Viral: ನೆಲಮಂಗಲ ರಸ್ತೆ ಅಪಘಾತಕ್ಕೂ, ನಂಬರ್‌ 6ಗೂ ಏನು ಲಿಂಕ್‌?

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 25, 2024 | 5:00 PM

ಈ ಹಿಂದೊಮ್ಮೆ ನಂಬರ್‌ 6 ರಿಂದ ಕೊನೆಗೊಳ್ಳುವ ನಂಬರ್‌ ಪ್ಲೇಟ್‌ ಹೊಂದಿರುವ ವಾಹನಗಳೇ ಹೆಚ್ಚು ಅಪಘಾತಕ್ಕೆ ಈಡಾಗುತ್ತಿವೆ ಎಂಬ ಭಯ ನೆಲಮಂಗಲ ಜನತೆಯನ್ನು ಕಾಡಿತ್ತು. ಕಾಕತಾಳೀಯವೆಂಬಂತೆ ಆ ಸಮಯದಲ್ಲಿ ಸಂಖ್ಯೆ ಆರರಿಂದ ಕೊನೆಗೊಳ್ಳುವ ನಂಬರ್‌ ಪ್ಲೇಟ್‌ ಹೊಂದಿರುವ ವಾಹನಗಳೇ ಹೆಚ್ಚು ಅಪಘಾತಕ್ಕೆ ಈಡಾಗಿದ್ದವು. ಮೊನ್ನೆಯಷ್ಟೆ ನೆಲಮಂಗಲದಲ್ಲಿ ಭೀಕರ ಅಪಘಾತವವೊಂದು ಸಂಭವಿಸಿದ್ದು, ಆ ಬಳಿಕ ಮತ್ತೊಮ್ಮೆ ನಂಬರ್‌ 6 ರ ಭೂತ ಜನರನ್ನು ಕಾಡಿದೆ. ಅಷ್ಟಕ್ಕೂ ನೆಲಮಂಗಲ ರಸ್ತೆ ಅಪಘಾತಕ್ಕೂ ನಂಬರ್‌ 6 ಗೂ ಏನು ಲಿಂಕ್‌ ಎಂಬುದನ್ನು ನೋಡೋಣ.

Viral: ನೆಲಮಂಗಲ ರಸ್ತೆ ಅಪಘಾತಕ್ಕೂ, ನಂಬರ್‌ 6ಗೂ ಏನು ಲಿಂಕ್‌?
ನೆಲಮಂಗಲ ಕಾರು ಅಪಘಾತ
Follow us on

ಶನಿವಾರ ಡಿಸೆಂಬರ್‌ 21 ರಂದು ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿ ಒಂದೇ ಕುಟುಂಬದ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿತ್ತು. ವೋಲ್ವೋ ಕಾರಿನ ಮೇಲೆ ಭಾರಿ ಭಾರದ ಕಂಟೇನರ್‌ ಲಾರಿ ಬಿದ್ದು ಸಾಫ್ಟ್‌ವೇರ್‌ ಕಂಪೆನಿ ಮಾಲೀಕ ಚಂದ್ರಮ್‌ ಯೇಗಪ್ಪಗೋಳ ಸೇರಿದಂತೆ ಅವರ ಕುಟುಂಬದ ಆರು ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಈ ಭೀಕರ ಅಪಘಾತದ ಸುದ್ದಿ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಈ ಅಪಘಾತದ ಬಳಿಕ ನೆಲಮಂಗಲ ಜನರಲ್ಲಿ ಮತ್ತೊಮ್ಮೆ ನಂಬರ್‌ 6 ರ ಭೂತ ಕಾಡಲಾರಂಭಿಸಿದೆ. ಅಷ್ಟಕ್ಕೂ ನೆಲಮಂಗಲ ರಸ್ತೆ ಅಪಘಾತಕ್ಕೂ ನಂಬರ್‌ 6 ಗೂ ಏನು ಲಿಂಕ್‌ ಎಂಬುದನ್ನು ನೋಡೋಣ.

ಈ ಹಿಂದೊಮ್ಮೆ ನಂಬರ್‌ 6 ರಿಂದ ಕೊನೆಗೊಳ್ಳುವ ನಂಬರ್‌ ಪ್ಲೇಟ್‌ ಹೊಂದಿರುವ ವಾಹನಗಳು ಹೆಚ್ಚು ಅಪಘಾತಕ್ಕೆ ಈಡಾಗುತ್ತವೆ ಎಂಬ ಭಯ ನೆಲಮಂಗಲ ಜನತೆಯನ್ನು ಕಾಡಿತ್ತು. ಕಾಕತಾಳೀಯವೆಂಬಂತೆ ಆ ಸಮಯದಲ್ಲಿ ಆರರಿಂದ ಕೊನೆಗೊಳ್ಳುವ ನಂಬರ್‌ ಪ್ಲೇಟ್‌ ಹೊಂದಿರುವ ವಾಹನಗಳೇ ಹೆಚ್ಚು ಅಪಘಾತಕ್ಕೆ ಈಡಾಗಿದ್ದವು. ಆರು ವರ್ಷಗಳ ಹಿಂದೆ ಟಿವಿ9 ನಲ್ಲೂ ಈ ಬಗ್ಗೆ ವರದಿ ಪ್ರಸಾರವಾಗಿತ್ತು. ಮೊನ್ನೆ ನೆಲಮಂಗಲದಲ್ಲಿ ನಡೆದ ಭೀಕರ ಅಪಘಾತದ ಬಳಿಕ ಮತ್ತೊಮ್ಮೆ ಜನರಲ್ಲಿ ನಂಬರ್‌ 6 ರ ಭೂತ ಕಾಡಲಾರಂಭಿಸಿದೆ. ಹೌದು ಅಪಘಾತಕ್ಕೆ ಈಡಾದ ಚಂದ್ರಮ್‌ ಯೇಗಪ್ಪಗೋಳ ಅವರ ವೋಲ್ವೋ ಕಾರಿನ ನಂಬರ್‌ ಪ್ಲೇಟ್‌ ಸಂಖ್ಯೆ KA 01ND1536 ಆಗಿದ್ರೆ ಟ್ರಕ್‌ನ ನಂಬರ್‌ ಪ್ಲೇಟ್‌ ಸಂಖ್ಯೆ KA52B3076. ಅಪಘಾತಕ್ಕೆ ಈಡಾದ ಈ ಎರಡೂ ವಾಹನಗಳ ಕೊನೆಯ ಸಂಖ್ಯೆ ʼ6ʼ ಆಗಿದ್ದು, ಈ ಸಂಖ್ಯೆಯ ಕಾರಣದಿಂದಲೇ ಅಪಘಾತ ಸಂಭವಿಸಿರಬಹುದೇ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.

ಕಾಕತಾಳೀಯವೆಂಬಂತೆ ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ನಂಬರ್‌ ಪ್ಲೇಟ್‌ ಕೊನೆಯಲ್ಲಿ ನಂಬರ್ 6 ಅನ್ನು ಹೊಂದಿರುವ ವಾಹನಗಳೇ ಹೆಚ್ಚಾಗಿ ಅಘಾತಕ್ಕೆ ಈಡಾಗಿವೆ. ಹೌದು ಈ ಹಿಂದೆ KA 51 Q 5156, KA 44 J 5086, KA 51 D 1786, KA 18 A 9426, KA 04 C 9626, KA 54 1676, KA 44 K 1706, KA 42 H 6326 ಹೀಗೆ ನಂಬರ್‌ ಆರರಲ್ಲಿ ಕೊನೆಗೊಳ್ಳುವ ವಾಹನಗಳು ಅಪಘಾತಕ್ಕೆ ತುತ್ತಾಗಿದ್ದವು. ಇದನ್ನೆಲ್ಲಾ ಕಂಡು ʼನಂಬರ್‌ 6ʼ ರ ಪರಿಣಾಮದಿಂದಲೇ ಇಷ್ಟೆಲ್ಲಾ ಅಪಘಾತಗಳು ಸಂಭವಿಸುತ್ತಿವೆ ಎಂದು ಜನರಲ್ಲಿ ಭಯ ಆವರಿಸಿದೆ. ಇದಕ್ಕೆ ಪುಷ್ಟಿಕೊಡುವಂತೆ ಮೊನ್ನೆ ಅಪಘಾತಕ್ಕೆ ಈಡಾದ ವಾಹನಗಳ ಕೊನೆಯ ಸಂಖ್ಯೆಯೂ 6 ಆಗಿತ್ತು. ಇದರಿಂದ ಜನರಲ್ಲಿ ಇದೀಗ ನಂಬರ್‌ ಆರು ಮತ್ತಷ್ಟು ಭಯ ಮೂಡಿಸಿದೆ.

ಇದನ್ನೂ ಓದಿ: ಬೆಂಗಳೂರು: ಏಕಾಏಕಿ ಕಾರಿನ ಮೇಲೆ ಲಾರಿ ಪಲ್ಟಿ: 6 ಜನ ಅಪ್ಪಚ್ಚಿ!

ಇನ್ನೂ ಸಂಖ್ಯಾಶಾಸ್ತ್ರದ ಪ್ರಕಾರ ನಂಬರ್‌ 6 ಶುಕ್ರನ ಪ್ರತೀಕ. ಸಂಖ್ಯೆ 6 ಕೆಲವೊಂದಿಷ್ಟು ಸಂಖ್ಯೆಗಳ ಜೊತೆ ಸೇರಿಕೊಂಡಾಗ ಋಣಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇರುತ್ತವೆ. ಇದರಿಂದಲೂ ಸಂಖ್ಯೆ 6 ರಿಂದ ಕೊನೆಗೊಳ್ಳುವ ನಂಬರ್‌ ಪ್ಲೇಟ್‌ ಹೊಂದಿರುವ ವಾಹನಗಳು ಅಪಘಾತಕ್ಕೆ ತುತ್ತಾಗಿರುವ ಸಾಧ್ಯತೆ ಇವೆ. ಆದರೆ ಇದು ಕಾಕತಾಳೀಯವೂ ಆಗಿರಬಹುದು ಎಂದು ಸಂಖ್ಯಾಶಾಸ್ತ್ರಜ್ಞರು ಹೇಳುತ್ತಾರೆ. ಆದ್ರೆ ಜನ ಮಾತ್ರ ಇದೆಲ್ಲಾ ನಂಬರ್‌ 6 ರ ಕಾರಣದಿಂದಲೇ ನಡೆಯುತ್ತಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಇದು ಎಷ್ಟು ನಿಜ ಎಷ್ಟು ಸುಳ್ಳು ಎಂಬುದು ಗೊತ್ತಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ