ಸಾಲ ಕೊಡಿಸುವುದಾಗಿ ನಂಬಿಸಿ 39 ಸಾವಿರ ರೂ.ಮೌಲ್ಯದ ಚಿಕನ್​ ತಿಂದ ಎಸ್ ಬಿಐ ಮ್ಯಾನೇಜರ್

ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ, ಎಸ್‌ಬಿಐ ಮ್ಯಾನೇಜರ್ ರೂ. 12 ಲಕ್ಷ ಸಾಲ ನೀಡುವುದಾಗಿ ನಂಬಿಸಿ ಕೋಳಿ ಫಾರಂ ಹೊಂದಿದ್ದ ರೈತನನ್ನು ಮೋಸ ಮಾಡಿದ್ದಾರೆ. ಸಾಲಕ್ಕೆ ಬದಲಾಗಿ ಪ್ರತಿದಿನ ಕೋಳಿ ಮಾಂಸ ನೀಡುವಂತೆ ರೈತನನ್ನು ಒತ್ತಾಯಿಸಿ, 39,000 ರೂ. ಮೌಲ್ಯದ ಕೋಳಿ ಮಾಂಸವನ್ನು ಪಡೆದಿದ್ದಾರೆ. ಮೋಸ ತಿಳಿದ ರೈತ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಾಲ ಕೊಡಿಸುವುದಾಗಿ ನಂಬಿಸಿ 39 ಸಾವಿರ ರೂ.ಮೌಲ್ಯದ ಚಿಕನ್​ ತಿಂದ ಎಸ್ ಬಿಐ ಮ್ಯಾನೇಜರ್
ಸಾಂದರ್ಭಿಕ ಚಿತ್ರ
Follow us
ಅಕ್ಷತಾ ವರ್ಕಾಡಿ
|

Updated on:Dec 11, 2024 | 3:35 PM

ಛತ್ತೀಸ್‌ಗಢ: ಕೋಳಿ ಫಾರಂ ಶುರುಮಾಡಲು 12 ಲಕ್ಷ ರೂ. ಸಾಲ ಕೊಡಿಸುವುದಾಗಿ ನಂಬಿಸಿ ಎಸ್ ಬಿಐ ಮ್ಯಾನೇಜರ್ ಮೋಸ ಮಾಡಿರುವ ಘಟನೆ ಛತ್ತೀಸ್‌ಗಢ ರಾಜ್ಯದ ಬಿಲಾಸ್‌ಪುರ ಜಿಲ್ಲೆಯ ಮಸ್ತೂರಿ ಪಟ್ಟಣದಲ್ಲಿ ನಡೆದಿದೆ. ಸಾಲ ಕೊಡಿಸುವ ಭರವಸೆ ನೀಡಿದ್ದ ಮ್ಯಾನೇಜರ್​ಗರೆ ಪ್ರತಿದಿನ ಕೋಳಿ ಮಾಂಸ ತಂದುಕೊಡುತ್ತಿದ್ದ ರೈತನಿಗೆ ಇದೀಗ ಮೋಸದ ಬಗ್ಗೆ ತಿಳಿದಿದ್ದು, ಮ್ಯಾನೇಜರ್ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾನೆ. ಸದ್ಯ ಈ ಘಟನೆ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗಿದೆ.

ವರದಿಗಳ ಪ್ರಕಾರ, ಮಸ್ತೂರಿ ಪಟ್ಟಣದ ರೈತ ರೂಪಚಂದ್ ಮನ್ಹರ್ ಎಂಬಾತ ಕೋಳಿ ಫಾರಂ ಹೊಂದಿದ್ದಾನೆ. ತನ್ನ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸಲು ಬಯಸಿದ ರೈತ ಸ್ಥಳೀಯ ಎಸ್‌ಬಿಐ ಶಾಖೆಯ ವ್ಯವಸ್ಥಾಪಕರನ್ನು ಸಂಪರ್ಕಿಸಿ ರೂ.12 ಲಕ್ಷ ಸಾಲವನ್ನು ಕೇಳಿದ್ದಾನೆ. ಸಾಲ ನೀಡುವುದಾಗಿ ಭರವಸೆ ನೀಡಿದ್ದ ಮ್ಯಾನೇಜರ್ ಪ್ರತೀ ದಿನ ಬ್ಯಾಂಕ್​ಗೆ ಕೋಳಿ ಮಾಂಸ ತಂದುಕೊಡುವಂತೆ ಹೇಳಿದ್ದಾನೆ.

ಇದನ್ನೂ ಓದಿ: Year Ender 2024: ಈ ವರ್ಷ ಗೂಗಲ್​​​ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಹೆಸರು ಯಾರದ್ದು ಗೊತ್ತಾ? ಕ್ರೀಡಾಪಟುಗಳೇ ಮೇಲುಗೈ

ಅದರಂತೆ ಸಾಲ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಮನ್ಹರ್ ಪ್ರತಿದಿನ ಬ್ಯಾಂಕ್ ಮ್ಯಾನೇಜರ್​​ಗೆ ಕೋಳಿ ಮಾಂಸ ತರುತ್ತಿದ್ದ. ಜೊತೆಗೆ ರೈತ ಸಾಲಕ್ಕೆ 10 ಪರ್ಸೆಂಟ್ ಕಮಿಷನ್ ಕೂಡ ನೀಡಿದ್ದರು. ಸಾಲ ಪಡೆಯಲು ಪ್ರತಿ ಶನಿವಾರ ಬೇರೆ ಕಡೆಯಿಂದ ಕೋಳಿ ಖರೀದಿಸುವುದು ರೈತನಿಗೆ ದಿನಚರಿಯಾಗಿತ್ತು. ಹಾಗಾಗಿ 39 ಸಾವಿರ ರೂ. ಮೌಲ್ಯದ ಕೋಳಿ ಮಾಂಸವನ್ನು ಮ್ಯಾನೇಜರ್ ತಿಂದು ಹಾಕಿರುವುದು ತಿಳಿದುಬಂದಿದೆ.

ಆದರೆ, ಬ್ಯಾಂಕ್ ಮ್ಯಾನೇಜರ್ ಸಾಲ ಕೊಡದೆ, ಮೋಸ ಮಾಡಿರುವುದನ್ನು ಮನಗಂಡು ರೈತ ಪೊಲೀಸರಿಗೆ ದೂರು ನೀಡಿದ್ದಾನೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಎಸ್‌ಬಿಐ ಶಾಖೆ ಎದುರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 3:24 pm, Wed, 11 December 24