Video: ಎಚ್ಎಸ್ಆರ್ ಲೇಔಟ್‌ನ 1BHK ನಲ್ಲಿ ವಾಸಿಸುವ ಮಹಿಳೆಯ ತಿಂಗಳ ಖರ್ಚು ಎಷ್ಟು ಗೊತ್ತಾ?

ಬೆಂಗಳೂರು ನಗರದಲ್ಲಿ ಜೀವನ ವೆಚ್ಚ ಎಷ್ಟು ದುಬಾರಿ ಆಗಿದೆ ಎಂಬುದಕ್ಕೆ ಈ ಪೋಸ್ಟ್ ನೈಜ ಉದಾಹರಣೆಯಾಗಿದೆ. ಬೆಂಗಳೂರಿನ ನಿವಾಸಿಯೊಬ್ಬರು ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ 1 ಬಿಎಚ್‌ಕೆ ಅಪಾರ್ಟ್‌ಮೆಂಟ್‌ ಗೆ 36000 ರೂ ಪಾವತಿಸುತ್ತಿದ್ದಾರೆ. ಈ ಮಹಿಳೆ ತನ್ನ ಮಾಸಿಕ ವೆಚ್ಚಗಳ ಮಾಹಿತಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ದೊಡ್ಡ ಚರ್ಚೆ ನಾಂದಿ ಹಾಡಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಎಚ್ಎಸ್ಆರ್ ಲೇಔಟ್‌ನ 1BHK ನಲ್ಲಿ ವಾಸಿಸುವ ಮಹಿಳೆಯ ತಿಂಗಳ ಖರ್ಚು ಎಷ್ಟು ಗೊತ್ತಾ?
ಸಾಂದರ್ಭಿಕ ಚಿತ್ರ
Image Credit source: Pinterest

Updated on: Jun 17, 2026 | 1:33 PM

ಬೆಂಗಳೂರು, ಜೂನ್ 17: ಬೆಂಗಳೂರು (Bengaluru) ಯುವಕ ಯುವತಿಯರಿಗೆ ಕನಸಿನಲೋಕ. ಗುಣಮಟ್ಟದ ಜೀವನ, ಹೆಚ್ಚು ಸಂಬಳ ಸಿಗುವ ಕೆಲಸವೇ ಬೇಕೆಂದು ಓದು ಮುಗಿಯುತ್ತಿದ್ದಂತೆ ಹಳ್ಳಿ ಬಿಟ್ಟು ಬೆಂಗಳೂರಿಗೆ ಬರ್ತಾರೆ. ಆದರೆ ಈ ಸಿಲಿಕಾನ್ ಸಿಟಿಯಲ್ಲಿ ಬೆಂಗಳೂರಿನಲ್ಲಿ ದುಬಾರಿ ಬಾಡಿಗೆ, ದುಪ್ಪಟ್ಟಾದ ಜೀವನ ವೆಚ್ಚಗಳೇ ಹೆಚ್ಚಾಗಿದೆ. ಎಚ್‌ಎಸ್‌ಆರ್ ಲೇಔಟ್‌ನ (HSR Layout) 1ಬಿಹೆಚ್ ಕೆ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿರುವ ಮಹಿಳೆಯೊಬ್ಬರು ತಮ್ಮ ಮಾಸಿಕ ವೆಚ್ಚವನ್ನು ಬಹಿರಂಗಪಡಿಸಿದ್ದಾರೆ. ಈ ಪೋಸ್ಟ್ ಚರ್ಚೆಗೆ ಕಾರಣವಾಗಿದ್ದು ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.

ಶ್ರುತಿ (Shruti) ಎಂಬ ಮಹಿಳೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಶ್ರುತಿ ತನ್ನ ಜೀವನಶೈಲಿಯ ಬಗ್ಗೆ ಹೆಚ್ಚಾಗಿ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ನಾನು ಶ್ರುತಿ,  ನನ್ನ ತಿಂಗಳ ಮನೆ ಬಾಡಿಗೆ ಎಷ್ಟು ಮತ್ತು ನಾನು ಎಲ್ಲಿ ವಾಸಿಸುತ್ತಿರುವುದು?  ನನಗೆ ಈ ಎರಡು ಪ್ರಶ್ನೆಗಳೊಂದಿಗೆ 24/7 ಡಿಎಂಗಳು ಬರುತ್ತವೆ: ಎಂದು ಕ್ಲಿಪ್ ನಲ್ಲಿ ಹೇಳಿದ್ದಾರೆ. ನಾನು ಎಚ್‌ಎಸ್‌ಆರ್‌ನಲ್ಲಿ ವಾಸಿಸುತ್ತಿದ್ದೇನೆ. ನನ್ನ ಮನೆ ಬಾಡಿಗೆ 36,000 ರೂ. ಹೌದು, ನನ್ನ ಬಳಿ ಈ ಫ್ಲಾಟ್‌ನಲ್ಲಿ ಇರುವಷ್ಟು ಹಣವಿದೆ ಎಂದು ಬಹಿರಂಗ ಪಡಿಸಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಈ ವಿಡಿಯೋದ ಶೀರ್ಷಿಕೆಯಲ್ಲಿ, ಎಚ್ ಎಸ್ ಆರ್ ಲೇಔಟ್‌ನಲ್ಲಿರುವ 1BHK ಅಪಾರ್ಟ್‌ಮೆಂಟ್‌ನ ಮಾಸಿಕ ಬಾಡಿಗೆ 36,000 ರೂ, ಬಾಡಿಗೆ ಉಪಕರಣಗಳ ಬೆಲೆ ಸುಮಾರು 5,000 ರೂ, ವಿದ್ಯುತ್ ಮತ್ತು ಗೃಹ ಸಹಾಯ ಸೇವೆಗಳಿಗಾಗಿ ತಾನು ಸುಮಾರು 4,000 ರೂ ಖರ್ಚು ಮಾಡುತ್ತೇನೆ. ತನ್ನ ದಿನಸಿ ಹಾಗೂ ಆಹಾರ ವಿತರಣಾ ವೆಚ್ಚಗಳು ತಿಂಗಳಿಗೆ 7,000 ರಿಂದ 8,000 ರೂ ರವರೆಗೆ ಇರುತ್ತವೆ. ನಾನು ನನ್ನ ಹೆಚ್ಚಿನ ಊಟವನ್ನು ನಾನೇ ತಯಾರಿಸುತ್ತೇನೆ ಹಾಗೂ ಸ್ವಚ್ಛವಾಗಿ ತಿನ್ನಲು ಪ್ರಯತ್ನಿಸುತ್ತೇನೆ ಎಂದು ಬರೆದಿದ್ದಾರೆ.

ಸಾರಿಗೆ ವೆಚ್ಚವು ತಿಂಗಳಿಗೆ 4,000-5,000 ರೂ ತಗಲುತ್ತದೆ. ಪೈಲೇಟ್ಸ್, ಜಿಮ್ ಸದಸ್ಯತ್ವಗಳು ಮತ್ತು ಫಿಟ್‌ನೆಸ್ ತರಗತಿಗಳ ವೆಚ್ಚವು 5,000 ರೂ ಆಗುತ್ತದೆ. ಶಾಪಿಂಗ್ ಮತ್ತು ಇಂಪಲ್ಸ್ ಖರೀದಿಗಳಿಗೆ ಸಂಬಂಧಿಸಿದಂತೆ ನಾವು ಈ ವೆಚ್ಚಗಳ ಬಗ್ಗೆ ಚರ್ಚಿಸುವುದಿಲ್ಲ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ವಯಸ್ಕರಾಗುವುದು ಖುಷಿ ನೀಡುತ್ತದೆ. ನನ್ನ ಬ್ಯಾಂಕ್ ಖಾತೆ ಒಪ್ಪದೇ ಇರಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶಾಪಿಂಗ್ – ಸುತ್ತಾಟಕ್ಕೆ 1.1 ಲಕ್ಷ ರೂ; ತಿಂಗಳ ಖರ್ಚು ವೆಚ್ಚದ ಬಗ್ಗೆ ರಿವೀಲ್ ಮಾಡಿದ ಬೆಂಗಳೂರಿನ ಮಹಿಳೆ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ.. ಒಬ್ಬ ಬಳಕೆದಾರ, ದುಬಾರಿ ಜೀವನಶೈಲಿ ಬದಲಾಯಿಸಿಕೊಂಡರೆ ಖರ್ಚು ಕಡಿಮೆಯಾಗುತ್ತದೆ ಎಂದಿದ್ದಾರೆ. ಇನ್ನೊಬ್ಬರು, ನಾನು ಮಾತ್ರ ಈ ಎಲ್ಲಾ ಸೌಕರ್ಯಕ್ಕಾಗಿ ಹಣವನ್ನು ಖರ್ಚು ಮಾಡುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು, ನಾನು HSR ನಲ್ಲಿ ಇರುವೆ. ಇದರ ಬಾಡಿಗೆ 36 ಸಾವಿರ ರೂ ಇದೆ, ಆದರೆ ಈ ಫ್ಲಾಟ್ ಗಾತ್ರ ಚಿಕ್ಕದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us