Blinkit :ನಿಮ್ಮ ಶಾಲಾಕಾಲೇಜು ದಿನಗಳನ್ನು ಒಮ್ಮೆ ನೆನಪಿಸಿಕೊಳ್ಳಿ, ಆ ಹತ್ತಿರ ಇದ್ದ ಒಂದೇ ಒಂದು ಝೆರಾಕ್ಸ್ ಅಂಗಡಿ. ಅಲ್ಲಿ ಒಬ್ಬರ ಮೇಲೊಬ್ಬರು ಮುಗಿಬಿದ್ದು ಐವತ್ತು ಪೈಸೆ, ಒಂದು ರೂಪಾಯಿ ನಾಣ್ಯ ಹಿಡಿದುಕೊಂಡು ಒಂದೊಂದು ಪ್ರತಿಗಾಗಿ ಕಾಯುತ್ತಿದ್ದದ್ದು… ಈಗಲೂ ಆ ಝೆರಾಕ್ಸ್ ಕಾಲ ಹಾಗೇ ಇದೆ. ಜೊತೆಗೆ ಪ್ರಿಂಟರ್ ಕಾಲವೂ. ಎರಡೂ ಒಟ್ಟೊಟ್ಟಿಗೇ ಚಲಿಸುತ್ತಿವೆ. ಆದರೆ ಆನ್ಲೈನ್ ಕಲಿಕೆ ಶುರುವಾದಾಗಿನಿಂದ ಪ್ರಿಂಟೌಟ್ಗೆ ಬೇಡಿಕೆ ಹೆಚ್ಛೇ ಆಯಿತು. ಮುಕ್ಕಾಲು ಜನರು ಪ್ರಿಂಟರ್ ಅಂಗಡಿಗೆ ಓಡುವುದು ಅನಿವಾರ್ಯವಾಯಿತು. ಪ್ರಿಂಟೌಟ್ ಕುರಿತಂತೆ ಬ್ಲಿಂಕಿಟ್ ಪರಿಚಯಿಸಿದ ಹೊಸ ವ್ಯವಸ್ಥೆ ಅಚ್ಚರಿ ಮತ್ತು ಆಘಾತಕಾರಿ ಅನ್ನಿಸುವಂತಿದೆ ಎನ್ನುತ್ತಿದ್ದಾರೆ ನೆಟ್ಟಿಗರು. ಹಾಗಾಗಿಯೇ ನೆಟ್ಟಿಗರು ಈ ಹೊಸ ಸೌಲಭ್ಯದ ಬಗ್ಗೆ ಮಿಶ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದಿನಸಿ ಮತ್ತು ನಿತ್ಯಬಳಕೆಯ ಸಾಮಾನುಗಳನ್ನು ವಿತರಿಸುವ ಬ್ಲಿಂಕಿಟ್ ಅಪ್ಲಿಕೇಶನ್ (ಹಳೆಯ ಹೆಸರು ಗ್ರೋಫರ್ಸ್) ಹೊಸ ಪ್ರಿಂಟ್‌ಔಟ್ ಸೌಲಭ್ಯವನ್ನು ಆರಂಭಿಸಿದೆ. ಕಪ್ಪುಬಿಳುಪಿನ ಪ್ರತಿ ಪುಟಕ್ಕೆ ರೂ. 9, ಬಣ್ಣದ ಪುಟಕ್ಕೆ ರೂ.19 ಶುಲ್ಕ ವಿಧಿಸಿದೆ. ಸದ್ಯ ಗುರುಗ್ರಾಮ್‌ನಲ್ಲಿ ಈ ಸೌಲಭ್ಯವನ್ನು ಪ್ರಾರಂಭಿಸಿದೆ. ಪ್ರತಿ ಪ್ರಿಂಟಿಂಗ್ ಆರ್ಡರ್‌ಗೆ ರೂ. 25 ವಿತರಣಾ ಶುಲ್ಕ ಪ್ರತ್ಯೇಕವಾಗಿರುತ್ತದೆ.
Blinkit will give printout at the price of 9rs/page in b/w and 19 rs/page in color and 25 rs delivery charges, me to my xeroxwaala who take only 2 rs/ page #Zomato pic.twitter.com/ShuI10drFA
— Somesh Maliq (@Somesh83maliq) August 19, 2022
ಕೆಲವರು ಈ ನಿರ್ಧಾರವನ್ನು ಸ್ವಾಗತಿಸಿದರೆ, ಇನ್ನೂ ಕೆಲವರು ಬೆಲೆಯ ವಿವರ ನೋಡಿ ಬೆಚ್ಚಿಬಿದ್ದಿದ್ದಾರೆ. ಮುದ್ರಣ ಮಳಿಗೆಗಳಲ್ಲಿ ಎರಡೂ ಬದಿ ಮುದ್ರಣ ವೆಚ್ಚ ಕೇವಲ ರೂ. ಎರಡರಿಂದ ಮೂರು. ಆದರೆ ಬ್ಲಿಂಕಿಟ್ನ ಈ ಯೋಜನೆ ತುಟ್ಟಿಯದ್ದಾಗಿದೆ. ಇದು ವಿಫಲವಾಗುವ ಸಾಧ್ಯತೆ ಇದೆ ಎಂಬ ಚರ್ಚೆ ನೆಟ್ಟಿಗರಲ್ಲಿ ಶುರುವಾಗಿದೆ.
ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮಗೆ ಈ ಸೌಲಭ್ಯ ಸೂಕ್ತವೆನ್ನಿಸಿತೆ?
ಮತ್ತಷ್ಟು ಇಂಥ ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:06 pm, Mon, 22 August 22