
ಬೆಂಗಳೂರು, ಜನವರಿ 26: ಬೆಂಗಳೂರು (Bengaluru) ಅಂದರೆ ಯುವಕ ಯುವತಿಯರಿಗೆ ಅದೇನೋ ಸೆಳೆತ, ಹೀಗಾಗಿ ಅದೆಷ್ಟೋ ಯುವ ಮನಸ್ಸುಗಳನ್ನು ಕೈ ಬೀಸಿ ತನ್ನತ್ತ ಕರೆಯುವ ತಾಕತ್ತು ಈ ನಗರಕ್ಕಿದೆ. ಆದರೆ ಪ್ರಾರಂಭದಲ್ಲಿ ಈ ನಗರದ ವಾತಾವರಣಕ್ಕೆ, ಇಲ್ಲಿನ ಜೀವನ ಶೈಲಿಗೆ ಹೊಂದಿಕೊಳ್ಳುವುದು ಎಷ್ಟೋ ಜನರಿಗೆ ಕಷ್ಟವಾಗುವುದಿದೆ. ಲಕ್ನೋದ ಮಹಿಳೆಯೊಬ್ಬರು (Lucknow woman) ಈಗ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಇಲ್ಲಿನ ಜೀವನದ ಬಗ್ಗೆ ಚಿಂತನಶೀಲ ಪೋಸ್ಟ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ. ಕೆಲಸದ ಜತೆ ಜತೆಗೆ ಈ ನಗರದಲ್ಲಿ ಈ ರೀತಿ ಬದುಕಿ ಎಂದು ಸಲಹೆ ನೀಡಿದ್ದಾರೆ.
ಜ್ಯೋತ್ಸ್ನಾ ಗುಪ್ತಾ (Jyotsna Gupta) ಬೆಂಗಳೂರು ವೃತ್ತಿಪರ ಅವಕಾಶಗಳಿಗಿಂತ ಹೆಚ್ಚಿನದನ್ನು ಹೇಗೆ ನೀಡುತ್ತದೆ ಎಂಬುವುದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ನಿಮಗೆ ನೀಡಲು ತುಂಬಾ ಇದೆ. ಈ ನಗರವನ್ನು ಸರಿಯಾಗಿ ಬಳಸಿಕೊಳ್ಳದ ಅನೇಕ ಜನರನ್ನು ನಾನು ನೋಡುತ್ತೇನೆ. ಜನರ ಸಂಪರ್ಕಗಳು, ಭೇಟಿಗಳು, ತಂತ್ರಜ್ಞಾನದಿಂದ ಹವ್ಯಾಸಗಳವರೆಗೆ, ಕ್ರೀಡೆ, ನೃತ್ಯ, ಬೈಕಿಂಗ್, ಓಟ ಎಲ್ಲವೂ ಇದೆ. ಬೆಂಗಳೂರು ಕೇವಲ ಹಠಮಾರಿ ಸ್ಥಳವಲ್ಲ. ನೀವು ಬಯಸಿದ್ದನ್ನು ಪಡೆಯಲು ಹೆದರುತ್ತಿದ್ದರೆ ಈ ಸ್ಥಳವು ಅಂತಹ ಜೀವನವನ್ನು ನಡೆಸಲು ಉತ್ತಮ ಸ್ಥಳವಾಗಿದೆ. ಈ ನಗರವನ್ನು ಕೆಲಸಕ್ಕಾಗಿ ಮಾತ್ರವಲ್ಲ, ಜೀವನವನ್ನು ನಿಜವಾಗಿಯೂ ಆನಂದಿಸಲು ಬಳಸಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ.
Bangalore has so much to offer.
Yet I see so many people not really leveraging what this city gives you. The people, the connections, the meetups, and the ease of finding your kind of community.
From tech to hobbies.
From beginner-friendly communities to serious ones.
From sports…— Jyotsna Gupta (@imJenal) January 25, 2026
ಇದನ್ನೂ ಓದಿ: ಬೆಂಗಳೂರಿನ ಈ ಏರಿಯಾದಲ್ಲಿ 2BHK ಮನೆ ಬಾಡಿಗೆ 70 ಸಾವಿರ ರೂ; ವಾಸ್ತವ ಸ್ಥಿತಿ ಬಿಚ್ಚಿಟ್ಟ ಸಾಫ್ಟ್‌ವೇರ್ ಇಂಜಿನಿಯರ್
ಜನವರಿ 25 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಮೂವತ್ತೇಳು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ನಿಮ್ಮ ಮಾತನ್ನು ಒಪ್ಪುತ್ತೇನೆ ಎಂದಿದ್ದಾರೆ. ಮತ್ತೊಬ್ಬರು, ಒಮ್ಮೆ ನೀವು ನಗರದಿಂದ ಹೊರಬಂದರೆ ನೀವು ಇದೆಲ್ಲವನ್ನೂ ಕಳೆದುಕೊಳ್ಳುತ್ತೀರಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಇಡೀ ದೇಶದ ಬೇರೆ ಯಾವುದೇ ನಗರವು ಬೆಂಗಳೂರು ನೀಡುವ ಕಾಸ್ಮೋಪಾಲಿಟನ್ ವೈಬ್‌ಗಳಿಗೆ ಹತ್ತಿರ ಬರುತ್ತದೆ ಎಂದು ನಾನು ಭಾವಿಸುವುದಿಲ್ಲ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:26 pm, Mon, 26 January 26