
ಬೆಂಗಳೂರು, ಡಿಸೆಂಬರ್ 01: ಮನೆಯಿಂದ ಹೊರಗೆ ಬರೋಕಾಗ್ತಾ ಇಲ್ಲ, ಸಿಕ್ಕಾಪಟ್ಟೆ ಚಳಿ. ಈ ಮಾತನ್ನು ಬೆಂಗಳೂರಿಗರ (Bengaluru) ಬಾಯಲ್ಲಿ ನೀವು ಕೇಳಿರುತ್ತೀರಿ. ಇಲ್ಲಿ ಚಳಿಯು ಹೆಚ್ಚಾಗಿದೆ. ಈ ವಿದೇಶಿ ಮಹಿಳೆ ಡಾನಾ ಮೇರಿ ಚಳಿಯಲ್ಲಿ (Danamarie) ನಡುಕುತ್ತಾ ಮಿಚಿಗನ್ ನಲ್ಲಿ ತಾಪಮಾನ ಹೆಚ್ಚಾಗಿ ಶೀತವಾಗಿರುತ್ತದೆ ಎಂದು ಹೇಳುವ ವಿಡಿಯೋ ವೈರಲ್ ಆಗಿದೆ. ಈ ಕುರಿತಾದ ವಿಡಿಯೋ ನೋಡಿ ನೆಟ್ಟಿಗರು ನಾನಾ ರೀತಿಯ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.
ಡಾನಾ ಮೇರಿ (danamarieplus3) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೋದಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಅಮೆರಿಕದ ಮಹಿಳೆಯೊಬ್ಬರು ನಗರದಲ್ಲಿ ತಾಪಮಾನ ತಂಪಾಗುತ್ತಿದ್ದಂತೆ ಸ್ವೆಟರ್ ಹಾಗೂ ಸಾಕ್ಸ್ ಧರಿಸಿದ್ದು ಬೆಂಗಳೂರಿಗರು ಚಳಿಯನ್ನು ಹೇಗೆ ನಿಭಾಯಿಸುತ್ತಿದ್ದಾರೆ ಎಂಬುದನ್ನು ಅನುಕರಿಸುತ್ತಿರುವುದನ್ನು ನೋಡಬಹುದು. ಡಾನಾ ಮೇರಿ, ಬೆಂಗಳೂರಿನಲ್ಲಿ ತಾಪಮಾನ ಸುಮಾರು 13 ಡಿಗ್ರಿ ಸೆಲ್ಸಿಯಸ್ ಇದೆ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
ಆನ್‌ಲೈನ್‌ನ ಕೆಲವು ಕಾಮೆಂಟ್‌ಗಳನ್ನು ಓದುತ್ತಾ, ಬೆಂಗಳೂರಿನ ಹವಾಮಾನ ನೋಡಿದ್ರೆ ಇದು ಬೆಂಗಳೂರಿನಂತಿಲ್ಲ. ತಾನು ಸ್ಕೂಟಿಯಲ್ಲಿದ್ದರೆ ಹೆಪ್ಪುಗಟ್ಟಿ ಹೋಗುತ್ತಿದ್ದೆ ಎನ್ನುವುದನ್ನು ನೋಡಬಹುದು. ನನ್ನ ಚರ್ಮದ ಮೇಲಿನ ಸೂರ್ಯನ ಕಿರಣ ಬಿದ್ದರೆ ಹೇಗಿರುತ್ತೆ ಎಂದು ನಾನು ಮರೆತಿದ್ದೇನೆ. ನಾನು ಖಿನ್ನತೆಗೆ ಒಳಗಾಗಲು ಪ್ರಾರಂಭಿಸುತ್ತಿದ್ದೇನೆ. ತನ್ನ ಬಾಲ್ಯವನ್ನು ಮಿಚಿಗನ್‌ನಲ್ಲಿ ಕಳೆದೆ. ಅಲ್ಲಿನ ವಾತಾವರಣವು ಹೀಗೆಯೇ ಶೀತವಾಗಿರುತ್ತದೆ ಎಂದು ಹೇಳುವುದನ್ನು ನೋಡಬಹುದು
ಇದನ್ನೂ ಓದಿ:ದುಡ್ಡೇ ಜೀವನವಲ್ಲ; ಕಾರ್ಪೋರೇಟ್ ಕೆಲಸಕ್ಕೆ ಗುಡ್ ಬೈ ಹೇಳಿ ಆಟೋ ಓಡಿಸುವ ಬೆಂಗಳೂರಿಗ
ಈ ವಿಡಿಯೋ ಐದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, 2000ದ ದಶಕದ ಆರಂಭದವರೆಗೂ ಪ್ರತಿ ಚಳಿಗಾಲದಲ್ಲೂ ಬೆಂಗಳೂರಿನ ಹವಾಮಾನ ಹೀಗೆಯೇ ಇರುತ್ತಿತ್ತು ಎಂದು ಹೇಳಿದ್ದಾರೆ. ಮತ್ತೊಬ್ಬರು ಮತ್ತೆ ಬೆಂಗಳೂರು ತನ್ನ ಹಳೆಯ ಹವಾಮಾನಕ್ಕೆ ಮರಳುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:26 am, Mon, 1 December 25