
ಬೆಂಗಳೂರು, ಸೆಪ್ಟೆಂಬರ್ 15: ಬೆಂಗಳೂರಿನಲ್ಲಿ (Bengaluru) ರಸ್ತೆಯ ತುಂಬಾ ಗುಂಡಿಗಳು ಒಂದೆಡೆಯಾದ್ರೆ, ಟ್ರಾಫಿಕ್ ಜಾಮ್ ಸಮಸ್ಯೆ ಮತ್ತೊಂದೆಡೆ. ಈ ಎರಡರಿಂದಲೂ ಇಲ್ಲಿನ ಜನರು ಬೇಸೆತ್ತು ಹೋಗಿದ್ದಾರೆ. ಇತ್ತ ಕೆಲವರು ಇದಕ್ಕೆ ಹೊಂದಿಕೊಂಡು ಹೋಗುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ಹೀಗಿರುವಾಗ ಶಾಲೆಗೆ ಹೋಗುವ ವಿದ್ಯಾರ್ಥಿನಿಯರು (students) ಈ ರಸ್ತೆ ಗುಂಡಿಗಳು ಹಾಗೂ ಟ್ರಾಫಿಕ್ ಸಮಸ್ಯೆಯಿಂದ ನಮ್ಮ ಸಮಯವೇ ವ್ಯರ್ಥವಾಗುತ್ತಿದೆ ಎಂದು ವಿವರಿಸಿದ್ದಾರೆ. ಇಂತಹ ಅವ್ಯವಸ್ಥೆಯಿಂದ ತಮಗಾಗುತ್ತಿರುವ ತೊಂದರೆಗಳ ಬಗ್ಗೆ ಹೇಳಿಕೊಂಡಿದ್ದಾರೆ. ಈ ವಿಡಿಯೋಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡುತ್ತಿದ್ದು ಅಭಿವೃದ್ಧಿ ಎಂದರೆ ಇದೇನಾ ಎಂದು ಪ್ರಶ್ನೆ ಮಾಡಿದ್ದಾರೆ.
@total-woke ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಮೂವರು ಶಾಲಾ ವಿದ್ಯಾರ್ಥಿನಿಯರು ತಾವು ಆನಿಯಾ, ನಾದಿಯಾ, ಮೆಹೇನ್ ಎಂದು ಹೆಸರು ಹೇಳಿಕೊಂಡು ತಾವು ತಮ್ಮ ಹೆಚ್ಚಿನ ಸಮಯವನ್ನು ಈ ಬಸ್ಸಿನಲ್ಲಿ ಕಳೆಯುತ್ತೇವೆ ಎನ್ನುತ್ತಾ ತಮ್ಮ ಸಮಸ್ಯೆಯೇನು ಎನ್ನುವುದನ್ನು ಇಂಚಿಂಚಾಗಿ ವಿವರಿಸುವುದನ್ನು ಕಾಣಬಹುದು. ಇಲ್ಲಿ ವಿದ್ಯಾರ್ಥಿನಿಯರು ನಾವು ದಿನದ ಹೆಚ್ಚಿನ ಸಮಯವನ್ನು ರಸ್ತೆಯಲ್ಲೇ ಕಳೆಯುತ್ತೇವೆ. ನಾವು ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳುತ್ತೇವೆ. ನಾವು ಶಾಲೆಗೆ ಸುಮಾರು 14 ಕಿಲೋಮೀಟರ್ ದೂರದಲ್ಲಿ ವಾಸಿಸುತ್ತಿದ್ದೇವೆ ಎಂದು ವಿದ್ಯಾರ್ಥಿನಿಯೊಬ್ಬಳು ಹೇಳುವುದನ್ನು ನೀವಿಲ್ಲಿ ನೋಡಬಹುದು.
These school girls exposed the state of Bengaluru roads. But don’t worry if we just rename Bengaluru to Saint Mary City, the roads will heal ❤️ pic.twitter.com/p9RNvCxZe5
— Eminent Intellectual (@total_woke_) September 13, 2025
ಹೀಗೆನ್ನುತ್ತಿದ್ದಂತೆ ಬಸ್ ಗುಂಡಿಗೆ ಸಿಲುಕಿ ಅಲುಗಾಡುತ್ತದೆ. ಆದ್ರೆ ಫೋನ್ ಕ್ಯಾಮೆರಾ ತೀವ್ರವಾಗಿ ಅಲ್ಲಾಡುತ್ತಿದ್ದಂತೆ ವಿದ್ಯಾರ್ಥಿನಿಯೂ ನಾನು ನಟನೆ ಮಾಡುತ್ತಿಲ್ಲ. ಸುಳ್ಳಂತೂ ಹೇಳುತ್ತಿಲ್ಲ. ಇದು ಬೆಂಗಳೂರಿನ ರಸ್ತೆಸ್ಥಿತಿ. ಪ್ರತಿದಿನ ಶಾಲೆಗೆ ತಲುಪಲು 20 ನಿಮಿಷಗಳು ಬೇಕಾಗುತ್ತವೆ. ಆದರೆ ಸಂಜೆಯ ವೇಳೆ ಅದಕ್ಕೆ ವ್ಯತಿರಿಕ್ತವಾದ ಪರಿಸ್ಥಿತಿ ಇರುತ್ತದೆ. ಸಂಜೆ ಮನೆಗೆ ತಲುಪಲು ಒಂದೂವರೆ ಗಂಟೆಯಿಂದ ಎರಡೂವರೆ ಗಂಟೆ ಸಮಯ ಬೇಕಾಗುತ್ತದೆ ಎಂದು ವಾಸ್ತವ ಸ್ಥಿತಿಯನ್ನು ವಿವರಿಸಿದ್ದಾರೆ.
ಮೊದಲೆಲ್ಲಾ ನಾವು ಸಂಜೆ 3:15ಕ್ಕೆ ಮನೆಯಲ್ಲಿ ಇರುತ್ತಿದ್ದೆವು. ಆದರೆ ಈಗ ಆಗಲ್ಲ, ಸಂಜೆ 4:40ಕ್ಕೆ ನಾವು ಮನೆಯಲ್ಲಿ ಇರುತ್ತೇವೆ. ಇದರಿಂದ ನಮಗೆ ಆಟ ಆಡಲು ಆಗುತ್ತಿಲ್ಲ, ಓದಲು ಕಡಿಮೆ ಸಮಯ ಸಿಗುತ್ತಿದೆ. ದೈಹಿಕವಾಗಿ ಆಟ ಆಡಲು ಸಮಯ ಸಿಗದ ಕಾರಣ ಆಯಾಸ, ಒತ್ತಡವನ್ನು ಎದುರಿಸಬೇಕಾಗಿದೆ..ಇನ್ನು ಗುಂಡಿಗಳ ಬಗ್ಗೆ ಕೇಳಬೇಕೇ. ಮನೆಗೆ ತಲುಪುವಾಗ ಎದುರಾಗುವ ಅಲ್ಲಲ್ಲಿ ಗುಂಡಿಗಳಿಂದ ಬಸ್ ಕುಲುಕುತ್ತದೆ. ಇದರಿಂದ ತಲೆಗೆ ಪೆಟ್ಟು ಬೀಳುತ್ತದೆ. ಸಡನ್ ಬ್ರೇಕ್ ಹಾಕಿದಾಗ ಮುಂದೆ ಬೀಳುತ್ತೇವೆ. ಈ ಪರಿಸ್ಥಿತಿ ಬದಲಾಗಬೇಕು, ಸರ್ಕಾರ ನಮಗೆ ಸಹಾಯ ಮಾಡಿ ಬದಲಾವಣೆ ತರಬೇಕು ಎಂದಿದ್ದಾರೆ.
ಇದನ್ನೂ ಓದಿ:Video: ಇದು ಗ್ರ್ಯಾಂಡ್ ಥೆಫ್ಟ್ ಆಟೋರಿಕ್ಷಾ; ಬೆಂಗಳೂರಿನ ಗುಂಡಿಗಳನ್ನು AI ರೇಸಿಂಗ್ ಆಟವನ್ನಾಗಿ ಪರಿವರ್ತಿಸಿದ ಟೆಕ್ಕಿ
ಈ ಸೆಪ್ಟೆಂಬರ್ 13 ರಂದು ಶೇರ್ ಮಾಡಿಕೊಳ್ಳಲಾದ ಈ ವಿಡಿಯೋ 1 ಮಿಲಿಯನ್ ಗೂ ಅಧಿಕ ವೀಕ್ಷಣೆ ಕಂಡಿದ್ದು, ಬಳಕದಾರರು ಸರ್ಕಾರ ಹಾಗೂ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳಿ ಎಂದು ಹೇಳಿದ್ದಾರೆ. ಈ ಶಾಲಾ ವಿದ್ಯಾರ್ಥಿನಿಯರಿಗೆ ನನ್ನದೊಂದು ಚಪ್ಪಾಳೆಯಿರಲಿ, ಅನೇಕರು ನಿರ್ಲಕ್ಷಿಸುವ ಸತ್ಯವನ್ನು ಇವರು ಮಾತನಾಡಿದರು. ಬೆಂಗಳೂರಿಗೆ ಹೊಸ ಹೆಸರುಗಳಲ್ಲ. ಉತ್ತಮ ರಸ್ತೆಗಳು ಬೇಕಾಗಿವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಈ ವಿದ್ಯಾರ್ಥಿನಿಯರು ಬುದ್ಧಿವಂತರು, ಇವರು ಭಾರತವನ್ನು ಬಿಟ್ಟು ಹೋಗುವುದು ಒಳ್ಳೆಯದು. ಏಕೆಂದರೆ ಮಾತನಾಡುವ ಪ್ರಜ್ಞೆ ಹಾಗೂ ಬುದ್ಧಿವಂತಿಕೆಗೆ ಇಲ್ಲಿ ಬೆಲೆ ಇಲ್ಲ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ