
ಕೆಲವರು ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸಿ, ಕೊನೆಗೆ ಟಿಸಿ (Ticket Collector) ಟಿಕೆಟ್ ಚೆಕಿಂಗ್‌ಗೆ ಬಂದಾಗ ಸಿಕ್ಕಿ ಬೀಳುತ್ತಾರೆ. ಕೆಲವರು ತಮ್ಮದು ತಪ್ಪಿದರೂ ಕೂಡ ಟಿಸಿ ಬಳಿ ಜಗಳಕ್ಕೆ ಇಳಿದು ರಂಪಾಟ ಮಾಡುವ ಘಟನೆಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಹೌದು, ಬಿಹಾರದ ಮಹಿಳೆಯೂ ಟಿಕೆಟ್ ಇಲ್ಲದೇ ಎಸಿ ಕೋಚ್‌ನಲ್ಲಿ(AC Coach) ಪ್ರಯಾಣಿಸಿದ್ದು, ಟಿಸಿ ಟಿಕೆಟ್ ಕೇಳಿದಾಗ ಅಧಿಕಾರ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದ ವಿಡಿಯೋ ವೈರಲ್ ಆಗಿತ್ತು. ಆದರೆ ಇದೀಗ ಮಹಿಳೆಯೂ ಟಿಸಿಯ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಹಾಕಿದ ಮತ್ತೊಂದು ವಿಡಿಯೋ ವೈರಲ್ ಆಗಿದ್ದು ಮಹಿಳೆಯ ವರ್ತನೆಯನ್ನು ನೆಟ್ಟಿಗರು ತೀವ್ರವಾಗಿ ಖಂಡಿಸಿದ್ದಾರೆ.
NCMIndia ಕೌನ್ಸಿಲ್ ಫಾರ್ ಮೆನ್ ಅಫೇರ್ಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋಗೆ “ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದಕ್ಕಾಗಿ ಟಿಟಿಇ ಕೈಯಲ್ಲಿ ಸಿಕ್ಕಿಬಿದ್ದ ನಂತರ ಮಹಿಳಾ ಶಿಕ್ಷಕಿ, ತನ್ನ ತಂದೆ ಮತ್ತು ಇತರರೊಂದಿಗೆ ಟಿಟಿಇಗೆ ಬೆದರಿಕೆ ಹಾಕಲು ಪ್ರಯತ್ನಿಸಿದರು” ಎಂದು ವೀಡಿಯೊದ ಶೀರ್ಷಿಕೆಯಲ್ಲಿ ಬರೆಯಲಾಗಿದೆ.
Update:
The lady teacher after being caught by the TTE for travelling without ticket tried to threaten the TTE later along with her father and other people.pic.twitter.com/1IbOaR9ZwT https://t.co/RBBbpZAuJ2— NCMIndia Council For Men Affairs (@NCMIndiaa) October 8, 2025
ಈ ವಿಡಿಯೋದಲ್ಲಿ ಮಹಿಳೆ ಮತ್ತು ಆಕೆಯ ತಂದೆ ಅಧಿಕಾರಿಗಳೊಂದಿಗೆ ತೀವ್ರ ವಾಗ್ವಾದದಲ್ಲಿ ತೊಡಗಿರುವುದನ್ನು ಕಾಣಬಹುದು. ಒಂದು ಹಂತದಲ್ಲಿ, ಮಹಿಳೆ ಟಿಟಿಇಯ “ಶಿರಚ್ಛೇದ” ಮಾಡುವುದಾಗಿ ಬೆದರಿಕೆ ಹಾಕುತ್ತಿರುವುದನ್ನು ಕಾಣಬಹುದು.
Victim Genderpic.twitter.com/CbiKB63sd7
— NCMIndia Council For Men Affairs (@NCMIndiaa) October 7, 2025
ಈ ವಿಡಿಯೋದಲ್ಲಿ ಮಹಿಳೆಯೂ ಎಸಿ ಕೋಚ್‌ನಲ್ಲಿ ಟೆಕೆಟ್ ಇಲ್ಲದೇ ಪ್ರಯಾಣಿಸುತ್ತಿರುವುದನ್ನು ಕಾಣಬಹುದು. ಈ ವೇಳೆ ಆಗಮಿಸಿದ ಟಿಕೆಟ್ ಕಲೆಕ್ಟರ್ ಆಕೆಯ ಬಳಿ ಟಿಕೆಟ್ ಕೇಳಿದ್ದು, ಟಿಸಿಯನ್ನೇ ಗುರುತಿನ ಚೀಟಿ ತೋರಿಸು ಎಂದು ವಾದಿಸಿದ್ದಾಳೆ. ಕೊನೆಗೆ ಟಿಸಿ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದು, ತನ್ನ ತಂದೆಗೆ ಕರೆ ಮಾಡಿ ನಿಲ್ದಾಣಕ್ಕೆ ಬರಲು ಹೇಳಿದ್ದು, ಟಿಸಿ ಮುಂದೆ ತನ್ನ ದರ್ಪ ತೋರಿಸಿರುವುದನ್ನು ನೀವಿಲ್ಲಿ ನೋಡಬಹುದು. ಇಲ್ಲಿ ನಿಂತರೆ ಪ್ರಯೋಜನವಿಲ್ಲವೆಂದು ಕೋಚ್ ನಿಂದ ಬ್ಯಾಗ್ ಎತ್ತಿಕೊಂಡು ಹೋಗುವುದನ್ನು ಕಾಣಬಹುದು.
ಇದನ್ನೂ ಓದಿ:Video: ರೈಲಿನಲ್ಲಿ ಆಧಾರ್ ಕಾರ್ಡ್ ತೋರಿಸಿ ಟಿಕೆಟ್ ಕೊಡಿ ಎಂದ ಅಜ್ಜಿ, ಮುಗ್ಧತೆಗೆ ಸಾಕ್ಷಿಯಾಯ್ತು ಈ ದೃಶ್ಯ
ಅಕ್ಟೋಬರ್ 7 ರಂದು ಶೇರ್ ಮಾಡಲಾದ ಈ ವಿಡಿಯೋ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಒಬ್ಬ ಬಳಕೆದಾರ ಟಿಕೆಟ್ ಇಲ್ಲದೇ ಪ್ರಯಾಣಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದಿದ್ದಾರೆ. ಮತ್ತೊಬ್ಬರು ಶಿಕ್ಷಕಿಯಾಗಿದ್ದು ಈ ರೀತಿ ಮಾಡುವುದು ಸರಿಯೇ, ಇಂತಹ ಶಿಕ್ಷಕರು ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಕರ್ತವ್ಯದಲ್ಲಿದ್ದ ರೈಲ್ವೆ ಅಧಿಕಾರಿಗೆ ಬೆದರಿಕೆ ಹಾಕಿದ್ದಕ್ಕಾಗಿ ಮಹಿಳೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:13 pm, Thu, 9 October 25