Viral: ಡೆಲಿವರಿ ಬಾಯ್ಸ್‌ ಈ ಲಿಫ್ಟ್‌ ಉಪಯೋಗಿಸುವಂತಿಲ್ಲ; ಮಂತ್ರಿಮಾಲ್‌ನಲ್ಲಿ ಇದೆಂಥಾ ರೂಲ್ಸ್‌

| Updated By: ಅಕ್ಷತಾ ವರ್ಕಾಡಿ

Updated on: Nov 17, 2024 | 3:23 PM

ಕೆಳ ತಿಂಗಳುಗಳ ಹಿಂದೆ ಬೆಂಗಳೂರಿನ ಜಿಟಿ ಮಾಲ್‌ ಪಂಜೆ ತೊಟ್ಟು ಬಂದ ರೈತನಿಗೆ ಅಪಮಾನ ಮಾಡಿದಂತಹ ಘಟನೆಯೊಂದು ನಡೆದಿತ್ತು. ಇದೀಗ ಅಂತಹದ್ದೇ ಮತ್ತೊಂದು ಘಟನೆ ನಡೆದಿದ್ದು, ಫುಡ್‌ ಡೆಲಿವರಿ ಬಾಯ್ಸ್‌ ಈ ಲಿಫ್ಟ್‌ ಉಪಯೋಗಿಸಬಾರದೆಂದು ಮಂತ್ರಿ ಮಾಲ್‌ ಸಿಬ್ಬಂದಿಗಳು ತಾಕೀತು ಮಾಡಿದ್ದಾರೆ. ಫುಡ್‌ ಡೆಲಿವರಿ ಬಾಯ್‌ಗಾದ ಈ ಅಪಮಾನಕ್ಕೆ ಇದೀಗ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

Viral: ಡೆಲಿವರಿ ಬಾಯ್ಸ್‌ ಈ ಲಿಫ್ಟ್‌ ಉಪಯೋಗಿಸುವಂತಿಲ್ಲ; ಮಂತ್ರಿಮಾಲ್‌ನಲ್ಲಿ ಇದೆಂಥಾ ರೂಲ್ಸ್‌
Follow us on

ಆಧುನಿಕತೆಯ ಈ ಕಾಲದಲ್ಲಿ ಮಾನವೀಯತೆ, ದಯೆ, ನಂಬಿಕೆಗೆ ಬೆಲೆಯೇ ಇಲ್ಲದಂತಾಗಿದೆ. ನಮ್ಮ ಸುತ್ತಮುತ್ತಲಲ್ಲೇ ಪ್ರತಿನಿತ್ಯ ಒಂದಲ್ಲಾ ಒಂದು ಅಮಾನವೀಯ ಘಟನೆಗಳು, ಮುಗ್ಧ ಜನರಿಗೆ ಅಪಮಾನ ಮಾಡುವಂತಹ ಘಟನೆಗಳು ನಡೆಯುತ್ತಿರುತ್ತವೆ. ಕೆಲ ತಿಂಗಳುಗಳ ಹಿಂದೆಯಷ್ಟೇ ಬೆಂಗಳೂರಿನ ಜಿಟಿ ಮಾಲ್‌ ಒಳಗಡೆ ರೈತರೊಬ್ಬರು ಪಂಚೆ ತೊಟ್ಟು ಬಂದರೆಂಬ ಕಾರಣಕ್ಕೆ, ಅವರನ್ನು ಮಾಲ್‌ ಒಳ ಬಿಡದೆ ಅವಮಾನ ಮಾಡಿದಂತಹ ಸುದ್ದಿ ಭಾರೀ ವೈರಲ್‌ ಆಗಿತ್ತು. ಈ ಘಟನೆ ಮಾಸುವ ಮುನ್ನವೇ ಇಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಫುಡ್‌ ಡೆಲಿವರಿ ಬಾಯ್ಸ್‌ ಇಲ್ಲಿ ಈ ಲಿಫ್ಟ್‌ ಉಪಯೋಗಿಸಬಾರದೆಂದು ಮಂತ್ರಿ ಮಾಲ್‌ ಸಿಬ್ಬಂದಿಗಳು ಡೆಲಿವರಿ ಬಾಯ್‌ ಒಬ್ಬರಿಗೆ ತಾಕೀತು ಮಾಡಿದ್ದಾರೆ. ಫುಡ್‌ ಡೆಲಿವರಿ ಬಾಯ್‌ಗಾದ ಈ ಅಪಮಾನಕ್ಕೆ ಇದೀಗ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ನಮ್ಮ ಬೆಂಗಳೂರಿನ ಮಂತ್ರಿ ಮಾಲ್‌ನಲ್ಲಿ ಡೆಲಿವರಿ ಬಾಯ್‌ ಒಬ್ಬರಿಗೆ ಅಪಮಾನ ಮಾಡಲಾಗಿದೆ. ಹೌದು ಇಲ್ಲಿನ ಸಿಬ್ಬಂದಿಗಳು ಡೆಲಿವರಿ ಬಾಯ್ಸ್‌ ಈ ಲಿಫ್ಟ್‌ ಅನ್ನು ಬಳಸಂಗಿಲ್ಲ ಎಂದು ತಾಕೀತು ಮಾಡಿದ್ದಾರೆ. ಇವರ ಈ ದುರಹಂಕಾರದ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಕುರಿತ ವಿಡಿಯೋವನ್ನು ಚೇತನ್‌ ಸೂರ್ಯ ಎಸ್‌ (Chethan_Surya_S) ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಇದೆಂಥ ಅಸ್ಪೃಶ್ಯತೆ? ಅಂದು ಪಂಚೆ ತೊಟ್ಟು ಬಂದ ರೈತನನ್ನು ಒಳ ಬಿಡದೇ ಅವಮಾನ ಮಾಡಿದ ಪ್ರಕರಣ ಮಾಸುವ ಮುನ್ನವೇ, ಇಂದು ಡೆಲಿವರಿ ಹುಡುಗರಿಗೆ ಮಂತ್ರಿಮಾಲ್‌ ಅಪಮಾನ ಮಾಡಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಡೆಲಿವರಿ ಬಾಯ್ಸ್‌ ಈ ಲಿಫ್ಟ್‌ ಬಳಸಬಾರದೆಂದು ಅವಮಾನ ಮಾಡುವಂತಹ ದೃಶ್ಯವನ್ನು ಕಾಣಬಹುದು. ಆ ಸಂದರ್ಭದಲ್ಲಿ ಅಲ್ಲಿದ್ದ ಇಬ್ಬರು ವ್ಯಕ್ತಿಗಳು ಅವರಿಗೂ ಕೂಡಾ ಲಿಫ್ಟ್‌ ಒಳಗೆ ಬಿಡಬೇಕು, ಯಾಕೆ ಮಾನವ ಹಕ್ಕು ಉಲ್ಲಂಘನೆ ಮಾಡ್ತಿರಾ ಎಂದು ಡೆಲಿವರಿ ಬಾಯ್‌ ಪರ ಮಾತನಾಡಿದ್ದಾರೆ.

ಇದನ್ನೂ ಓದಿ: 2024ರ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ಡೆನ್ಮಾರ್ಕ್‌ನ ವಿಕ್ಟೋರಿಯಾ ಕ್ಜೇರ್

ನವೆಂಬರ್‌ 12 ರಂದು ಹಂಚಿಕೊಳ್ಳಲಾದ ಈ ವಿಡಿಯೋ 35 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಮಂತ್ರಿಮಾಲ್‌ನಲ್ಲಿ ಅಲ್ಲಿನ ಕೆಲಗಾರರು ಹಾಗೂ ಡೆಲಿವರಿ ಬಾಯ್ಸ್‌ಗೆ ಬೇರೇನೇ ಲಿಫ್ಟ್‌ ವ್ಯವಸ್ಥೆ ಇದೆ. ಅವರು ಅದನ್ನೇ ಉಪಯೋಗಿಸಬೇಕುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅಪಾರ್ಟ್‌ಮೆಂಟ್‌ಗಳಲ್ಲೂ ಹಿಂಗೇನೇ ಮಾಡ್ತಾರೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ