ಕೊಚ್ಚಿ: ವೇಗವಾಗಿ ಬೆಳೆಯಿತ್ತಿರುವ ನಗರಗಳಲ್ಲಿ ತ್ವರಿತ ದಿನಸಿ ವಿತರಣಾ ಸಂಸ್ಥೆ (Instant Grocery Delivery App) ಗಳಂತಹ ಬ್ಲಿಂಕ್ಇಟ್ (Blinkit) ಜನರ ಜೀವನವನ್ನು ಸ್ವಲ್ಪ ಮಟ್ಟಿಗಾದರೂ ಸುಲಭಗೊಳಿಸಿದೆ. ಹಾಗಿರುವಾಗ ಬ್ಲಿಂಕ್ಇಟ್ ಗ್ರಾಹಕನೊಬ್ಬ ಹೀಗೊಂದು ಭೀಭತ್ಸಕರ ಘಟನೆಯೊಂದನ್ನು ಎದುರಿಸಬೇಕಾಯಿತು. ತಾನು ಬ್ಲಿಂಕ್ಇಟ್ ನಿಂದ ಆರ್ಡರ್ ಮಾಡಿದ ಬ್ರೆಡ್ ಪ್ಯಾಕೆಟ್ನಲ್ಲಿ ಇಲಿಯನ್ನು ಕಂಡು ಈ ವ್ಯಕ್ತಿ ಆಘಾತಕ್ಕೊಳಗಾಗಿದ್ದರು.
ಕೇರಳದ ಕೊಚ್ಚಿಯಲ್ಲಿ ನಡೆದ ಇಂತಹ ಒಂದು ಅಹಿತಕರ ಘಟೆನಯನ್ನು ನಿತಿನ್ ಅರೋರ (Nitin Arora) ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಮೂಲಕ ಹಚ್ಚಿಕೊಂಡಿದ್ದಾರೆ. ನಿತಿನ್ ಟ್ವಿಟ್ಟರ್ (Twitter) ನಲ್ಲಿ ತಾವು ಬ್ಲಿಂಕ್ಇಟ್ ನಿಂದ ಆರ್ಡರ್ ಮಾಡಿದ ಬ್ರೆಡ್ ಪ್ಯಾಕೆಟ್ನಲ್ಲಿ ಕಂಡ ಸತ್ತ ಇಲಿಯ ಫೋಟೋವನ್ನು ಹಂಚಿಕೊಂಡು ಬೇಸರವನ್ನು ವ್ಯಕ್ತಪಡಿಸಿದ್ದಾರ.
“ಬ್ಲಿಂಕ್ಇಟ್ ನಿಂದ 1/2/23 ರಂದು ಬ್ರೆಡ್ ಪ್ಯಾಕೆಟ್ ಆರ್ಡರ್ ಮಾಡಿದಾಗ ಸತ್ತ ಇಲಿ ಇದ್ದ ಪ್ಯಾಕೆಟ್ ಅನ್ನು ನನಗೆ ನೀಡಿದ್ದರು. ಬ್ಲಿಂಕ್ಇಟ್ ನಿಂದ ನನಗೆ ಅತ್ಯಂತ ಅಹಿತಕರ ಅನುಭವವಾಗಿದೆ. ಇದು ಬಹಳ ಆತಂಕಕಾರಿಯಾಗಿದೆ. 10 ನಿಮಿಷಗಳ ಡೆಲಿವರಿಯಲ್ಲಿ ಇಂತಹ ಸಾಮಾನುಗಳು ಇದ್ದರೆ ನಾನು ನನಗೆ ಬೇಕಾದ ವಸ್ತುಗಳನ್ನು ಕೆಲವು ಗಂಟೆಗಳ ಕಾಲ ಕಾದು ತೆಗೆದುಕೊಳ್ಳುವುದೇ ಒಳ್ಳೆಯದು” ಎಂದು ಟ್ವಿಟ್ಟರ್ನಲ್ಲಿ ಅರೋರಾ ಇಲಿಯ ಚಿತ್ರದ ಜೊತೆಗೆ ಬರೆದುಕೊಂಡಿದ್ದಾರೆ.
ನಿತಿನ್ ಈ ವೀಡಿಯೊವನ್ನು ಹಂಚಿಕೊಂಡ ಕೆಲವು ಕ್ಷಣಗಳಲ್ಲಿ, ಬ್ಲಿಂಕಿಟ್ ಬೆಂಬಲ ಕಾರ್ಯನಿರ್ವಾಹಕ ತಬಿಂದಾ ಕಾಳಜಿಯನ್ನು ವ್ಯಕ್ತಪಡಿಸಿ ನಿತಿನ್ ಅವರಿಗೆ ಆದ ಸಮಸ್ಯೆಗೆ ಕ್ಷಮೆಯಾಚಿಸಿದರು.
Most unpleasant experience with @letsblinkit , where alive rat was delivered inside the bread packet ordered on 1.2.23. This is alarming for all of us. If 10 minutes delivery has such baggage, @blinkitcares I would rather wait for a few hours than take such items.#blinkit #zomato pic.twitter.com/RHNOj6tswA
— Nitin Arora (@NitinA14261863) February 3, 2023
“ನಿಮಗಾದ ಸಮಸ್ಯೆಯನ್ನು ನಾನು ನೋಡಿದ್ದೇನೆ. ನಮ್ಮಿಂದ ನಿಮಗಾದ ಸಮಸ್ಯೆಗಾಗಿ ನಾನು ನಿಮ್ಮಲ್ಲಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ನಾವು ಇದನ್ನು ಗಮನಿಸಿದ್ದೇವೆ. ಈ ನಿರ್ದಿಷ್ಟ ಘಟನೆಗೆ ನಿಮ್ಮ ಪ್ರತಿಕ್ರಿಯೆಯನ್ನು ಗಮನಿಸಿ ಅದನ್ನು ಸುಧಾರಿಸಲು ನಾವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ, ”ಎಂದು ತಬಿಂದಾ ಪ್ರತಿಕ್ರಿಯಿಸಿದರು.
ಧನಂಜಯ್ ಶಶಿಧರನ್ ಬ್ಲಿಂಕ್ಇಟ್ ಕಂಪನಿಯ ಗ್ರಾಹಕರ ಬೆಂಬಲ (Customer Support) ಮುಖ್ಯಸ್ಥ “ಈ ಘಟನೆಗೆ ಸಂಬಂಧಿಸಿದ ನಿರ್ದಿಷ್ಟ ಅಂಗಡಿಯನ್ನು ನಮ್ಮ ಪಟ್ಟಿಯಿಂದ ತೆಗೆದುಹಾಕಲಾಗಿದೆ, ಇನ್ನು ಮುಂದೆ ಈ ಅಂಗಡಿಯವರ ಜೊತೆ ಬ್ಲಿಂಕ್ಇಟ್ ಯಾವುದೇ ವ್ಯವಹಾರವನ್ನು ಇಟ್ಟುಕೊಳ್ಳುವುದಿಲ್ಲ” ಎಂದು ಅರೋರಾ ಟ್ವೀಟ್‌ಗೆ ಉತ್ತರಿಸಿದರು.
ಇದನ್ನೂ ಓದಿ: ದೇವಿ ಪ್ರತ್ಯಂಗಿರಾಳನ್ನು ಚೆನ್ನೈಗೆ ಕರೆತಂದ ಮೇಕಪ್ ಕಲಾವಿದ ದೀಪನ್; ವಿಡಿಯೋ ವೈರಲ್
ಅರೋರಾ ಅವರ ಅನುಭವದಿಂದ ಜನಸಾಮಾನ್ಯರು ಗಾಬರಿಗೊಂಡಿದ್ದಾರೆ ಮತ್ತು ಕಾಮೆಂಟ್ ವಿಭಾಗದಲ್ಲಿ ತಮ್ಮ ಕಳವಳಗಳನ್ನು ಹಂಚಿಕೊಂಡಿದ್ದಾರೆ. ಒಬ್ಬರು “ಪರಿಸ್ಥಿತಿ ಕೈ ಮೀರುವ ಮೊದಲು ಪರಿಹಾರ ಕಂಡುಕೊಳ್ಳಿ ಎಂದು ಬ್ಲಿಂಕ್ಇಟ್ ಗೆ ಕಾಮೆಂಟ್ ಮೂಲಕ ಎಚ್ಚರಿಸಿದರೆ ಮತ್ತೊಬ್ಬರು “ಬ್ಲಿಂಕ್ಇಟ್ ಈ ಘಟನೆ ಯಾಕಾಯಿತು ಎಂಬುದನ್ನು ವಿವರಿಸಬೇಕು. ನಮ್ಮ ಆಹಾರ ಸುರಕ್ಷತಾ ಪ್ರಾಧಿಕಾರವು ಇಂತಹ ಸ್ಥಳಗಳನ್ನು ಕಾಲಕಾಲಕ್ಕೆ ಸುರಕ್ಷತೆಗಾಗಿ ಪರಿಶೀಲಿಸುತ್ತದೆಯೇ?” ಎಂದು ತಮ್ಮ ಕಳವಳವನ್ನು ಹೊರ ಹಾಕಿದರು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:16 am, Sun, 12 February 23