ರಾಮ್ತಾ ಜೋಗಿ’ ಹಾಡಿಗೆ ಅದ್ಭುತ ಸ್ಟೆಪ್ ಹಾಕಿದ ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳು, ವಿಡಿಯೋ ವೈರಲ್

ಡಾನ್ಸ್ ಎಂದರೆ ಈಗಿನ ಯುವಕ ಯುವತಿಯರಿಗೆ ಎಲ್ಲಿಲ್ಲದ ಕ್ರೇಜ್ ಶಾಲಾ ಕಾಲೇಜುಗಳಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಡಾನ್ಸ್ ಪರ್ಫಾರ್ಮೆನ್ಸ್ ನೀಡುವುದನ್ನು ನೋಡಿರಬಹುದು. ಕೆಲವೊಮ್ಮೆ ಇಂತಹ ಡಾನ್ಸ್ ಪರ್ಫಾರ್ಮೆನ್ಸ್ ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದನ್ನು ನೋಡಿರಬಹುದು. ಇದೀಗ ಬೆಂಗಳೂರು ಕಾಲೇಜಿನ ವಿದ್ಯಾರ್ಥಿಗಳು ಬಾಲಿವುಡ್ ಹಿಟ್ 'ರಾಮ್ತಾ ಜೋಗಿ' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದು ಈ ಡಾನ್ಸ್ ಪರ್ಫಾರ್ಮೆನ್ಸ್ ಗೆ ಸೋಶಿಯಲ್ ಮೀಡಿಯಾ ಬಳಕೆದಾರರು ಬೆರಗಾಗಿದ್ದಾರೆ.

ರಾಮ್ತಾ ಜೋಗಿ ಹಾಡಿಗೆ ಅದ್ಭುತ ಸ್ಟೆಪ್ ಹಾಕಿದ ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳು, ವಿಡಿಯೋ ವೈರಲ್
ವೈರಲ್​​ ವಿಡಿಯೋ
Updated By: ಅಕ್ಷಯ್​ ಪಲ್ಲಮಜಲು​​

Updated on: May 13, 2025 | 11:00 AM

ಕಾಲೇಜ್ (college) ಲೈಫ್ ಇಸ್ ಗೋಲ್ಡನ್ ಲೈಫ್ ಎನ್ನುವ ಮಾತಿದೆ. ಹೀಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಪಠ್ಯದ ಜೊತೆಗೆ ಡಾನ್ಸ್, ಸ್ಪೋರ್ಟ್ಸ್ ಎಂದು ಇನ್ನಿತ್ತರ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಾರೆ. ಇನ್ನು ಕಾಲೇಜ್ ಡೇ, ಇಂಟರ್ ಕಾಲೇಜ್ ಫೆಸ್ಟ್ ಇನ್ನಿತ್ತರ ಇವೆಂಟ್ ಗಳಲ್ಲಿ ಡಾನ್ಸ್ ಪರ್ಫಾರ್ಮೆನ್ಸ್ (dance performance) ನೀಡುವುದನ್ನು ನೋಡಿರಬಹುದು. ಈ ಡಾನ್ಸ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದನ್ನು ನೋಡಿರಬಹುದು. ಇದೀಗ ಬೆಂಗಳೂರು (bengaluru) ಕ್ರಿಸ್ತು ಜಯಂತಿ ಕಾಲೇಜಿನ ವಿದ್ಯಾರ್ಥಿಗಳಿಬ್ಬರೂ ಬಾಲಿವುಡ್ ಹಿಟ್ ‘ರಾಮ್ತಾ ಜೋಗಿ ‘ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದು ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. benantonykvv ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾದ ಈ ವಿಡಿಯೋದಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಕ್ರಿಸ್ತು ಜಯಂತಿ ಕಾಲೇಜಿನ ವಿದ್ಯಾರ್ಥಿಗಳಾದ ಆನ್ಸೆಲಿನ್ ಹಾಗೂ ಜಿನ್‌ಮನ್ ನಗರದ ಬೇರೆ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಉತ್ಸವದಲ್ಲಿ ಡಾನ್ಸ್ ಪ್ರದರ್ಶನ ನೀಡುತ್ತಿರುವುದನ್ನು ಕಾಣಬಹುದು. ಕಪ್ಪು ಹಾಗೂ ನೇರಳೆ ಬಣ್ಣದ ಉಡುಗೆ ಧರಿಸಿ, ಬಾಲಿವುಡ್ ತಾಲ್ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿದ್ದಾರೆ. ಇದನ್ನೂ ಓದಿ ಸೋಫಿಯಾ ಅನ್ಸಾರಿ ಅಂತಾಗಬೇಡಿ, ಸೋಫಿಯಾ ಖುರೇಷಿ ಅವರಂತಾಗಿ ಎಂದ ವ್ಯಕ್ತಿ ಪ್ಯಾಲೆಸ್ಟೈನ್, ಪಾಕ್ ಬೆಂಬಲಿಸಿ ಕರಪತ್ರ ಹಂಚಿದ...

Published On - 11:00 am, Tue, 13 May 25

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ