
ಬೆಂಗಳೂರು, ಅಕ್ಟೋಬರ್ 30: ಈಗಿನ ಕಾಲದಲ್ಲಿ ಓದಿಗೆ ತಕ್ಕಂತಹ ಉದ್ಯೋಗ (Job) ಸಿಗುವುದೇ ಕಷ್ಟ. ಒಂದೊಳ್ಳೆ ಸಂಬಳವಿರುವ ಉದ್ಯೋಗಕ್ಕೆ ಸಿಕ್ಕರೂ ಒತ್ತಡಭರಿತ ವಾತಾವರಣವು ಈ ಕೆಲಸ ಬೇಡವೇ ಬೇಡ ಎನ್ನುವ ಭಾವನೆ ಕೂಡ ಬರುತ್ತದೆ. ಎಷ್ಟೇ ಒತ್ತಡವಿರಲಿ ಅನಿವಾರ್ಯಕ್ಕೆ ಕಟ್ಟು ಬಿದ್ದು ಕೆಲಸ ಮಾಡುತ್ತಾರೆ. ಸಾಧ್ಯವೇ ಇಲ್ಲ ಎಂದಾಗ ಮಾತ್ರ ಉದ್ಯೋಗ ಬಿಡುವ ನಿರ್ಧಾರಕ್ಕೆ ಬರುತ್ತಾರೆ. ಆದರೆ ಇಲ್ಲೊಬ್ಬ ಇಂಟರ್ನ್‌ಗೆ ಇದೇ ರೀತಿ ಅನುಭವವಾಗಿದೆ. ಬೆಂಗಳೂರು ಮೂಲದ ಎಐ ಸ್ಟಾರ್ಟ್ಅಪ್‌ನಲ್ಲಿ (AI Startup) ಇಂಟರ್ನ್ ಆಗಿ ಸೇರಿದ್ದ ವ್ಯಕ್ತಿಯೂ ತಮ್ಮ ಕರಾಳ ಅನುಭವವನ್ನು ಹಂಚಿಕೊಂಡಿದ್ದಾರೆ. ನಾಲ್ಕು ತಿಂಗಳ ಬಳಿಕ ಯಾವುದೇ ಉದ್ಯೋಗ ಅವಕಾಶವಿಲ್ಲದೇ ಇಂಟರ್ನ್‌ಶಿಪ್ ತೊರೆದಿದ್ದೇನೆ ಎಂದು ಹೇಳಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಇದು ಕೆಲಸದ ಸ್ಥಳಗಳಲ್ಲಿ ಸರ್ವೆ ಸಾಮಾನ್ಯವಾಗಿರುತ್ತದೆ ಎಂದು ಹೇಳಿದ್ದಾರೆ.
ಕ್ರಿಶ್ ಟ್ರಾವೆಲರ್ (krish traveller) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ಗೆ ಭಾರತೀಯ ಸ್ಟಾರ್ಟ್ಅಪ್‌ನಲ್ಲಿ ನನ್ನ ‘ಮೊದಲ ಆರಂಭ’ ದುಃಸ್ವಪ್ನವಾಯಿತು” ಎಂಬ ಶೀರ್ಷಿಕೆ ಬರೆದುಕೊಂಡಿದ್ದಾರೆ. ನನ್ನ ವೃತ್ತಿಜೀವನದಲ್ಲಿ ಸ್ವಲ್ಪ ಸಮಯ ಕಳೆದ ನಂತರ ಮತ್ತೆ ಕೆಲಸಕ್ಕೆ ಮರಳುವುದು ಕಷ್ಟವಾಗಿತ್ತು. ಆದರೆ ಅದು ಇಂಟರ್ನ್ ಅಥವಾ ತರಬೇತಿ ಪಾತ್ರವಾಗಿದ್ದರೂ ಸಹ, ನನಗೆ ಕೆಲಸ ಬೇಕಿತ್ತು. ನಾನು ಎಲ್ಲವನ್ನು ನಿರ್ವಹಿಸುವೆ ಅಂದುಕೊಂಡೆ. ಹೀಗಿರುವಾಗ ಬೆಂಗಳೂರಿನಲ್ಲಿರುವ ಎಐ ಸ್ಟಾರ್ಟ್‌ಅಪ್‌ನಿಂದ ನನಗೆ ಇಂಟರ್ನ್‌ಶಿಪ್ ಆಫರ್ ಸಿಕ್ಕಿತು. ನಾನು ನಿಜವಾಗಿಯೂ ಉತ್ಸುಕನಾಗಿದ್ದೆ, ಸಂಬಳದ ಬಗ್ಗೆ ಹೆಚ್ಚು ಯೋಚಿಸಲಿಲ್ಲ. ನನ್ನ ಕೆಲಸವನ್ನು ನೂರಕ್ಕೆ ನೂರರಷ್ಟು ಮಾಡಲು ಸಿದ್ಧವಿದ್ದೆ. ತಂಡದಲ್ಲಿ ಆರರಿಂದ ಏಳು ಜನರು ಡೇಟಾ ವಿಶ್ಲೇಷಣೆ ಮಾಡುತ್ತಿದ್ದರು. ಒಬ್ಬ ಮ್ಯಾನೇಜರ್, ಇಬ್ಬರು ಪೂರ್ಣ ಸಮಯದ ಉದ್ಯೋಗಿಗಳು ಮತ್ತು ನಾಲ್ಕು ಇಂಟರ್ನ್‌ಗಳು (ನಾನು ಸೇರಿದಂತೆ) ತಂಡವು ಸಣ್ಣದಿತ್ತು. ಮ್ಯಾನೇಜರ್ ಕೆಲಸವನ್ನು ನಿಯೋಜಿಸುತ್ತಿದ್ದರು, ಸಹವರ್ತಿಗಳು ಇಂಟರ್ನ್‌ಗಳ ಸಹಾಯದಿಂದ ಅದನ್ನು ನಿರ್ವಹಿಸುತ್ತಿದ್ದರು. ಎಲ್ಲರೂ ಒಂದು ವಾರದೊಳಗೆ ಅಂತಿಮ ವಿಶ್ಲೇಷಣೆಯನ್ನು ಸಲ್ಲಿಸುತ್ತಿದ್ದರು ಎಂದು ಹೇಳಿದ್ದಾರೆ.
My “first start” in an Indian startup turned into a nightmare…
byu/krish_traveller inStartUpIndia ಇದನ್ನೂ ಓದಿ
ಆದರೆ… ಮೊದಲ ಎರಡು ವಾರಗಳಲ್ಲಿ, ನಾನು ನಿರೀಕ್ಷೆಗಿಂತ ವೇಗವಾಗಿ ವಿಷಯಗಳನ್ನು ಎತ್ತಿಕೊಂಡು ಕೆಲಸ ಮಾಡಿ ಮುಗಿಸಿದೆ. ನನ್ನ ಸಹಚರನು ಇದನ್ನೆಲ್ಲಾ ಗಮನಿಸಿ ತನ್ನ ಎಲ್ಲಾ ಕೆಲಸಗಳನ್ನು ನನಗೆ ವಹಿಸಿಸಿದನು. ಪ್ರತಿದಿನ ಇದೇ ಕಥೆಯಾಗಿತ್ತು. ಮೊದಲ ತಿಂಗಳ ಹೊತ್ತಿಗೆ, ನಾನು ದಿನಕ್ಕೆ 2-3 ವಿಶ್ಲೇಷಣೆಗಳನ್ನು ಪೂರ್ಣಗೊಳಿಸುತ್ತಿದ್ದೆ, ಆದರೆ ಅದನ್ನೇ ಆತ ಬಂಡವಾಳವಾಗಿಸಿಕೊಂಡು ನನ್ನ ಕೆಲಸವನ್ನು ತನ್ನ ಕೆಲಸದಂತೆ ಮ್ಯಾನೇಜರ್‌ಗೆ ವರದಿ ಮಾಡುತ್ತಿದ್ದನು. ಮೊದಲಿಗೆ ನನಗೆ ಅದು ಅರ್ಥವಾಗಲಿಲ್ಲ. ಕೆಲಸ ಪೂರ್ಣಗೊಳಿಸಲು ತಡರಾತ್ರಿ ಕುಳಿತುಕೊಂಡೆ. ನನ್ನ ಕಣ್ಣುಗಳು ಈಗಾಗಲೇ ದುರ್ಬಲವಾಗಿದ್ದವ ನಿರಂತರ 10 ಗಂಟೆಗಳ ಲ್ಯಾಪ್‌ಟಾಪ್ ಅವಧಿಗಳು ಅದನ್ನು ಇನ್ನಷ್ಟು ಹದಗೆಡಿಸಿದವು. ನನಗೆ ವಾಂತಿ, ದಣಿವು, ಹೆಚ್ಚು ಗಮನ ಹರಿಸಲು ಸಾಧ್ಯವಿಲ್ಲ ಅಂದುಕೊಂಡೆ ಎಂದು ವಾಸ್ತವ ಸ್ಥಿತಿ ವಿವರಿಸಿದ್ದಾರೆ.
ನನ್ನ ಆರೋಗ್ಯದ ಬಗ್ಗೆ ನಾನು ನನ್ನ ಸಹೋದ್ಯೋಗಿ ಮತ್ತು ವ್ಯವಸ್ಥಾಪಕರಿಗೆ ಹೇಳಿದೆ. ನನ್ನ ಸಹೋದ್ಯೋಗಿ ಹೆಚ್ಚು ಕೆಲಸ ನೀಡಲು ವ್ಯವಸ್ಥಾಪಕರಿಗೆ ಹೇಳಿದನು. ನನಗೆ ಕಚೇರಿ ರಾಜಕೀಯ ಅಥವಾ ಜನರಿಗೆ ಬೆಣ್ಣೆ ಹಚ್ಚುವ ಹವ್ಯಾಸವಿರಲಿಲ್ಲ. ನನ್ನಿಂದ ಸಾಧ್ಯವಾದಷ್ಟು ಕೆಲಸ ಮಾಡಿದೆ. ಇಬ್ಬರು ಸಹೋದ್ಯೋಗಿಗಳು ನನ್ನ ವಿರುದ್ಧ ನಿಂತರು. ನಿಮ್ಮ ಕೆಲಸ ಸಾಕಾಗುವುದಿಲ್ಲ, ಮ್ಯಾನೇಜ್‌ಮೆಂಟ್ ನೀವು ಒಂದು ವಾರದಲ್ಲಿ ಸುಧಾರಿಸಬೇಕೆಂದು ಬಯಸುತ್ತದೆ ಎಂದಿತು. ನನಗೆ ಆಘಾತವಾಯಿತು. ಕ್ಲೈಂಟ್ ಕೂಡ ನನ್ನ ವಿಶ್ಲೇಷಣೆಯನ್ನು ಮೊದಲೇ ಮೆಚ್ಚಿಕೊಂಡಿದ್ದರು. ನನ್ನ ಸಹೋದ್ಯೋಗಿಗಳು ಎಲ್ಲಾ ಯೋಜನೆಗಳನ್ನು ಮೊದಲಿನಿಂದ ಪುನಃ ಮಾಡುವುದಾಗಿ ಅವರ ಬಳಿ ಹೇಳಿಕೊಂಡರು. ಕ್ಲೈಂಟ್‌ಗೆ ಕಳುಹಿಸಲಾದ ಅಂತಿಮ ವರದಿಗಳನ್ನು ನೋಡಿದಾಗ ಅದು ನಾನೇ ಮಾಡಿದ ವಿಶ್ಲೇಷಣೆಯಾಗಿತ್ತು. ನಾನು ಆ ಬಗ್ಗೆ ನೇರವಾಗಿ ಹೇಳಿದಾಗ ಕ್ಲೈಂಟ್ ಅದನ್ನು ನಿರಾಕರಿಸಿದರು. ಅಷ್ಟರಲ್ಲಾಗಲೇ ನನ್ನ ಆರೋಗ್ಯ ಕೆಟ್ಟಿತ್ತು. ನನ್ನನ್ನು ಬೇರೆಯವರು ಬಳಸುತ್ತಿದ್ದಾರೆ ಎಂದು ನನಗೆ ಅನಿಸಿತು. ನಾಲ್ಕು ತಿಂಗಳ ನಂತರ, ಯಾವುದೇ ಉದ್ಯೋಗ ಅವಕಾಶವಿಲ್ಲದೇ ನಾನು ಇಂಟರ್ನ್‌ಶಿಪ್ ತೊರೆದೆ. ಇದೀಗ ಇನ್ನೊಂದು ಅವಕಾಶವನ್ನು ಹುಡುಕುತ್ತಿದ್ದೇನೆ. ನನ್ನ ವೃತ್ತಿ ಜೀವನ ಪ್ರಾರಂಭಿಸುವುದು ಕಷ್ಟ ಎಂದು ತಿಳಿದಿತ್ತು. ಆದರೆ ನಾನು ಈ ರೀತಿ ಸೋತು ಹೋಗುತ್ತೇನೆ ಎಂದು ತಿಳಿದಿರಲಿಲ್ಲ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:ಈ ಟೈಮ್‌ನಲ್ಲಿ ಕೆಲ್ಸದಿಂದ ವಜಾಗೊಳಿಸಿದ್ರೆ ತೊಂದರೆಯೇ ಹೆಚ್ಚು ಎಂದ ಸಾಫ್ಟ್‌ವೇರ್ ಇಂಜಿನಿಯರ್
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಒಬ್ಬ ಬಳಕೆದಾರ ಇಂತಹ ಅನುಭವಗಳು ಆದಾಗಲೇ ಕೆಲಸದ ಸ್ಥಳದಲ್ಲಿ ಎಂತೆಂತಹ ಜನರು ಇರ್ತಾರೆ ಎಂದು ತಿಳಿಯುವುದು, ಏನೇ ಆದ್ರೂ ನಿಮ್ಮ ಕೆಲಸ ನಿಷ್ಠೆಯಿಂದ ಮಾಡಿ ಎಂದು ಸಲಹೆ ನೀಡಿದ್ದಾರೆ. ಇನ್ನೊಬ್ಬರು ಬದುಕಿನ ಈ ಅನುಭವಗಳು ಸರ್ವೇ ಸಾಮಾನ್ಯ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ನೀವು ಇಂಟರ್ನ್ ಶಿಪ್ ತೊರೆದದ್ದೇ ಒಳ್ಳೆಯದಾಯ್ತು, ಒಳ್ಳೆಯ ಅವಕಾಶಗಳು ಸಿಗುತ್ತದೆ ಕಾಯಿರಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ