Viral: ನೋ ರೊಮ್ಯಾನ್ಸ್‌, ಇದು ಕ್ಯಾಬ್ ಓಯೋ ಅಲ್ಲ; ವೈರಲ್‌ ಆಯ್ತು ಕ್ಯಾಬ್‌ನ ವಾರ್ನಿಂಗ್‌ ಬೋರ್ಡ್‌

| Updated By: ಅಕ್ಷತಾ ವರ್ಕಾಡಿ

Updated on: Mar 23, 2025 | 1:55 PM

ಪಾರ್ಕ್‌, ಟ್ರೈನ್‌, ಬಸ್‌, ಬಸ್‌ಸ್ಟ್ಯಾಂಡ್‌ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕೆಲವೊಂದು ಪ್ರೇಮಿಗಳು ಲೋಕದ ಪರಿವೇ ಇಲ್ಲದೆ ಕಿಸ್ಸಿಂಗ್-ರೊಮ್ಯಾನ್ಸ್‌ ಅಂತ ಅತಿರೇಕವಾಗಿ ವರ್ತಿಸುತ್ತಿರುತ್ತಾರೆ. ಕ್ಯಾಬ್‌ನಲ್ಲೂ ಆಗುವ ಇಂತಹ ಘಟನೆಗಳಿಂದ ಬೇಸತ್ತು ಇಲ್ಲೊಬ್ಬ ಕ್ಯಾಬ್‌ ಡ್ರೈವರ್‌ ನೋ ರೊಮ್ಯಾನ್ಸ್..‌ ಇದು ಕ್ಯಾಬ್‌ ಓಯೋ ಅಲ್ಲ, ನಡುವೆ ಅಂತರವಿರಲಿ ವಾರ್ನಿಂಗ್‌ ಬೋರ್ಡ್‌ ಒಂದನ್ನು ಕ್ಯಾಬ್‌ನಲ್ಲಿ ನೇತು ಹಾಕಿದ್ದಾನೆ. ಈ ವಾರ್ನಿಂಗ್‌ ಬೋರ್ಡ್‌ ಫೋಟೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Viral: ನೋ ರೊಮ್ಯಾನ್ಸ್‌, ಇದು ಕ್ಯಾಬ್ ಓಯೋ ಅಲ್ಲ; ವೈರಲ್‌ ಆಯ್ತು ಕ್ಯಾಬ್‌ನ  ವಾರ್ನಿಂಗ್‌ ಬೋರ್ಡ್‌
Bengaluru Cab Driver's Warning Note
Follow us on

ಬೆಂಗಳೂರು, ಮಾ. 23: ಪ್ರೀತಿಯಲ್ಲಿ ಬಿದ್ದವರಿಗೆ ಲೋಕದ ಪರಿವೇ ಇರಲ್ಲ ಅಂತಾರೆ. ಈ ಮಾತನ್ನು ನಿಜವೆಂದು ಪಾರ್ಕ್‌ , ಬಸ್‌, ಟ್ರೈನ್‌, ಬಸ್‌ಸ್ಟ್ಯಾಂಡ್‌ ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿ (public space) ಮೈ ಮರೆತು ಕಿಸ್ಸಿಂಗ್‌-ರೊಮ್ಯಾನ್ಸ್‌ ಮಾಡುವ ಕೆಲ ಪ್ರೇಮಿಗಳು (Lovers) ಆಗಾಗ್ಗೆ ತೋರಿಸಿಕೊಡುತ್ತಾರೆ. ಇವರ ಅತಿರೇಕದ ವರ್ತನೆಗಳು ಇತರರಿಗೂ ಮುಜುಗರವನ್ನು ಉಂಟು ಮಾಡುತ್ತದೆ. . ಕ್ಯಾಬ್‌ನಲ್ಲೂ ಆಗುವಂತಹ ಇಂತಹ ನಾಚಿಕೆಗೇಡಿನ ಘಟನೆಗಳಿಂದ ಬೇಸತ್ತು ಬೆಂಗಳೂರಿನ ಕ್ಯಾಬ್‌ ಡ್ರೈವರ್‌  ನೋ ರೊಮ್ಯಾನ್ಸ್..‌ ಇದು ಕ್ಯಾಬ್‌ ಓಯೋ ಅಲ್ಲ, ನಡುವೆ ಅಂತರವಿರಲಿ ವಾರ್ನಿಂಗ್‌ ಬೋರ್ಡ್‌  ಒಂದನ್ನು ಕ್ಯಾಬ್‌ನಲ್ಲಿ ನೇತು ಹಾಕಿದ್ದಾನೆ. ಈ ಎಚ್ಚರಿಕೆ ಫಲಕದ ಫೋಟೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಬೆಂಗಳೂರಿನ ಕ್ಯಾಬ್‌ ಡ್ರೈವರ್‌ ತನ್ನ ಕ್ಯಾಬ್‌ನಲ್ಲಿ ನೋ ರೊಮ್ಯಾನ್ಸ್..‌ ಇದು ಕ್ಯಾಬ್‌ ಓಯೋ ಅಲ್ಲ, ನಡುವೆ ಅಂತರವಿರಲಿ ಎಂಬ ಎಚ್ಚರಿಕೆ ಫಲಕವನ್ನು ಕ್ಯಾಬ್‌ನಲ್ಲಿ ನೇತು ಹಾಕುವ ಮೂಲಕ ತನ್ನ ಕ್ಯಾಬ್‌ನಲ್ಲಿ ಪ್ರಯಾಣಿಸುವ ಪ್ರೇಮಿಗಳು ಮಿತಿಮೀರಿ ವರ್ತಿಸಬಾರದು ಎಂದು ವಾರ್ನಿಂಗ್‌ ನೀಡಿದ್ದಾನೆ. ಈ ಫೋಟೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Saw this in a cab in Bengaluru today
byu/dancing_pappu inindiasocial

ಇದನ್ನೂ ಓದಿ
IFFCO ನಲ್ಲಿ ಪದವೀಧರರಿಗೆ ಉದ್ಯೋಗವಕಾಶ; ತಿಂಗಳಿಗೆ 33,000 ರೂ. ಸಂಬಳ
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್​​ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ
ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೇಮಕಾತಿ; ಡಿಗ್ರಿ ಕಂಪ್ಲೀಟ್ ಆಗಿದ್ರೆ ಸಾಕು
ಜೂ.ಇಂಜಿನಿಯರ್ ಹುದ್ದೆಗೆ ನೇಮಕಾತಿ; ಮಾ. 8 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭ

ಇತ್ತೀಚೆಗೆ ಸೋಷಿಯಲ್‌ ಮೀಡಿಯಾ ಬಳಕೆದಾರರೊಬ್ಬರು dancing_pappu ಎಂಬ ಹೆಸರಿನ ರೆಡ್ಡಿಟ್‌ ಖಾತೆಯಲ್ಲಿ ಕ್ಯಾಬ್‌ನಲ್ಲಿದ್ದ ಈ ಎಚ್ಚರಿಕೆ ಫಲಕದ ಫೋಟೋವನ್ನು ಹಂಚಿಕೊಂಡು, “ಇಂದು ಬೆಂಗಳೂರಿನ ಕ್ಯಾಬ್‌ ಒಂದರಲ್ಲಿ ಇದನ್ನು ನೋಡಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್‌ ಆಗುತ್ತಿರುವ ಎಚ್ಚರಿಕೆ ಫಲಕ ಫೋಟೋದಲ್ಲಿ “ಎಚ್ಚರಿಕೆ!! ನೋ‌ ರೊಮ್ಯಾನ್ಸ್; ಇದು ಕ್ಯಾಬ್‌. ಖಾಸಗಿ ಸ್ಥಳ ಅಥವಾ ಓಯೋ ಅಲ್ಲ ಆದ್ದರಿಂದ ದಯವಿಟ್ಟು ಇಲ್ಲಿ ಅಂತರವನ್ನು ಕಾಯ್ದುಕೊಳ್ಳಿ ಮತ್ತು ಶಾಂತವಾಗಿ ವರ್ತಿಸಿ” ಎಂಬ ಬರಹವನ್ನು ಬರೆದಿರುವ ದೃಶ್ಯವನ್ನು ಕಾಣಬಹುದು.

ಮತ್ತಷ್ಟು ಓದಿ: Viral: ತಾಯಿ ಮಗನ ಈ ಹಾಡಿನ ಮೋಡಿಗೆ ಫಿದಾ ಆಗದವರೇ ಇಲ್ಲ

ಐದು ದಿನಗಳ ಹಿಂದೆ ಶೇರ್‌ ಮಾಡಲಾದ ಈ ಪೋಸ್ಟ್‌ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದರಲ್ಲಿ ತಪ್ಪೇನಿಲ್ಲʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಮೊದಲು ದೆಹಲಿ ಮೆಟ್ರೋದಲ್ಲಿ ಇಂತಹ ಎಚ್ಚರಿಕೆ ಫಲಕಗಳನ್ನು ಹಾಕಬೇಕುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದು ತುಂಬಾ ತಮಾಷೆಯಾಗಿದೆ, ಆದ್ರೂ ಈ ಕ್ಯಾಬ್‌ ಡ್ರೈವರ್‌ ಪ್ರೇಮಿಗಳ ಕಾಟದಿಂದ ಎಷ್ಟು ನೊಂದಿರಬೇಡʼ ಎಂದು ಹೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:54 pm, Sun, 23 March 25