Video: ಕನ್ನಡದಲ್ಲಿ ಮಾತನಾಡಿ, ಸ್ಕ್ಯಾಮ್‌ಗಳಿಂದ ಪಾರಾಗಿ; ಸೈಬರ್‌ ಕ್ರೈಮ್‌ಗಳ ಬಗ್ಗೆ ಪೊಲೀಸ್‌ ಅಧಿಕಾರಿಯ ಮಾತು

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 29, 2024 | 5:59 PM

ಸೈಬರ್‌ ಕ್ರೈಮ್‌ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ನಿಮಗೂ ಯಾರಾದ್ರೂ ಹೀಗೆ ಸ್ಕ್ಯಾಮರ್ಸ್‌ಗಳು ಕರೆ ಮಾಡಿದ್ರೆ ಹಿಂದಿ ಅಥವಾ ಇಂಗ್ಲೀಷ್‌ ಭಾಷೆಯಲ್ಲಿ ವ್ಯವಹರಿಸುವ ಬದಲು ನಮ್ಮ ಕನ್ನಡ ಭಾಷೆಯಲ್ಲಿ ಅವರೊಂದಿಗೆ ವ್ಯವಹರಿಸುವ ಮೂಲಕ ವಂಚನೆಗಳಿಂದ ಪಾರಾಗಿ ಎಂದು ಸೈಬರ್‌ ವಂಚನೆಗಳಿಂದ ಪಾರಾಗಲೂ ಪೊಲೀಸ್‌ ಅಧಿಕಾರಿಯೊಬ್ಬರು ಅದ್ಭುತವಾದ ಟಿಪ್ಸ್‌ ಕೊಟ್ಟಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದೆ.

Video: ಕನ್ನಡದಲ್ಲಿ ಮಾತನಾಡಿ, ಸ್ಕ್ಯಾಮ್‌ಗಳಿಂದ ಪಾರಾಗಿ; ಸೈಬರ್‌ ಕ್ರೈಮ್‌ಗಳ ಬಗ್ಗೆ ಪೊಲೀಸ್‌ ಅಧಿಕಾರಿಯ ಮಾತು
ವೈರಲ್​​ ವಿಡಿಯೋ
Follow us on

ತಂತ್ರಜ್ಞಾನ ಬೆಳೆದಂತೆ ಸೈಬರ್‌ ಸ್ಕ್ಯಾಮ್‌ಗಳು ಕೂಡಾ ಹೆಚ್ಚುತ್ತಿವೆ. ಕೆಲಸ ಕೊಡಿಸುವುದಾಗಿ, ಬ್ಯಾಂಕ್‌ನಿಂದ ಕರೆ ಮಾಡಿರುವುದಾಗಿ, ಆಧಾರ್‌ ಕಾರ್ಡ್‌ ಅಪ್‌ಡೇಟ್‌ ಮಾಡಿಕೊಡುವುದಾಗಿ ಹಾಗೂ ಹಣ ಡಬಲ್‌ ಮಾಡುವ ನೆಪ ಹೇಳಿ ವಂಚಕರು ಯಾರ್ಯಾರಿಗೋ ಕರೆ ಮಾಡಿ, ಅಮಾಯಕರಿಂದ ಹಣ ದೋಚುತ್ತಿದ್ದಾರೆ. ಹೌದು ಈ ಸ್ಕ್ಯಾಮರ್ಸ್‌ ಎಂ.ಎನ್.ಸಿ ಕಂಪೆನಿಗಳ ಹೆಚ್.ಆರ್‌, ಬ್ಯಾಂಕ್‌ ಮ್ಯಾನೇಜರ್‌ ಸೋಗಿನಲ್ಲಿ ಕರೆ ಮಾಡಿ ಓಟಿಪಿ ಪಡೆದು ಅದೆಷ್ಟೋ ಜನರಿಗೆ ಪಂಗನಾಮ ಹಾಕಿದ್ದಾರೆ. ಹೀಗೆ ಕರೆ ಫೋನ್‌ ಕರೆ ಮಾಡುವ ಇವರುಗಳು ಒಂದಾ ಹಿಂದಿ ಭಾಷೆಯಲ್ಲಿ ಅಥವಾ ಇಂಗ್ಲೀಷ್‌ ಭಾಷೆಯಲ್ಲಿ ಮಾತ್ರ ವ್ಯವಹರಿಸುತ್ತಾರೆ. ಒಂದು ವೇಳೆ ಸ್ಕ್ಯಾಮರ್ಸ್‌ ನಿಮಗೂ ಕರೆ ಮಾಡಿದ್ರೆ, ಅವರೊಂದಿಗೆ ಹಿಂದಿ, ಇಂಗ್ಲೀಷ್‌ ಮಾತನಾಡುವ ಬದಲು ನಮ್ಮ ಕನ್ನಡದಲ್ಲಿಯೇ ಮಾತನಾಡಿ, ಇದರಿಂದ ಸುಲಭವಾಗಿ ವಂಚನೆಗಳಿಂದ ಪಾರಾಗಬಹುದು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಅದ್ಭುತವಾದ ಟಿಪ್ಸ್‌ ಕೊಟ್ಟಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದೆ.

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದ ಸೈಬರ್‌ ಕ್ರೈಮ್‌ ಜಾಗೃತಿ ಕಾರ್ಯಕ್ರಮದ ವೇಳೆ ಇಲ್ಲಿನ ಪೊಲೀಸ್‌ ಅಧಿಕಾರಿಯೊಬ್ಬರು ಕನ್ನಡ ಭಾಷೆ ಬಾರದಿರುವ ಸ್ಕ್ಯಾಮರ್ಸ್‌ಗಳೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸುವ ಮೂಲಕ ವಂಚನೆಗಳಿಂದ ಪಾರಾಗಬಹುದು ಎಂಬುದನ್ನು ಹೇಳಿದ್ದಾರೆ. ಈ ಕುರಿತ ಪೋಸ್ಟ್‌ ಒಂದನ್ನು ಕನ್ನಡಿಗ ದೇವರಾಜ್‌ (sgowda79) ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್‌ ವಿಡಿಯೋದಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರು ಸೈಬರ್‌ ಕ್ರೈ ಬಗ್ಗೆ ಜನರಿಗೆ ಜಾಗೃತಿ ಮೂಡಿಸುತ್ತಿರುವ ದೃಶ್ಯವನ್ನು ಕಾಣಬಹುದು. ಇತ್ತೀಚಿನ ದಿನಗಳಲ್ಲಿ ಡ್ರಗ್ಸ್‌ಗಳಿಗಿಂತ ಜಾಸ್ತಿ ಸೈಬರ್‌ ಕ್ರೈಂಗಳೇ ಹೆಚ್ಚಾಗಿದೆ. ಹೀಗಿರುವಾಗ ನಿಮಗೂ ಯಾರಾದ್ರೂ ಸ್ಕ್ಯಾಮರ್ಸ್‌ ಕರೆ ಮಾಡಿದ್ರೆ ಅವರೊಂದಿಗೆ ದಯವಿಟ್ಟು ಕನ್ನಡದಲ್ಲಿಯೇ ಮಾತನಾಡಿ, ಆಗ ನೀವು ಖಂಡಿತವಾಗಿ ವಂಚನೆಗಳಿಂದ ಪಾರಾಗುತ್ತೀರಿ. ಕನ್ನಡದವರು ಈ ರೀತಿಯಾಗಿ ನಿಮಗೆ ವಂಚನೆಯ ಕರೆ ಮಾಡಲ್ಲ. ನಾರ್ತ್‌ ಇಂಡಿಯಾದವರು ಹಿಂದಿ ಅಥವಾ ಇಂಗ್ಲೀಷ್‌ನಲ್ಲಿ ಕರೆ ಮಾಡಿ ವಂಚನೆ ಮಾಡುತ್ತಾರೆ, ಆ ಸಂದರ್ಭದಲ್ಲಿ ನೀವು ಅವರೊಂದಿಗೆ ಇಂಗ್ಲೀಷ್‌ ಬದಲು ಕನ್ನಡದಲ್ಲಿ ಮಾತನಾಡಿ, ಆಗ ಅವ್ರೇ ಫೋನ್‌ ಕಟ್‌ ಮಾಡ್ತಾರೆ, ಇದ್ರಿಂದ ನೀವು ವಂಚನೆಗಳಿಂದ ತಪ್ಪಿಸಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಗಂಡನಿಗೆ ತಾನೇ ಮುಂದೆ ನಿಂತು ಅದ್ಧೂರಿಯಾಗಿ ಮದುವೆ ಮಾಡಿಸಿದ ಹೆಂಡತಿ; ಕಾರಣ ಕೇಳಿದ್ರೆ ದಂಗಾಗೋದು ಗ್ಯಾರಂಟಿ

ಆಗಸ್ಟ್‌ 28 ರಂದು ಹಂಚಿಕೊಳ್ಳಲಾದ ಈ ವಿಡಿಯೋ 31 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಹೌದು ಇದು ಒಳ್ಳೆಯ ಉಪಾಯ; ಎಂದು ಹೇಳಿದ್ದಾರೆ. ಇನ್ನೂ ಅನೇಕರ ಇವರ ಪ್ರಬುದ್ಧ ಮಾತಿಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೈರಲ್​​ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ