ಬಿಹಾರ ಮುಜಾಫರ್ಪುರ ಮೂಲದ ಶಿಲ್ಪ ಕಲಾಕಾರ, ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಮೆಯ ಹುಂಡಿಗಳನ್ನು ತಯಾರಿಸಿದ್ದಾರೆ. ಕಳೆದ ವರ್ಷ ಜನತಾ ಕರ್ಫ್ಯೂ ಜಾರಿಯಲ್ಲಿದ್ದಾಗ ಶಿಲ್ಪ ಕಲಾಕಾರರಾದ ಜೈಪ್ರಕಾಶ್ ಅವರಿಗೆ ಈ ಉಪಾಯ ಹೊಳೆಯಿತು. ಹಣ ಸಂಗ್ರಹಿಸುವ ಉದ್ದೇಶದಿಂದ ಈ ಪ್ರತಿಮೆಗಳನ್ನು ತಯಾರಿಸಿದ್ದಾಗಿ ಜೈ ಪ್ರಕಾಶ್ ಹೇಳಿದ್ದಾರೆ.
ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಜೈಪ್ರಕಾಶ್ ಅವರು, ಹಣ ಸಂಗ್ರಹ ಮಾಡುವ ಉದ್ದೇಶದಿಂದ ನಾನು ಈ ಪ್ರತಿಮೆಗಳನ್ನು ತಯಾರಿಸಲು ಬಯಸಿದ್ದೇನೆ. ಇದರಲ್ಲಿ ಒಂದು ರೂಪಾಯಿ ನಾಣ್ಯದಿಂದ ಹಿಡಿದು ನೋಟುಗಳನ್ನು ಸಹ ಸಂಗ್ರಹಿಸಿ ಇಡಬಹುದು. 1 ಲಕ್ಷದವರೆಗೆ ಹಣ ಸಂಗ್ರಹಣೆ ಮಾಡಬಹುದು. ಸಣ್ಣದಾದ ಮನಿ ಬ್ಯಾಂಕ್ಆಗಿ ರೂಪಿಸಲು ಇದನ್ನು ತಯಾರಿಸಿದ್ದೇನೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
Bihar: Muzaffarpur-based sculptor Jai Prakash carved statue of PM Narendra Modi to be used as money storage bank
I got idea of making this when PM announced Janata Curfew last year. He has been making efforts to save country. I decided to make it to save money:He said y’day(1/2) pic.twitter.com/iKTzwUUgLJ
— ANI (@ANI) July 13, 2021
ಕೆಲವು ಪ್ರತಿಮೆಗಳು ಮಾತ್ರ ನನ್ನ ಬಳಿ ಇವೆ. ಇನ್ನು ಮುಂದೆ ಇನ್ನಷ್ಟು ಪ್ರತಿಮೆಗಳನ್ನು ತಯಾರಿಸಿ ಹಣ ಸಂಗ್ರಹಣಾ ಹುಂಡಿಯನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ. ಮೋದಿಯವರಂತೆ ಆಗಲು ಮಕ್ಕಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಶಿಲ್ಪಗಳನ್ನು ಮಾಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ಈ ಕೆಲಸಕ್ಕೆ ಯಾರ ಬಳಿಯಲ್ಲಿಯೂ ಆರ್ಥಿಕ ನೆರವನ್ನು ಪಡೆದಿಲ್ಲ. ಇದವರೆಗೂ ಈ ಶಿಲ್ಪಕಲೆಯಿಂದ ಆರ್ಥಿಕ ಲಾಭವನ್ನು ಪಡೆದಿಲ್ಲ. ಲಾಭ ಪಡೆಯುವ ಉದ್ದೇಶದಿಂದ ನಾನು ಪ್ರತಿಮೆಗಳನ್ನು ತಯಾರಿಸಲು ಮುಂದಾಗಲಿಲ್ಲ. ಈ ಕೆಲಸಕ್ಕೆ ನನಗೆ ಹಣಕಾಸಿನ ಅವಶ್ಯಕತೆ ಇದೆ. ಸಾಲ ಮಾಡಿ ನನ್ನ ಕೆಲಸವನ್ನು ಮುಂದುವರೆಸುತ್ತೆನೆ ಎಂದು ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:
Modi in Varanasi Today: ವಾರಾಣಸಿ ತಲುಪಿದ ಪ್ರಧಾನಿ ಮೋದಿಗೆ ಸಿಎಂ ಯೋಗಿ ಆದಿತ್ಯನಾಥ್ರಿಂದ ಸ್ವಾಗತ
Published On - 1:31 pm, Thu, 15 July 21