ಹೆಣ್ಣಿಗೆ ಆಗಿರಲಿ ಅಥವಾ ಗಂಡಿಗೆ ಆಗಿರಲಿ ಯಾರು ಕೂಡಾ ಅವರ ಒಪ್ಪಿಗೆ ಇಲ್ಲದೆ ಅವರಿಗೆ ಬಲವಂತವಾಗಿ ಮದುವೆ ಮಾಡಿಸುವಂತಿಲ್ಲ. ಹೀಗಿದ್ದರೂ ಅಲ್ಲೊಂದು ಇಲ್ಲೊಂದು ಕಡೆ ಬಲವಂತವದ ಮದುವೆಗಳು ನಡೆಯುವ ಪ್ರಸಂಗಗಳು ನಡೆಯುತ್ತಿರುತ್ತವೆ. ಇದೀಗ ಇಲ್ಲೊಂದು ಇಂತಹದ್ದೇ ನಾಚಿಕೆಗೇಡಿನ ಸಂಗತಿ ನಡೆದಿದ್ದು, ನನ್ಗೆ ಇಷ್ಟ ಇಲ್ಲ ಅಂದ್ರೂ ಸರ್ಕಾರಿ ಶಾಲೆಯ ಶಿಕ್ಷಕನಿಗೆ ಬಲವಂತವಾಗಿ ಮದುವೆ ಮಾಡಿಸಿದ್ದಾರೆ. ಹೌದು ಶಾಲೆಗೆ ತೆರಳುತ್ತಿದ್ದ ಆ ಶಿಕ್ಷಕನನ್ನು ಅಪಹರಿಸಿ, ದೇವಸ್ಥಾನಕ್ಕೆ ಕರೆತಂದು ಬಂದೂಕು ತೋರಿಸಿ ಯುವತಿಯ ಕುಟುಂಬಸ್ಥರು ಆತನಿಗೆ ತಮ್ಮ ಮನೆ ಮಗಳೊಂದಿಗೆ ಬಲವಂತವಾಗಿ ಮದುವೆ ಮಾಡಿಸಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಬಿಹಾರದ ಬೇಗುಸರಾಯ್ ಎಂಬಲ್ಲಿ ಈ ಘಟನೆ ನಡೆದಿದ್ದು, ಗಂಡಸರ ಗುಂಪೊಂದು ಸರ್ಕಾರಿ ಶಾಲೆಯ ಶಿಕ್ಷಕನನ್ನು ಅಪಹರಿಸಿ ಆತನಿಗೆ ತಮ್ಮ ಮನೆ ಮಗಳೊಂದಿಗೆ ಬಲವಂತವಾಗಿ ಮದುವೆ ಮಾಡಿಸಿದ್ದಾರೆ. ಅವ್ನಿಶ್ ಎಂಬಾತನಿಗೆ ಇತ್ತೀಚಿಗಷ್ಟೆ ಸರ್ಕಾರಿ ಶಿಕ್ಷಕ ಕೆಲಸ ಸಿಕ್ಕಿದ್ದು, ಆತ ಎಂದಿನಂತೆ ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಎರಡು ಎಸ್‌ಯುವಿ ಕಾರಿನಲ್ಲಿ ಬಂದ ಗಂಡಸರ ಗುಂಪೊಂದು ಆತನನ್ನು ಅಡ್ಡಗಟ್ಟಿ ಅಪಹರಿಸಿ, ಸೀದಾ ಶಿವ ದೇವಾಲಯವೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಆ ಗುಂಪು ಬಂದೂಕು ತೋರಿಸಿ ಶಿಕ್ಷಕನಿಗೆ ಯುವತಿಯೊಬ್ಬಳೊಂದಿಗೆ ಬಲವಂತವಾಗಿ ಮದುವೆ ಮಾಡಿಸಿದ್ದಾರೆ.
ತಾನು ಎಷ್ಟೇ ಬೇಡ ಅಂದ್ರೂ ತನ್ನ ಮೇಲೆ ದೈಹಿಕ ಹಲ್ಲೆ ನಡೆಸಿ ನನಗೆ ಬಲವಂತವಾಗಿ ಮದುವೆ ಮಾಡಿಸಿದ್ದಾರೆ ಎಂದು ಅವ್ನಿಶ್ ಆರೋಪಿಸಿದ್ದಾನೆ. ಈತನ ಹೇಳಿಕೆಗೆ ಪ್ರತ್ಯಾರೋಪ ಮಾಡಿದ ವಧು ಗುಂಜನ್ “ನಾವಿಬ್ಬರು ಸುಮಾರು 4 ವರ್ಷಗಳಿಂದ ಪ್ರೇಮ ಸಂಬಂಧವನ್ನು ಹೊಂದಿದ್ದೆವು, ಅಷ್ಟೇ ಅಲ್ಕದೆ ಆತ ನನ್ನೊಂದಿಗೆ ದೈಹಿಕ ಸಂಬಂಧವನ್ನು ಕೂಡಾ ಹೊಂದಿದ್ದ. ಆದ್ರೆ ಈಗ ಆತ ನನ್ನನ್ನು ಮದುವೆಯಾಗಲ್ಲ ಎಂದು ಹೇಳಿದ್ದು, ಇದಕ್ಕಾಗಿಯೇ ನನ್ನ ಕುಟುಂಬ ಆತನಿಗೆ ನನ್ನೊಂದಿಗೆ ಬಲವಂತವಾಗಿ ಮದುವೆ ಮಾಡಿಸಿದ್ದಾರೆ” ಎಂದು ಹೇಳಿದ್ದಾಳೆ. ಆದರೆ ಮದುವೆಯಾದ ಬಳಿಕ ಆಕೆಯನ್ನು ಅವ್ನಿಶ್ ಕುಟುಂಬದವರು ಸೊಸೆಯಾಗಿ ಸ್ವೀಕರಿಸಲು ನಿರಾಕರಿಸಿದ್ದು, ಇದೀಗ ಗುಂಜನ್ ಪೊಲೀಸರಿಗೆ ದೂರು ನೀಡಿ ನನಗೆ ನ್ಯಾಯ ಕೊಡಿಸಿ ಎಂದು ಕೇಳಿಕೊಂಡಿದ್ದಾಳೆ. ಈ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
TrueStoryUP ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ವಧುವಿನ ಕುಟುಂಬಸ್ಥರು ಸರ್ಕಾರಿ ಶಾಲೆಯ ಶಿಕ್ಷಕನಿಗೆ ಬಲವಂತವಾಗಿ ಮದುವೆ ಮಾಡಿಸಿದ್ದಾರೆ. ನನಗೆ ಈ ಮದುವೆ ಇಷ್ಟ ಇಲ್ಲ ಎಂದು ಜೋರಾಗಿ ಅಳುತ್ತಾ ನಿಂತಿದ್ದ ಆತನಿಗೆ ಹೆದರಿಸಿ ಬೆದರಿಸಿ ಯುವತಿಯ ಕುಟುಂಬದವರು ಮದುವೆ ಮಾಡಿಸಿದ್ದಾರೆ.
ಇದನ್ನೂ ಓದಿ: ಹೆಂಡ್ತಿಯಿಂದ ಮುಕ್ತಿ ಸಿಕ್ಕ ಖುಷಿಗೆ ಗೊಂಬೆಯ ಜೊತೆ ಭರ್ಜರಿ ಡಿವೋರ್ಸ್ ಪಾರ್ಟಿ ಮಾಡಿದ ಪತಿರಾಯ; ವಿಡಿಯೋ ವೈರಲ್
ಡಿಸೆಂಬರ್ 14 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.8 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಹೀಗೆ ಒಪ್ಪಿಗೆಯಿಲ್ಲದೆ ಬಲವಂತವಾಗಿ ಮದುವೆ ಮಾಡಿಸುವುದು ಎಷ್ಟು ಸರಿʼ ಎಂದು ಕಿಡಿ ಕಾರಿದ್ದಾರೆ. ಮತ್ತೊಬ್ಬ ಬಳಕೆದಾರರು ʼ21 ನೇ ಶತಮಾನದಲ್ಲಿಯೂ ಇಂತಹ ನಾಚಿಕೆಗೇಡಿನ ಸಂಗತಿಗಳು ನಡೆಯುತ್ತಿದೆ ಎಂಬುದನ್ನು ನಂಬಲು ಕೂಡಾ ಸಾಧ್ಯವಾಗುತ್ತಿಲ್ಲʼ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ