Video: ಪುಷ್ಪಾ 2 ಸಿನಿಮಾದ ಹಾಡಿಗೆ ಸಖತ್ ಆಗಿ ಸ್ಟೆಪ್‌ ಹಾಕಿದ ಬೆಂಗ್ಳೂರಿನ ಕಾಲೇಜ್ ಸ್ಟೂಡೆಂಟ್ಸ್‌

ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ಕ್ಲಿಪ್ ಗಳು ಬಹುಬೇಗನೆ ನೆಟ್ಟಿಗರ ಗಮನ ಸೆಳೆಯುತ್ತವೆ. ಇದೀಗ ಕಾಲೇಜು ವಿದ್ಯಾರ್ಥಿಗಳ ಡ್ಯಾನ್ಸ್ ವಿಡಿಯೋ ನೋಡಿ ಬಳಕೆದಾರರು ಫಿದಾ ಆಗಿದ್ದಾರೆ. ಪುಷ್ಪಾ 2: ದಿ ರೂಲ್ ಸಿನಿಮಾದ ಅಂಗಾರೋನ್ ಹಾಡಿಗೆ ಕಾಲೇಜು ಸ್ಟೂಡೆಂಟ್ಸ್ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಈ ಕುರಿತಾದ ವಿಡಿಯೋ ಇಲ್ಲಿದೆ ನೋಡಿ.

Video: ಪುಷ್ಪಾ 2 ಸಿನಿಮಾದ ಹಾಡಿಗೆ ಸಖತ್ ಆಗಿ ಸ್ಟೆಪ್‌ ಹಾಕಿದ ಬೆಂಗ್ಳೂರಿನ ಕಾಲೇಜ್ ಸ್ಟೂಡೆಂಟ್ಸ್‌
ಕಾಲೇಜು ವಿದ್ಯಾರ್ಥಿಗಳ ಅದ್ಭುತ ಡ್ಯಾನ್ಸ್ ಪರ್ಫಾರ್ಮೆನ್ಸ್
Image Credit source: Instagram

Updated on: Jul 31, 2025 | 12:33 PM

ಡ್ಯಾನ್ಸ್ (Dance) ಅಂದ್ರೆ ಎಲ್ಲರಿಗೂ ಇಷ್ಟ. ಈಗಿನ ಜನರೇಷನ್ ಅವರು ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವುದರಲ್ಲಿ ನಿಸ್ಸೀಮರು. ಕಾಲೇಜ್ ಡೇ, ಟ್ಯಾಲೆಂಟ್ ಡೇ ಎಂದ ಮೇಲೆ ಕೇಳಬೇಕೇ, ಡ್ಯಾನ್ಸ್ ಇದ್ದೆ ಇರುತ್ತದೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ಅದ್ಭುತವಾಗಿ ಡ್ಯಾನ್ಸ್ ಮಾಡಿ ಎಲ್ಲರ ಗಮನ ಸೆಳೆಯುತ್ತಾರೆ. ಇದೀಗ ಬೆಂಗಳೂರು (Bengaluru) ಕಾಲೇಜೊಂದರ ವಿದ್ಯಾರ್ಥಿಗಳು ಪುಷ್ಪಾ 2: ದಿ ರೂಲ್ (Pushpa 2: The Rule) ಸಿನಿಮಾದ ಅಂಗಾರೋನ್ ಹಾಡಿಗೆ ನೃತ್ಯ ಮಾಡುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ. ಸ್ಟೂಡೆಂಟ್ಸ್‌ ಈ ಹಾಡಿಗೆ ತಕ್ಕಂತೆ ಸ್ಟೆಪ್ ಹಾಗೂ ಮುದ್ದಾಗಿ ಎಕ್ಸ್ಪ್ರೆಶನ್ ಕೊಟ್ಟು ಎಲ್ಲರ ಗಮನ ಸೆಳೆದಿದ್ದಾರೆ. ಈ ಡ್ಯಾನ್ಸ್ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಕಾಲೇಜು ವಿದ್ಯಾರ್ಥಿಗಳ ಅದ್ಭುತ ಡ್ಯಾನ್ಸ್ ಪರ್ಫಾರ್ಮೆನ್ಸ್

ಇದನ್ನೂ ಓದಿ
ವಾಕಿಂಗ್‌ ಹೊರಟಿದ್ದ ಮಹಿಳೆಯ ಮೇಲೆ ಏಕಾಏಕಿ ದಾಳಿ ಮಾಡಿದ ಸಾಕು ನಾಯಿ
16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣ ಉಪಯೋಗಿಸುವಂತಿಲ್ಲ
ಭಿಕ್ಷೆ ಬೇಡಿ ಈ ವ್ಯಕ್ತಿ ಸಂಪಾದಿಸಿದ ಒಟ್ಟು ಆಸ್ತಿ ಎಷ್ಟು ಗೊತ್ತಾ?
ನಡು ರಸ್ತೆಯಲ್ಲಿಯೇ ಬಾಲಕಿಗೆ ಮುತ್ತಿಟ್ಟು ಎಸ್ಕೇಪ್‌ ಆದ ವ್ಯಕ್ತಿ

lekhna ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಬೆಂಗಳೂರು ಕಾಲೇಜಿನ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಪುಷ್ಪಾ 2: ದಿ ರೂಲ್ ಸಿನಿಮಾದ ಅಂಗಾರೋನ್ ಹಾಡಿಗೆ ಡ್ಯಾನ್ಸ್ ಮಾಡುವುದನ್ನು ನೋಡಬಹುದು. ಇಲ್ಲಿ ಹುಡುಗಿಯರು ಪ್ರಾರಂಭದಲ್ಲಿ ಮುದ್ದಾಗಿ ಸ್ಟೆಪ್ ಹಾಕುತ್ತಿದ್ದರೆ, ಸ್ವಲ್ಪ ಸಮಯದಲ್ಲೇ ಹುಡುಗರು ಇವರೊಂದಿಗೆ ಸೇರಿಕೊಂಡಿದ್ದಾರೆ. ಈ ಜೋಡಿಗಳು ಪರಸ್ಪರ ಹಾಡಿಗೆ ತಕ್ಕಂತೆ ಡ್ಯಾನ್ಸ್ ಮಾಡಿದ್ದಾರೆ. ಇವರ ಡ್ಯಾನ್ಸ್ ಪರ್ಫಾರ್ಮೆನ್ಸ್ ನೋಡುತ್ತಾ ನಿಂತಿದ್ದ ಉಳಿದ ವಿದ್ಯಾರ್ಥಿಗಳು ಜೋರಾಗಿ ಕಿರುಚುವ ಮೂಲಕ ಇವರನ್ನು ಪ್ರೋತ್ಸಾಹಿಸುತ್ತಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ: Viral: ಕಡಿಮೆ ಸಂಬಳ, ಬೆಂಗಳೂರಿನಲ್ಲಿ ಬದುಕೋದು ಕಷ್ಟ ಎಂದ ಯುವಕ

ಬಳಕೆದಾರರ ಕಾಮೆಂಟ್‌ಗಳು ಹೀಗಿವೆ

ಈ ವಿಡಿಯೋವೊಂದು ಏಳು ಮಿಲಿಯನ್‌ಗೂ  ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು ಈ ಕಾಲೇಜ್ ವಿದ್ಯಾರ್ಥಿಗಳ ಡ್ಯಾನ್ಸ್ ಪರ್ಫಾರ್ಮೆನ್ಸ್ ಮೆಚ್ಚಿಕೊಂಡಿದ್ದಾರೆ. ಬಳಕೆದಾರರೊಬ್ಬರು, ತುಂಬಾ ಮುದ್ದಾಗಿದೆ. ಈ ಡ್ಯಾನ್ಸ್ ನಿಜಕ್ಕೂ ಅದ್ಭುತವಾಗಿದೆ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರ, ಯಾವ ಕಾಲೇಜು ಎಂದು ಕೇಳಿದ್ದಾರೆ. ಮತ್ತೊಬ್ಬರು, ಈ ಡ್ಯಾನ್ಸ್ ವಿಡಿಯೋವನ್ನು ನಾನು ಮತ್ತೆ ಮತ್ತೆ ನೋಡಿದೆ. ನನ್ನ ಮುಖದಲ್ಲಿ ನಗು ಮೂಡುವಂತೆ ಮಾಡಿತು ಎಂದು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ. ಇನ್ನು ಕೆಲವರು ಹಾರ್ಟ್‌ ಸಿಂಬಲ್‌ ಕಳುಹಿಸುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:30 pm, Thu, 31 July 25