Viral Video: ಬಟ್ಟೆ ತೊಳೆಯಲು ದೇಸಿ ವಾಶಿಂಗ್​ ಮಷೀನ್​ ಕಂಡುಹಿಡಿದ ವಿದ್ಯಾರ್ಥಿ! ವಿಡಿಯೋ ಮಿಸ್​ ಮಾಡ್ಕೊಳ್ಬೇಡಿ

ಬಾಲಕ, ದೇಸಿ ಬಟ್ಟೆ ತೊಳೆಯುವ ಯಂತ್ರ ರಚಿಸಲು ಆತ ತನ್ನ ಸೈಕಲ್ಅನ್ನು ಬಳಸಿದ್ದಾನೆ. ಸೈಕಲ್​ನ ಹಿಂಭಾಗದಲ್ಲಿ ದೊಡ್ಡ ಡ್ರಮ್ ಅಳವಡಿಸಿ ಯಂತ್ರವನ್ನು ಜೋಡಿಸಿದನು. ವಿಡಿಯೋ ಇದೆ ನೀವೂ ನೋಡಿ..

Viral Video: ಬಟ್ಟೆ ತೊಳೆಯಲು ದೇಸಿ ವಾಶಿಂಗ್​ ಮಷೀನ್​ ಕಂಡುಹಿಡಿದ ವಿದ್ಯಾರ್ಥಿ! ವಿಡಿಯೋ ಮಿಸ್​ ಮಾಡ್ಕೊಳ್ಬೇಡಿ
ವಿದ್ಯಾರ್ಥಿ ತಯಾರಿಸಿದ ದೇಸಿ ವಾಶಿಂಗ್ ಮಷೀನ್
Edited By:

Updated on: Oct 07, 2021 | 10:03 AM

ಭಾರತದಲ್ಲಿ ಪ್ರತಿಭೆಗೆ ಯಾವುದೇ ಕೊರತೆಯಿಲ್ಲ. ಅವಕಾಶ ನೀಡಿದರೆ ನಮ್ಮ ದೇಶದ ಸೃಜನಶೀಲ ಮತ್ತು ಪ್ರತಿಭಾವಂತರು ಅದ್ಭುತಗಳನ್ನು ಸೃಷ್ಟಿಸುತ್ತಾರೆ. ಇದೀಗ ಬಾಲಕನ ಪ್ರತಿಭೆಯನ್ನು ಬಿಂಬಿಸುವ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ. ಬಾಲಕನ ಪ್ರತಿಭೆಗೆ ಇದೀಗ ಶ್ಲಾಘನೆ ವ್ಯಕ್ತವಾಗಿದೆ.

ಶಾಲೆಯಲ್ಲಿ ನೀಡಿದ್ದ ಯೋಜನೆಯ ಪ್ರಯುಕ್ತ ವಿದ್ಯಾರ್ಥಿಯು ದೇಸಿ ವಾಶಿಂಗ್ ಮಷೀನ್ ತಯಾರಿಸಿದ್ದಾನೆ. ಈ ದೇಸಿ ಬಟ್ಟೆ ತೊಳೆಯುವ ಯಂತ್ರ ರಚಿಸಲು ಆತ ತನ್ನ ಸೈಕಲ್ಅನ್ನು ಬಳಸಿದ್ದಾನೆ. ಸೈಕಲ್​ನ ಹಿಂಭಾಗದಲ್ಲಿ ದೊಡ್ಡ ಡ್ರಮ್ ಅಳವಡಿಸಿ ಯಂತ್ರವನ್ನು ಜೋಡಿಸಿದನು. ಯಂತ್ರ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಬಾಲಕ ಹೇಳುತ್ತಿದ್ದಾನೆ. ಸುತ್ತಲೂ ಆತನ ಸ್ನೇಹಿತರು ನಿಂತಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದು.

ದೇಸಿ ವಾಶಿಂಗ್ ಮಷೀನ್ ಎಂದು ಶೀರ್ಷಿಕೆ ನೀಡುವ ಮೂಲಕ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಅನೇಕರು ಬಾಲಕನ ಪ್ರತಿಭೆಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅದ್ಭುತ ಕೆಲಸ ಎಂದು ಇನ್ನೋರ್ವರು ಹೇಳಿದ್ದಾರೆ. ಕೆಲವರು ಬಾಲಕನ ತಾಳ್ಮೆ, ಶಕ್ತಿ ಮತ್ತು ಆಲೋಚನೆಯನ್ನು ಹೊಗಳಿದ್ದಾರೆ.

ಇದನ್ನೂ ಓದಿ:

Viral Video: ಸ್ವತಃ ತಾನೇ ಬಾಳೆಹಣ್ಣಿನ ಖಾದ್ಯ ತಯಾರಿಸಿ ರುಚಿ ಸವಿದ ಶ್ವಾನ; ವಿಡಿಯೋ ವೈರಲ್

Viral Video: ಚಾಕೊಲೇಟ್​-ಸ್ಟ್ರಾಬೆರಿಯಲ್ಲಿ ಮುಳುಗೆದ್ದ ಸಮೋಸ: ಐಸ್​ಕ್ಯಾಂಡಿ ಇಡ್ಲಿಯ ನಂತರ ಸಮೋಸ ವೈರಲ್