ್ರಶ್ನೆಗಳು ಉದ್ಭವವಾಗಿರುತ್ತೋ ಏನೋ. ನಾವು ಮನೆ ಕಟ್ಟುವಾಗ ಅದೆಷ್ಟು ಯೋಚಿಸುತ್ತೀವಿ ಅಲ್ಲವೇ? ಮನೆ ಕಟ್ಟು ನಿಟ್ಟಾಗಿರಬೇಕು. ಯಾವುದೇ ವಿಕೋಪದಲ್ಲಿಯೂ ಬೀಳದೇ ಭದ್ರವಾಗಿ ನೆಲೆಸಿರಬೇಕು ಎಂಬೆಲ್ಲಾ ಯೋಚನೆಗಳಿರುತ್ತವೆ. ಹಾಗೆಯೇ ಪಕ್ಷಿಯೂ ಕೂಡಾ. ತನ್ನ ಮರಿಗಳ ಹಿತದೃಷ್ಟಿಯಿಂದ ಗಟ್ಟಿಯಾಗಿ ಹುಲ್ಲಿನ ಕಡ್ಡಿಗಳನ್ನು ಸೇರಿಸಿ ಗೂಡು ಕಟ್ಟುತ್ತವೆ. ಪ್ರಕೃತಿಯ ಸೊಬಗೇ ಅಚ್ಚುಮೆಚ್ಚು ಎಂದು ನೆಟ್ಟಿಗರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಹಕ್ಕಿ ಗೂಡು ಕಟ್ಟಿದ ಇಂಜಿನಿಯರಿಂಗ್ ಪ್ಲಾನ್ ಅದ್ಭುತವಾಗಿದೆ ಎಂದು ಇನ್ನೋರ್ವರು ಹೇಳಿದ್ದಾರೆ.
ಇದನ್ನೂ ಓದಿ:
ಲಾಕ್ಡೌನ್ ಎಫೆಕ್ಟ್; ನಂದಿಗಿರಿಧಾಮದಲ್ಲಿ ಆಹಾರವಿಲ್ಲದೆ ಪ್ರಾಣಿ-ಪಕ್ಷಿಗಳ ಪರದಾಟ
Viral Video: ಚಾಲಾಕಿ ಹಕ್ಕಿಯ ನಾಟಕ ನೋಡಿ ಬೆಕ್ಕು ಮೂರ್ಖವಾಯ್ತು..; ಏಪ್ರಿಲ್ ಫೂಲ್ ಡೇ ಸ್ಪೆಶಲ್ ವಿಡಿಯೋ ಇದು