Viral: ತಿಂಗಳಿಗೆ ಅಲ್ಲ, ವಾರಕ್ಕೆ 21 ಸಾವಿರ ರೂ ಸಂಪಾದನೆ; ಇದು ಬೆಂಗಳೂರಿನ ಜೆಪ್ಟೋ ಡೆಲಿವರಿ ಬಾಯ್ ಆದಾಯ

ಸ್ವಿಗ್ಗಿ, ಫ್ಲಿಪ್‌ಕಾರ್ಟ್‌, ಜೊಮ್ಯಾಟೋ, ಜೆಪ್ಟೋ ಸೇರಿದಂತೆ ಹೆಸರಾಂತ ಇ ಕಾಮರ್ಸ್‌ ಅಪ್ಲಿಕೇಶನ್ ಮೂಲಕ ಹೆಚ್ಚಿನವರು ಫುಡ್ ಸೇರಿದಂತೆ ಪ್ರಾಡಕ್ಟ್‌ಗಳನ್ನು ಖರೀದಿ ಮಾಡ್ತಾರೆ. ಆದರೆ ಮನೆಬಾಗಿಲಿಗೆ ಆರ್ಡರ್ ಮಾಡಿದ ಉತ್ಪನ್ನಗಳನ್ನು ತಲುಪಿಸುವ ಡೆಲಿವರಿ ಬಾಯ್‌ಗಳ ಸಂಪಾದನೆ ಯಾರಿಗೂ ತಿಳಿದಿಲ್ಲ. ಹೌದು, ಜೆಪ್ಟೋದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುವ ವ್ಯಕ್ತಿಯೊಬ್ಬರು ತಮ್ಮ ವಾರದ ಗಳಿಕೆಯ ಬಗ್ಗೆ ರಿವೀಲ್‌ ಮಾಡಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ನಾಂದಿ ಹಾಡಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ತಿಂಗಳಿಗೆ ಅಲ್ಲ, ವಾರಕ್ಕೆ 21 ಸಾವಿರ ರೂ ಸಂಪಾದನೆ; ಇದು ಬೆಂಗಳೂರಿನ ಜೆಪ್ಟೋ ಡೆಲಿವರಿ ಬಾಯ್ ಆದಾಯ
ಸಾಂದರ್ಭಿಕ ಚಿತ್ರ
Image Credit source: Pinterest

Updated on: Oct 20, 2025 | 10:41 AM

ಬೆಂಗಳೂರು, ಅಕ್ಟೋಬರ್‌ 20: ದಿನಗಳಲ್ಲಿ ಆನ್ಲೈನ್ ಮೂಲಕ ಫುಡ್ ಸೇರಿದಂತೆ ಉತ್ಪನ್ನಗಳನ್ನು ಆರ್ಡರ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಸರಿಯಾದ ಸಮಯಕ್ಕೆ ನೀವು ಆರ್ಡರ್ ಮಾಡಿದ ಫುಡ್, ಉತ್ಪನ್ನಗಳನ್ನು ಮನೆ ಬಾಗಿಲಿಗೆ ತಲುಪಿಸುವಲ್ಲಿ ಡೆಲಿವರಿ ಬಾಯ್ ಗಳ (Delivery Boy) ಪಾತ್ರ ಹಿರಿದು. ಆದರೆ ಈ ಡೆಲಿವರಿ ಬಾಯ್ ಗಳ ಸಂಪಾದನೆ ಎಷ್ಟಿರಬಹುದು ಎಂದು ಯಾವತ್ತಾದ್ರೂ ಯೋಚನೆ ಮಾಡಿದ್ದೀರಾ. ಇದೀಗ ಬೆಂಗಳೂರಿನ ಜೆಪ್ಟೋ (Zepto) ಡೆಲಿವರಿ ಬಾಯ್‌ ಒಬ್ಬರು ವಾರದ ಸಂಬಳದ ಬಗ್ಗೆ ರಿವೀಲ್ ಮಾಡಿದ್ದಾರೆ. ಈ ಪೋಸ್ಟ್ ನೋಡಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇದು ಜೆಪ್ಟೋ ಡೆಲಿವರಿ ಬಾಯ್‌ ವಾರದ ಸಂಪಾದನೆ

ಬೆಂಗಳೂರು ಮೂಲದ ಜೆಪ್ಟೋ ಡೆಲಿವರಿ ಬಾಯ್‌ ಒಬ್ಬರು ಸೈಡ್ ಹುಸ್ಟ್ಲೆ ಪಗ್ಲೂ (SideHustlePaglu) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ವಾರದ ಗಳಿಕೆಯ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಬೆಳಿಗ್ಗೆ 10 ರಿಂದ ರಾತ್ರಿ 10 ರವರೆಗೆ 12 ಗಂಟೆಗಳ ಕಾಲ ಕೆಲಸ ಮಾಡುತ್ತೇನೆ ಎಂದು ಶಿರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ವಾರದಲ್ಲಿ ಸರಿಸುಮಾರು 387 ಆರ್ಡರ್‌ಗಳನ್ನು ಗ್ರಾಹಕರಿಗೆ ತಲುಪಿಸಿ, ಇಂಧನ ಸೇರಿದಂತೆ ಇತರ ಖರ್ಚು ವೆಚ್ಚಗಳನ್ನು ಹೊರತುಪಡಿಸಿ, ವಾರಕ್ಕೆ 18,906 ರೂ ಗಳಿಸಿರುವುದನ್ನು ನೀವಿಲ್ಲಿ ನೋಡಬಹುದು.

ವೈರಲ್‌ ಪೋಸ್ಟ್‌ ಇಲ್ಲಿದೆ ನೋಡಿ

What I earned in a week (working morning 10am to night 10pm) as zepto delivery
byu/samfucku inSideHustlePaglu

ಇದನ್ನೂ ಓದಿ
ಕುದುರೆ ಏರಿ ಬಂದು ಪ್ರವಾಸಿಗರಿಗೆ ಆಹಾರ ತಲುಪಿಸಿದ ಡೆಲಿವರಿ ಬಾಯ್
ಆನ್ಲೈನ್‌ನಲ್ಲಿ ಆರ್ಡರ್ ಮಾಡಿದ್ದು ಬೆಳ್ಳಿ ನಾಣ್ಯ, ಕೈ ಸೇರಿದ್ದು ಈ ಐಟಮ್ಸ್‌
ಆನ್ಲೈನ್ ಫುಡ್ ದರವು ಶೇ 80 ರಷ್ಟು ಹೆಚ್ಚು
ಪಾರ್ಸೆಲ್ ನೀಡಲು ಬಂದ ಪೋಸ್ಟ್ ಮ್ಯಾನ್ ಮಾಡಿದ ಕೆಲಸಕ್ಕೆ ವಿದೇಶಿ ಮಹಿಳೆ ಫಿದಾ

ಮಳೆಯಿಂದಾಗಿ ಜನರು ಹೆಚ್ಚು ಆರ್ಡರ್‌ಗಳನ್ನು ಮಾಡಿದ್ದು. ಹೀಗಾಗಿ ವಾರದಲ್ಲಿ 21,000 ರೂ ಗಳಿಸುವುದನ್ನು ಈ ಪೋಸ್ಟ್ ನಲ್ಲಿ ನೋಡಬಹುದು. ಇನ್ನು ಮೂರು ದಿನಗಳಲ್ಲೂ 12,000 ರೂ ಸಂಪಾದನೆ ಮಾಡಿದ್ದು, ವಾರದಲ್ಲಿ ಸತತ ಎರಡು ದಿನಗಳ ಕಾಲ ಸಂಜೆ 6 ರಿಂದ ರಾತ್ರಿ 11 ರವರೆಗೆ ಇಷ್ಟು ಹಣ ಸಂಪಾದನೆ ಮಾಡಿದ್ದೇನೆ. ಮಳೆ ಬಂದರೆ ಆರ್ಡರ್ ಗಳು ಹೆಚ್ಚು ಸಿಗುತ್ತವೆ ಹಾಗೂ ಅದರಿಂದ ಹಣ ಹೆಚ್ಚು ಗಳಿಸಲು ಸಾಧ್ಯವಾಯ್ತು ಎಂದು ಹೇಳಿರುವುದನ್ನು ಕಾಣಬಹುದು.

ಇದನ್ನೂ ಓದಿ:Video: ಬೈಕ್ ಅಲ್ಲ, ಕುದುರೆ ಏರಿ ಬಂದು ಪ್ರವಾಸಿಗರಿಗೆ ಆಹಾರ ತಲುಪಿಸಿದ ಡೆಲಿವರಿ ಬಾಯ್

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಅಚ್ಚರಿ ವ್ಯಕ್ತಪಡಿಸಿದ್ದು,ಒಬ್ಬ ಬಳಕೆದಾರ ವಾರದಲ್ಲಿ ಇಷ್ಟು ಆದಾಯ ಗಳಿಸಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಡೆಲಿವರಿ ಬಾಯ್ ಗಳಿಗೆ ಅಷ್ಟೇನು ಆದಾಯವಿಲ್ಲ ಈ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನು ನೋಡಿದ್ರೆ ಕಂಪನಿಗಳಲ್ಲಿ ಕೆಲಸ ಮಾಡೋದಕ್ಕಿಂತ ಡೆಲಿವರಿ ಬಾಯ್ ಆಗೋದೇ ಬೆಸ್ಟ್ ಎಂದು ಇನ್ನೊಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 10:41 am, Mon, 20 October 25