ಉಚಿತವಾಗಿ ಪ್ರಯಾಣಿಕರಿಗಾಗಿ ಸ್ಯಾನಿಟೈಝರ್​, ಬಿಸ್ಕೆಟ್​, ನೀರಿನ ಬಾಟಲಿ ಮೀಸಲಿಡುವ ಈ ಆಟೋ ಡ್ರೈವರ್

| Updated By: ಶ್ರೀದೇವಿ ಕಳಸದ

Updated on: Nov 02, 2022 | 12:30 PM

Auto Driver : ಇಷ್ಟೊಂದೆಲ್ಲ ಹಣ ಖರ್ಚು ಮಾಡಿ ತನ್ನ ಪ್ರಯಾಣಿಕರಿಗಾಗಿ ಉಚಿತ ವ್ಯವಸ್ಥೆ ಮಾಡಿದ್ಧಾರೆ ರಾಜೇಶ್​ ಎನ್ನುವ ಬೆಂಗಳೂರಿನ ಆಟೋ ಡ್ರೈವರ್. ಇವರ ಸಹೃದಯತೆಯನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ.

ಉಚಿತವಾಗಿ ಪ್ರಯಾಣಿಕರಿಗಾಗಿ ಸ್ಯಾನಿಟೈಝರ್​, ಬಿಸ್ಕೆಟ್​, ನೀರಿನ ಬಾಟಲಿ ಮೀಸಲಿಡುವ ಈ ಆಟೋ ಡ್ರೈವರ್
Bengaluru auto driver keeps hand sanitizer toffees and biscuits for passengers
Follow us on

Viral : ಬೆಂಗಳೂರಿನಲ್ಲಿ ಒಂದು ಏರಿಯಾದಿಂದ ಇನ್ನೊಂದು ಏರಿಯಾಗೆ ಆಟೋ ಪ್ರಯಾಣ ಮಾಡುವುದು ಸಹಜ ದಿನಗಳಲ್ಲೇ ಎಷ್ಟು ದುಸ್ತರ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವುದೇ. ದುಸ್ತರ ಎನ್ನುವುದರೊಳಗೆ ಸಾಕಷ್ಟು ಕಾರಣಗಳು ಅಡಗಿವೆ. ಎಲ್ಲರಿಗೂ ಅವರವರ ಧಾವಂತ ಯಾರನ್ನು ಯಾರೂ ಸಂಭಾಳಿಸುವ ತಾಳ್ಮೆ ಇಲ್ಲ. ಇನ್ನು ಈ ಮಳೆ, ಗಾಳಿ, ಟ್ರಾಫಿಕ್ ಇದ್ದರಂತೂ ಅದು ಇನ್ನೂ ಕಷ್ಟವೇ. ಆದರೆ ಉತ್ತಮ್ ಕಶ್ಯಪ್​ ಎನ್ನುವವರು ಟ್ವೀಟ್ ಮಾಡಿರುವ ಈ ಪೋಸ್ಟ್​ ಗಮನಿಸಿ. ರಾಜೇಶ್​ ಎಂಬ ಆಟೋ ಡ್ರೈವರ್​ ಅವರ ಸಹೃದಯತೆಯ ಬಗ್ಗೆ ಗಮನ ಸೆಳೆಯುತ್ತದೆ.

 

ಇದನ್ನೂ ಓದಿ
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

Meet Rajesh an Auto owner in #Bengaluru.

ರಾಜೇಶ್​ ತಮ್ಮ ಆಟೋದಲ್ಲಿ ಸ್ಯಾನಿಟೈಝರ್, ಬ್ಯಾಂಡ್​ಏಡ್​, ಬಿಸ್ಕೆಟ್​​, ಚಾಕೋಲೇಟ್ ಮತ್ತು ನೀರಿನ ಬಾಟಲಿಗಳನ್ನು ಸದಾ ಇಟ್ಟುಕೊಂಡು ಪ್ರಯಾಣಿಸುತ್ತಾರೆ. ಇವೆಲ್ಲವೂ ಪ್ರಯಾಣಿಕರಿಗಾಗಿ ಉಚಿತವಾಗಿ. ಏಕೆಂದರೆ ಅವರಿಗೆ ಗ್ರಾಹಕರೇ ಎಲ್ಲ… ಎನ್ನುವುದನ್ನು ಪ್ರಯಾಣಿಕ ಉತ್ತಮ್​ ಈ ಪೋಸ್ಟ್​ ಮೂಲಕ ತಿಳಿಸಿದ್ದಾರೆ. ಅಲ್ಲದೆ, ಇಂಥ ಕಾರ್ಯಕ್ಕಾಗಿ ರಾಜೇಶ್​ ಅವರಿಗೆ ಅಭಿನಂದನೆಯನ್ನೂ ತಿಳಿಸಿದ್ದಾರೆ. 1,000 ಜನರು ಈ ಪೋಸ್ಟ್​ ಇಷ್ಟಪಟ್ಟಿದ್ದಾರೆ.

ರಾಜೇಶ್​ ಅವರ ಈ ರೀತಿಯನ್ನು ನೆಟ್ಟಿಗರು ಇಷ್ಪಪಟ್ಟಿದ್ಧಾರೆ. ಇಂಥ ಆಟೋ ಚಾಲಕರು ಹೆಚ್ಚಬೇಕು ಎಂದಿದ್ದಾರೆ. ಇಂಥ ಆಟೋಚಾಲಕರು ನನಗೆ ಸಿಕ್ಕರೆ ಅವರಿಗೆ ನಾನು ಎಕ್ಸ್ಟ್ರಾ ಹಣವನ್ನು ಕೊಡಲು ಸಿದ್ಧ ಎಂದು ಪ್ರತಿಕ್ರಿಯಿಸಿದ್ದಾರೆ ಒಬ್ಬರು. ಹೊಟ್ಟೆಪಾಡಿಗಷ್ಟೇ ಅಲ್ಲದೆ ಜನರನ್ನು ವೃತ್ತಿಯನ್ನು ಪ್ರೀತಿಸುವ ಪ್ರತಿಯೊಬ್ಬರ ನಡೆ ಹೀಗೇ ಇರುತ್ತದೆ ಎಂದಿದ್ದಾರೆ ಇನ್ನೊಬ್ಬರು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:27 pm, Wed, 2 November 22