ಕನ್ನಡ ಮಾತಾನಾಡಲು ಬರದಿದ್ದರೇ ಅಪರಾಧವೇ? ಕನ್ನಡದಲ್ಲಿ ಮಾತನಾಡಲು ಸಾಧ್ಯವಾಗದ ಕಾರಣ ನನ್ನನ್ನು ಕೀಳಾಗಿ ಕಾಣುವುದರ ಜೊತೆಗೆ, ಬೆದರಿಕೆ ಹಾಕುತ್ತಿದ್ದಾರೆ ಎಂದು ಬಿಹಾರದ ವ್ಯಕ್ತಿಯೊರ್ವ ಆರೋಪಿಸಿರುವ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಬೆಂಗಳೂರಿನ ಫುಡ್ ಸ್ಟಾಲ್‌ನಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ವ್ಯಕ್ತಿಯೊಬ್ಬರು ಸ್ಥಳೀಯರಿಂದ ಭಾಷಾ ಆಧರಿತ ಕಿರುಕುಳದ ಬಗ್ಗೆ ದೂರು ನೀಡಿದ್ದು, ಕನ್ನಡದಲ್ಲಿ ಸಂವಹನ ಮಾಡಲು ಸಾಧ್ಯವಾಗದ ಕಾರಣ ನಿಂದಿಸಲಾಗಿದೆ ಮತ್ತು ಕೀಳಾಗಿ ಕಾಣಲಾಗಿದೆ ಜೊತೆಗೆ ಬೆದರಿಕೆ ಹಾಕಲಾಗಿದೆ ಎಂದು ವ್ಯಕ್ತಿ ಆರೋಪಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ವೀಡಿಯೊದಲ್ಲಿ, ವ್ಯಕ್ತಿ ನಾನು ಬಿಹಾರದ ಮುಜಾಫರ್‌ಪುರದಿಂದ ಬಂದು ಬೆಂಗಳೂರಿನಲ್ಲಿ ಫುಡ್ ಸ್ಟಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಸ್ಟಾಲ್‌ಗೆ ಬರುವ ಜನರಲ್ಲಿ ಸಾಕಷ್ಟು ಜನರಿಗೆ ಹಿಂದಿ ಮಾತನಾಡುವವರೆಂದರೆ ಏನೋ ದೊಡ್ಡ ಸಮಸ್ಯೆ. ಅವರು ನಮ್ಮ ಮೇಲೆ ಕರುಣೆ ತೋರಿಸದೆ ನಮ್ಮನ್ನು ನಿಂದಿಸುತ್ತಾರೆ ಮತ್ತು ಕೀಳಾಗಿ ಕಾಣುತ್ತಾರೆ. ಕರ್ನಾಟಕದಲ್ಲಿರುವ ಹಿಂದಿ ಮಾತನಾಡುವ ಜನರಿಗೆ ನ್ಯಾಯ ಒದಗಿಸಬೇಕೆಂದು ನಾನು ಸರ್ಕಾರವನ್ನು ವಿನಂತಿಸುತ್ತೇನೆ ಎಂದು ವಿಡಿಯೋದ ಮೂಲಕ ಹೇಳಿಕೊಂಡಿದ್ದಾನೆ.
Shameful incident of racism coming out from Karnataka. Man of Bihar exposing the xenophobia of locals.
Such mentality must not be accepted in 21st century India. All of India is for all Indians. Very heartbreaking to see such videos. pic.twitter.com/RjNXNK1QCK
— BALA (@erbmjha) April 12, 2023
ಇದನ್ನೂ ಓದಿ: 6 ಪತ್ನಿಯರ ಮುದ್ದಿನ ಗಂಡನಿಗೆ ಮೊದಲ ಮಗು ಯಾರಿಂದ ಪಡೆಯುವುದು ಎಂಬ ಚಿಂತೆಯಂತೆ..!
ಇದಲ್ಲದೇ ಸ್ಥಳೀಯರಿಂದ ತನಗೆ ಕೊಲೆ ಬೆದರಿಕೆ ಕೂಡ ಬಂದಿತ್ತು ಎಂದು ಹೇಳಿಕೊಂಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ಜನರಿಗೆ ಹಿಂದಿ ಮಾತನಾಡುವ ಜನರ ಮೇಲೆ ಯಾಕಿಷ್ಟು ಸಿಟ್ಟು? ಬಿಹಾರಿಯಾಗಿರುವುದು ಅಪರಾಧವೇ? ನಾವು ಈ ದೇಶಕ್ಕೆ ಸೇರಿದವರಲ್ಲವೇ? ನಾನು ಸವಾಲು ಹಾಕುತ್ತೇನೆ, ಈಗ ಬಂದು ನನ್ನನ್ನು ಕೊಲ್ಲಲಿ, ನಾನು ಸಿದ್ಧನಿದ್ದೇನೆ ಎಂದು ವ್ಯಕ್ತಿ ಕಿರುಚುತ್ತಿರುವುದನ್ನು ಕಾಣಬಹುದು.
ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಸುಬ್ರಹ್ಮಣ್ಯನಗರ ಪೊಲೀಸರು ಇದನ್ನು ಭಾಷಾ ಸಮಸ್ಯೆ ಎಂದು ತಳ್ಳಿಹಾಕಲಿಲ್ಲ. ಬಿಹಾರದ ವ್ಯಕ್ತಿಯ ಅಂಗಡಿಗೆ ಬಂದ ಮೂವರು ಹುಡುಗಿಯರು ಕನ್ನಡದಲ್ಲಿ ಮಾತಾನಾಡಿರುವುದರಿಂದ ಅವರು ಏನು ಹೇಳುತ್ತಿದ್ದಾರೆಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ, ಆದರೆ ಆ ವ್ಯಕ್ತಿ ಅದನ್ನು ಭಾಷಾ ಸಮಸ್ಯೆಯಾಗಿ ಪರಿವರ್ತಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: