Viral: ಬೆಂಗಳೂರು ಯುರೋಪಿಗಿಂತಲೂ ಕಾಸ್ಟ್ಲಿ ಆಯ್ತು ನೋಡಿ; ಈ 2BHK ಮನೆಯ ತಿಂಗಳ ಬಾಡಿಗೆ ಕೇಳಿದ್ರೆ ಶಾಕ್ ಆಗ್ತೀರಾ

ಮಾಯಾನಗರಿ ಬೆಂಗಳೂರು ದುಬಾರಿ ಎನ್ನುವುದು ಗೊತ್ತೇ ಇದೆ. ಇನ್ನು ಇಲ್ಲಿ ಮನೆ ಬಾಡಿಗೆಯಂತೂ ಕೇಳುವುದೇ ಬೇಡ. ದಿನ ಕಳೆದಂತೆ ಬಾಡಿಗೆ ಮನೆಗಳು ತುಂಬಾನೇ ದುಬಾರಿಯಾಗುತ್ತಿದೆ ಎನ್ನುವುದಕ್ಕೆ ಈ ಪೋಸ್ಟ್ ಸಾಕ್ಷಿಯಾಗಿದೆ. ಬೆಂಗಳೂರಿನಲ್ಲಿ ಮನೆ ಮಾಲೀಕನ ಡಿಮ್ಯಾಂಡ್ ನೋಡಿ ಶಾಕ್ ಆಗಿದ್ದಾರೆ. ಈ ಬಾಡಿಗೆ ಮನೆಯ ಮಾಸಿಕ ಬಾಡಿಗೆ 70,000 ರೂ ಹಾಗೂ 5 ಲಕ್ಷ ರೂ ಅಡ್ವಾನ್ಸ್ ಅಂತೆ. ಈ ಪೋಸ್ಟ್‌ಗೆ ನೆಟ್ಟಿಗರು ಕಾಮೆಂಟ್ ಮಾಡಿ ದುಬಾರಿ ದುನಿಯಾದಲ್ಲಿ ಬದುಕೋದು ಕಷ್ಟ ಎಂದಿದ್ದಾರೆ.

Viral: ಬೆಂಗಳೂರು ಯುರೋಪಿಗಿಂತಲೂ ಕಾಸ್ಟ್ಲಿ ಆಯ್ತು ನೋಡಿ; ಈ 2BHK ಮನೆಯ ತಿಂಗಳ ಬಾಡಿಗೆ ಕೇಳಿದ್ರೆ ಶಾಕ್ ಆಗ್ತೀರಾ
ಸಾಂದರ್ಭಿಕ ಚಿತ್ರ
Image Credit source: Pinterest
Edited By:

Updated on: Sep 01, 2025 | 7:27 PM

ಉದ್ಯಾನನಗರಿ ಬೆಂಗಳೂರು (Bengaluru) ಇಲ್ಲಿ ಸ್ವಂತ ಸೂರು ಬಿಡಿ, ಬಾಡಿಗೆ ಮನೆ ಹುಡುಕೋದು ಕಷ್ಟನೇ. ಆಫೀಸ್ ಗೆ ಹತ್ತಿರವಿದ್ದು ನಮಗೆ ಬೇಕಾದ ರೀತಿಯಲ್ಲಿ ಬಾಡಿಗೆ ಮನೆ ಸಿಗಲ್ಲ. ಮನೆ ಸಿಕ್ಕರೂ ಬಾಡಿಗೆ ಕಟ್ಟೋದಕ್ಕೆ ಅಷ್ಟು ಹಣ ಇರಲ್ಲ. ಹೀಗಾಗಿ ಸೌಕರ್ಯ ಕಡಿಮೆಯಿದ್ದರೂ ತೊಂದರೆಯಿಲ್ಲ, ಬಾಡಿಗೆ ಕಡಿಮೆಯಿರುವ ಮನೆ ಸಿಕ್ಕರೆ ಅದೇ ಅದೃಷ್ಟ. ಬೆಂಗಳೂರಿನ ಬಾಡಿಗೆ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಆಕ್ರೋಶಗಳು ವ್ಯಕ್ತವಾಗುತ್ತವೆ. ಆದರೆ ಇದೀಗ ಬೆಂಗಳೂರಿನ ಪಣತ್ತೂರು ಪ್ರದೇಶದಲ್ಲಿ 2ಬಿಹೆಚ್‌ಕೆ ಮನೆಗೆ ಮಾಸಿಕ ಬಾಡಿಗೆ 70,000 ರೂ ಹಾಗೂ 5 ಲಕ್ಷ ರೂ ಠೇವಣಿ ಎನ್ನಲಾಗಿದೆ. ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.

r/Indianrealestate ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಪೋಸ್ಟ್ ಶೇರ್ ಮಾಡಿಕೊಳ್ಳಲಾಗಿದೆ. ಆನ್‌ಲೈನ್‌ನಲ್ಲಿ ಬಾಡಿಗೆ ಮನೆ ಖಾಲಿಯಿರುವ ಬಗ್ಗೆ ಹಂಚಿಕೊಳ್ಳಲಾಗಿದ್ದು, ಆದರೆ ಇದರಲ್ಲಿ ಮನೆ ಬಾಡಿಗೆ ಹಾಗೂ ಡೆಪಾಸಿಟ್ ಹಣವನ್ನು ನೋಡಿದ್ರೆ ತಲೆ ಗಿರ್ ಎನ್ನುತ್ತೆ. ಬೆಂಗಳೂರಿನ ಪಣತ್ತೂರು ಪ್ರದೇಶದಲ್ಲಿ ಮನೆ ಮಾಲೀಕರು 2ಬಿಹೆಚ್‌ಕೆ ಮನೆಗೆ ಮಾಸಿಕ ಬಾಡಿಗೆ 70,000 ರೂ ಹಾಗೂ ಐದು ಲಕ್ಷ ರೂ ಅಡ್ವಾನ್ಸ್ ಡಿಮ್ಯಾಂಡ್ ಮಾಡುತ್ತಾರೆ. ಈ ಪೋಸ್ಟ್‌ನಲ್ಲಿ ಶಿರ್ಷಿಕೆಯಲ್ಲಿ 70 ಸಾವಿರ ರೂ ಬಾಡಿಗೆ, ಇದು ಅನೇಕ ಯುರೋಪಿಯನ್ ಅಪಾರ್ಟ್‌ಮೆಂಟ್‌ಗಳಿಗಿಂತ ಹೆಚ್ಚು. ಈ ಬಾಡಿಗೆಗಳನ್ನು ಪಾವತಿಸುವ ಜನರು ಯಾರು?.70,000 ರೂ ಬಾಡಿಗೆ ಪಾವತಿಸುವ ಬದಲು. ಆ ಹಣವನ್ನು ಇಎಂಐಯಲ್ಲಿ ಆಸ್ತಿಯನ್ನು ಖರೀದಿ ಮಾಡಬಹುದು ಎಂದು ಬರೆದುಕೊಂಡಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ಇದನ್ನೂ ಓದಿ
ಬೆಂಗಳೂರಿನ ಸ್ಕೂಲ್‌ನಲ್ಲಿ ಒಂದನೇ ತರಗತಿ ಫೀಸ್ ಬರೋಬ್ಬರಿ 7.35 ಲಕ್ಷ ರೂ
14 ವರ್ಷ ಬ್ಯಾಂಕಿಂಗ್ ಅನುಭವ, ಇಂದು ಫುಟ್‌ಪಾತ್‌ನಲ್ಲೇ ಜೀವನ
42 ವರ್ಷಗಳ ಹಿಂದೆ ಬೆಂಗಳೂರು ಹೇಗಿತ್ತು ನೋಡಿ
ಮುಕಾಬಲಾ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಬೆಂಗಳೂರಿನ ಕಾಲೇಜು ಪ್ರಾಧ್ಯಾಪಕ

ಇದನ್ನೂ ಓದಿ:Viral: ಮಕ್ಕಳಿಗೆ ಎಜುಕೇಶನ್ ಕೊಡಿಸೋದು ಕಷ್ಟ; ಬೆಂಗಳೂರಿನ ಸ್ಕೂಲ್‌ನಲ್ಲಿ ಒಂದನೇ ತರಗತಿ ಫೀಸ್ ಬರೋಬ್ಬರಿ 7.35 ಲಕ್ಷ ರೂ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರೊಬ್ಬರು, ಪ್ರವಾಹ ಪೀಡಿತ ಪ್ರದೇಶದಲ್ಲಿರುವ 2 ಬಿಹೆಚ್ ಕೆ ಮನೆಗೆ 70 ಸಾವಿರ ರೂ ಹೇಗೆ ಪಾವತಿಸಲು ಸಾಧ್ಯ. ಅಲ್ಲಿನ ರಸ್ತೆಗಳು ದುಃಸ್ವಪ್ನವಾಗಿದ್ದು, RUB ದಾಟುವುದು ಸಿಲ್ಕ್ ಬೋರ್ಡ್ ದಾಟುವುದಕ್ಕಿಂತ ಕೆಟ್ಟದಾಗಿದೆ ಎಂದಿದ್ದಾರೆ. ಮತ್ತೊಬ್ಬರು ಇಷ್ಟು ಹಣಕೊಟ್ಟು ಬಾಡಿಗೆ ಮನೆಯಲ್ಲಿ ವಾಸಿಸಲು ರೆಡಿ ಇರುವ ಜನರು ಇದ್ದಾರೆ. ಭಾರತದಲ್ಲಿ ಅಂತಹವರ ಸಂಖ್ಯೆಯೂ ದೊಡ್ಡದಿದೆ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು, ಈ ಪ್ರದೇಶದಲ್ಲಿ ಬಾಡಿಗೆ 40,000 ರೂ ರಿಂದ 45,000 ರೂವರೆಗೆ ಇದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ