Video: ಮುಕಾಬಲಾ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಬೆಂಗಳೂರಿನ ಕಾಲೇಜು ಪ್ರಾಧ್ಯಾಪಕ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳು ನೆಟ್ಟಿಗರ ಮನಸ್ಸು ಗೆಲ್ಲುತ್ತದೆ. ಇದೀಗ ಇಂತಹದ್ದೇ ಡ್ಯಾನ್ಸ್ ವಿಡಿಯೋ ಸಖತ್ ವೈರಲ್ ಬೆಂಗಳೂರಿನ ಪ್ರಾಧ್ಯಾಪಕರೊಬ್ಬರು ಬಾಲಿವುಡ್ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಈ ಡ್ಯಾನ್ಸ್‌ಗೆ ಬಳಕೆದಾರರಿಂದ ಮೆಚ್ಚುಗೆಯೂ ಹರಿದು ಬಂದಿದ್ದು, ಈ ಕುರಿತಾದ ವಿಡಿಯೋ ಇಲ್ಲಿದೆ ನೋಡಿ.

Video: ಮುಕಾಬಲಾ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಬೆಂಗಳೂರಿನ ಕಾಲೇಜು ಪ್ರಾಧ್ಯಾಪಕ
ಬೆಂಗಳೂರು ಕಾಲೇಜ್‌ ಪ್ರೊಫೆಸರ್‌ ಚಿಂದಿ ಡ್ಯಾನ್ಸ್‌
Image Credit source: Instagram

Updated on: Aug 31, 2025 | 8:05 PM

ಶಿಕ್ಷಕರು ಹಾಗೂ ಕಾಲೇಜು ಪ್ರಾಧ್ಯಾಪಕರು ಮಕ್ಕಳಲ್ಲಿ ಪ್ರೋತ್ಸಾಹ ನೀಡುವ ಸಲುವಾಗಿ ಹಾಡು, ನೃತ್ಯ ಹೀಗೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಶಿಕ್ಷಕರ ಇಂತಹ ಸಾಕಷ್ಟು ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತದೆ. ಶಿಕ್ಷಕರ ಕೆಲವು ಡ್ಯಾನ್ಸ್ ವಿಡಿಯೋಗಳು ಹುಬ್ಬೇರಿಸುವಂತೆ ಮಾಡುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯ (Global Academy of Technology, Bangalore) ಪ್ರೊಫೆಸರ್ ಪುಷ್ಪ ರಾಜ್ (Professor Pushpa Raj) ಬಾಲಿವುಡ್ ನ ಪ್ರಸಿದ್ಧ ಟ್ರ್ಯಾಕ್ ಮುಕಾಬಲಾ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಈ ಡ್ಯಾನ್ಸ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ.

gatalbum ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದ್ದು, ನಮ್ಮ ಪ್ರಾಧ್ಯಾಪಕರಿಂದ ಮತ್ತೊಂದು ಅದ್ಭುತ ಪ್ರದರ್ಶನ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ಈ ವಿಡಿಯೋದಲ್ಲಿ ಬೆಂಗಳೂರು ಕಾಲೇಜೊಂದರ ಪ್ರಾಧ್ಯಾಪಕರು ಪ್ರಭುದೇವ ಎನರ್ಜಿಯನ್ನು ಮರುಸೃಷ್ಟಿಸಿದ್ದಾರೆ. ಬಾಲಿವುಡ್ ಮುಕಾಬಲಾ ಹಾಡಿಗೆ ಭರ್ಜರಿ ಸ್ಟೆಪ್ ಹಾಕುತ್ತಿರುವುದನ್ನು ಕಾಣಬಹುದು. ಡ್ಯಾನ್ಸ್ ವೇಳೆ ಶೂವೊಂದು ಹಾರಿ ಹೋಗಿದ್ದು, ಇನ್ನೊಂದು ಶೂ ತೆಗೆದು ಅಡೆತಡೆಯಿಲ್ಲದೇ ನೃತ್ಯ ಪ್ರದರ್ಶನ ನೀಡುವುದನ್ನು ನೋಡಬಹುದು. ತಮ್ಮ ಅತ್ಯದ್ಭುತ ಡ್ಯಾನ್ಸ್ ಪರ್ಫಾರ್ಮೆನ್ಸ್ ಮೂಲಕ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.

ಇದನ್ನೂ ಓದಿ
ಬೆಂಗಳೂರಿನ ಸ್ಕೂಟಿ ಸವಾರನ ಬೆನ್ನ ಮೇಲೆ ಡಿಜಿಟಲ್ ಸೈನ್ ಬೋರ್ಡ್‌ ಬ್ಯಾಗ್‌
ಈ ನಗರಕ್ಕೆ ನಾನು ಹೊರಗಿನವ, ಅಸಲಿ ಕಾರಣ ಬಿಚ್ಚಿಟ್ಟ ಬೆಂಗಳೂರಿಗ
ಬೆಂಗಳೂರಿಗರೇ, ಎಲ್ಲಿ ಗುಂಡಿ ಕಂಡರೂ ಗುಂಡಿ ಗಮನ ಆ್ಯಪ್ ಬಳಸಿ
ಬೆಂಗಳೂರಿನ ಈ ಪಾದಚಾರಿ ಮಾರ್ಗ ಹೇಗಿತ್ತು? ಹೇಗಾಯಿತು ನೋಡಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:Video: ಇದು ಟೆಕ್ನಾಲಜಿ ಎಫೆಕ್ಟ್; ಬೆಂಗಳೂರಿನ ಸ್ಕೂಟಿ ಸವಾರನ ಬೆನ್ನ ಮೇಲೆ ಡಿಜಿಟಲ್ ಸೈನ್ ಬೋರ್ಡ್‌ನ ಆಕರ್ಷಕ ಬ್ಯಾಗ್

ಈ ಪೋಸ್ಟ್ 6.7 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ಯಾರಾದ್ರೂ ಈ ಕಾಲೇಜಿನ ವಿಳಾಸ ಹೇಳಬಹುದಾ ಎಂದು ಕೇಳಿದ್ದಾರೆ. ಮತ್ತೊಬ್ಬರು, ನಿಮ್ಮ ವೃತ್ತಿಯ ಆಯ್ಕೆಯೂ ತಪ್ಪಾಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು ಪ್ರಭುದೇವ ವರ್ಸಸ್ ಪ್ರೊಫೆಸರ್ ದೇವ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಹಾರ್ಟ್ ಸಿಂಬಲ್ ಕಳುಹಿಸಿ ಡ್ಯಾನ್ಸ್ ವಿಡಿಯೋ ಮೆಚ್ಚಿಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ