ಭಾರತದಲ್ಲಿ ಬಹುಪತ್ನಿತ್ವಕ್ಕೆ ನಿಷೇಧವಿದ್ದರೂ, ಮೊದಲ ಪತ್ನಿ/ಪತಿಗೆ ಡಿವೋರ್ಸ್ ಕೊಡುವ ಮುಂಚೆ ಮತ್ತೊಂದು ಮದುವೆಯಾಗುವಂತಿಲ್ಲ ಎಂಬ ಕಾನೂನು ಇದ್ದರೂ ಕೆಲವರು ಗುಟ್ಟಾಗಿ ಎರಡು, ಮೂರು ಮದುವೆಯಾಗುವವರು ಇದ್ದಾರೆ. ಇದೇ ರೀತಿ ಇಲ್ಲೊಬ್ಬ ಆಸಾಮಿ ಕೂಡಾ ತನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡುವ ಮುಂಚೆಯೇ ಇನ್ನೊಂದು ಮದುವೆಯಾಗಲು ಹೊರಟಿದ್ದು, ಈ ವಿಷಯ ತಿಳಿದು ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟ ಆತನ ಮೊದಲ ಪತ್ನಿ ಹೈ ಡ್ರಾಮ ಸೃಷ್ಟಿಸಿ ಮದುವೆಯನ್ನು ನಿಲ್ಲಿಸಿದ್ದಾಳೆ. ಈ ಸುದ್ದಿ ಇದೀಗ ಸಖತ್ ವೈರಲ್ ಆಗುತ್ತಿದೆ.
ಬಿಹಾರದ ಭಾಗಲ್ಪುರದಲ್ಲಿ ಈ ಘಟನೆ ನಡೆದಿದ್ದು, ವಿವಾಹಿತ ಪುರುಷನೊಬ್ಬ ವಿಚ್ಛೇದನ ನೀಡುವ ಮೊದಲೇ ಗುಟ್ಟಾಗಿ ಎರಡನೇ ಮದುವೆಯಾಗಲು ಹೋಗಿ ಮೊದಲ ಪತ್ನಿಯ ಕೈಲಿ ತಗ್ಲಾಕೊಂಡಿದ್ದಾನೆ. ಹೌದು ಗಂಡ ಎರಡನೇ ಮದುವೆ ಆಗ್ತಿದ್ದಾನೆ ಎಂಬ ವಿಚಾರ ತಿಳಿದು ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟ ಮೊದಲ ಪತ್ನಿ ಹೈ ಡ್ರಾಮವನ್ನೇ ಸೃಷ್ಟಿಸಿ ಮದುವೆಯನ್ನು ನಿಲ್ಲಿಸಿದ್ದಾಳೆ.
ವರದಿಗಳ ಪ್ರಕಾರ, ಮನೋಜ್ ಪಂಡಿತ್ ಎಂಬಾತ ಜಾರ್ಖಂಡ್ ನಿವಾಸಿ ಸೇಖಾ ದೇವಿಯನ್ನು ಪ್ರೀತಿಸಿ ಮದುವೆಯಾಗಿದ್ದನು. ಕೆಲ ಸಮಯಗಳ ಬಳಿಕ ಈ ದಂಪತಿಗಳ ನಡುವೆ ಕೆಲವೊಂದಿಷ್ಟು ಮನಸ್ತಾಪಗಳು ಹುಟ್ಟಿಕೊಂಡವು. ರಾಜಿ ಸಂದಾನದ ಮೂಲಕ ಹಿರಿಯರು ಇದನ್ನು ಸರಿಪಡಿಸಲು ಯತ್ನಿಸಿದರು ಇದು ಸಾಧ್ಯವಾಗಲಿಲ್ಲ. ಕೊನೆಗೆ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ನ್ಯಾಯಾಲಯದಲ್ಲಿ ಇವರಿಬ್ಬರ ಡಿವೋರ್ಸ್ ಪ್ರಕರಣ ನಡೆಯುತ್ತಿರುವಾಗಲೇ ಮನೋಜ್ ತಂದೆ ಬಸುಕಿ ಪಂಡಿತ್ ಮತ್ತು ಕುಟುಂಬ ಸದಸ್ಯರು ಆತನಿಗೆ ಎರಡನೇ ಮದುವೆಯನ್ನು ಏರ್ಪಡಿಸಿದ್ದಾರೆ. ಈ ವಿಷಯ ತಿಳಿದ ಸೇಖಾದೇವಿ ತನ್ನ ತಾಯಿಯೊಂದಿಗೆ ಮದುವೆ ಮನೆಗೆ ನುಗ್ಗಿ ಆಗಬೇಕಿದ್ದ ಮದುವೆಯನ್ನೇ ನಿಲ್ಲಿಸಿದ್ದಾಳೆ.
ಇದನ್ನೂ ಓದಿ: ರತನ್ ಟಾಟಾರಿಂದ ಐಪಿಎಲ್ ವರೆಗೆ ಭಾರತೀಯರು ಈ ವರ್ಷ ಗೂಗಲ್‌ನಲ್ಲಿ ಹೆಚ್ಚು ಹುಡುಕಾಡಿದ ಟಾಪ್ 10 ವಿಷಯಗಳಿವು
ಮನೋಜ್ ಕುಟುಂಬಸ್ಥರು ಮೊದಲನೇ ಮದುವೆಯ ಕಥೆಯನ್ನು ವಧುವಿನ ಕುಟುಂಬಸ್ಥರಿಂದ ಮುಚ್ಚಿಟ್ಟು ಗುಟ್ಟಾಗಿ ಮತ್ತೊಂದು ಮದುವೆ ಮಾಡಲು ಹೊರಟಿದ್ದರು. ಡಿಸೆಂಬರ್ 10 ರಂದು ಮದುವೆ ನಿಶ್ಚಯವಾಗಿತ್ತು. ಅರಶಿನ ಶಾಸ್ತ್ರ, ಮೆಹಂದಿ ಸೇರಿದಂತೆ ವಿವಾಹ ಪೂರ್ವ ವಿಧಿವಿಧಾನಗಳು ನಡೆಯುತ್ತಿರುವಾಗಲೇ ಮದುವೆ ಮನೆಗೆ ಎಂಟ್ರಿ ಕೊಟ್ಟ ಸೇಖಾ ದೇವಿ ದೊಡ್ಡ ರಂಪಾಟವನ್ನೇ ನಡೆಸಿದ್ದಾಳೆ. ಹೀಗೆ ರಂಪಾಟದಲ್ಲಿ ಮನೋಜ್‌ನ ಮೊದಲ ಮದುವೆಯ ವಿಷಯ ತಿಳಿದ ವಧುವಿನ ಮನೆಯವರು ಆಘಾತಕ್ಕೊಳಗಾದರು ಮತ್ತು ಇದು ಇದು ಈತನಿಗೆ ಎರಡನೇ ಮದುವೆಯೆಂದು ತಿಳಿದು ತಕ್ಷಣವೇ ಆಗಬೇಕಿದ್ದ ಮದುವೆಯನ್ನು ರದ್ದುಗೊಳಿಸಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:11 pm, Wed, 11 December 24